ದರಭಂಗಾ (ಬಿಹಾರ) ಇಲ್ಲಿಯ ಶ್ಯಾಮ ಮಾತೇ ದೇವಸ್ಥಾನದಲ್ಲಿ ಬಲಿ ನೀಡುವುದರ ಕುರಿತು ಹೇರಿದ್ದ ನಿಷೇಧ ಟ್ರಸ್ಟ್ ಕಮೀಟಿಯಿಂದ ಹಿಂಪಡೆ ! 

ನಿಷೇಧದ ವಿರುದ್ಧ ಭಕ್ತರಿಂದ ನಡೆದ ಪ್ರತಿಭಟನೆ ನಡೆದಿತ್ತು

ದರಭಂಗಾ (ಬಿಹಾರ) – ಇಲ್ಲಿಯ ಪ್ರಸಿದ್ಧ ಶ್ಯಾಮಮಾತೇ ದೇವಸ್ಥಾನದಲ್ಲಿ ಬಲಿ ನೀಡುವ ಪದ್ಧತಿಯ ಮೇಲೆ ಹೇರಿದ್ದ ನಿಷೇಧ ಹಿಂಪಡೆಯಲಾಗಿದೆ. ಬಿಹಾರ ರಾಜ್ಯದ ಧಾರ್ಮಿಕ ಟ್ರಸ್ಟ್ ಕಮಿಟಿಯಿಂದ ಈ ನಿಷೇಧ ಹೇರಲಾಗಿತ್ತು. ಅದರ ನಂತರ ಇದಕ್ಕೆ ಭಕ್ತರಿಂದ ತೀವ್ರ ವಿರೋಧ ವ್ಯಕ್ತಪಡಿಸಲಾಗಿತ್ತು. ಆದ್ದರಿಂದ ಈ ಕಮಿಟಿಯಿಂದ ಈ ನಿಷೇಧ ಹಿಂಪಡೆದಿದೆ. ಈ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಸುರೇಂದ್ರ ಮೋಹನ ಝಾ ಇವರು, ಬಲಿ ಪದ್ಧತಿಗೆ ನಾವು ವಿರೋಧಿಸುವುದು ಇಲ್ಲ ಅಥವಾ ಬೆಂಬಲವೂ ನೀಡುವುದಿಲ್ಲ. ಬಲಿ ಪದ್ಧತಿಯಲ್ಲಿ ದೇವಸ್ಥಾನ ಆಡಳಿತದ ಯಾವುದೇ ಪಾತ್ರವಿಲ್ಲ. ವೈಯಕ್ತಿಕ ವ್ಯವಸ್ಥೆ ಮಾಡಿಕೊಂಡು ಜನರು ದೇವಸ್ಥಾನ ಪರಿಸರದಲ್ಲಿ ಬಲಿ ನೀಡಬಹುದು ಎಂದು ಹೇಳಿದ್ದಾರೆ.

೧. ಜಿಲ್ಲಾಧಿಕಾರಿಗಳ ಜೊತೆಗೆ ಸಭೆ ನಡೆಸಿದ ನಂತರ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಟ್ರಸ್ಟ್ ಕಮಿಟಿ ದೇವಸ್ಥಾನ ಪರಿಸರದಲ್ಲಿ ಬಲಿ ನೀಡುವ ಸಂದರ್ಭದಲ್ಲಿನ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಲಿದೆ. ಕಮಿಟಿ ಶಾಂತಿಯಿಂದ ಬಲಿ ನೀಡುವ ಪದ್ಧತಿಯನ್ನು ಮುಂದುವರೆಸಿಕೊಂಡು ಹೋಗುವುದಕ್ಕಾಗಿ ಕಾರ್ಯನಿರ್ವಹಿಸುವುದು. ಬಲಿಗಾಗಿ ಈಗ ಹಣ ಪಡೆಯಲಾಗುವುದಿಲ್ಲ. ತದ್ವಿರುದ್ಧ ಆಡಳಿತದಿಂದ ಸಹಾಯ ಮಾಡಲಾಗುವುದು. ಬಲಿ ನೀಡುವವರು ಅವರ ಜನರ ಜೊತೆಗೆ ಬರುವುದು ಮತ್ತು ಇಲ್ಲಿ ಬಲಿ ನೀಡುವುದು.

೨. ಇನ್ನೊಂದು ಕಡೆ ನಿಷೇಧ ತೆರವುಗೊಳಿಸಿರುವುದರಿಂದ ಕೆಲವು ಸಂಘಟನೆಗಳು ಇದನ್ನು ವಿರೋಧಿಸುತ್ತಿದ್ದಾರೆ. ಅವರ ಪ್ರಕಾರ, ತಂತ್ರ ವಿಧಿಗಾಗಿ ದೇವಸ್ಥಾನ ಪರಿಸರದಲ್ಲಿ ಬಲಿ ನೀಡಲಾಗುತ್ತದೆ. ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು.