Parliament Mimicry : ಪ್ರತಿಪಕ್ಷಗಳ ಕೃತ್ಯಗಳನ್ನು ನಿಷೇಧಿಸಲು ಆಡಳಿತ ಪಕ್ಷದವರಿಂದ ರಾಜ್ಯಸಭೆಯಲ್ಲಿ ಎದ್ದುನಿಂತು ಕಾರ್ಯಕಲಾಪ !

ಸಭಾಪತಿಯವರನ್ನು ಅಣಕಿಸಿರುವ ಪ್ರಕರಣ

ನವದೆಹಲಿ – ರಾಜ್ಯಸಭೆಯಲ್ಲಿ ಆಡಳಿತ ಪಕ್ಷದ ಸಂಸದರು ಎದ್ದು ನಿಂತು ಡಿಸೆಂಬರ್ 20 ರಂದು ತಮ್ಮ ಕಾರ್ಯಕಲಾಪವನ್ನು ನಿರ್ವಹಿಸಿದರು. ಈ ಸಂದರ್ಭದಲ್ಲಿ ಠರಾವನ್ನು ಸಮ್ಮತಿಸಲಾಯಿತು. ಸಂಸತ್ತಿನ ಹೊರಗೆ ತೃಣಮೂಲ ಕಾಂಗ್ರೆಸ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯ ಸಭೆಯ ಸಭಾಪತಿ ಮತ್ತು ಉಪರಾಷ್ಟ್ರಪತಿ ಜಗದೀಪ ಧನಕರ ಇವರ ರಾಜ್ಯ ಅಸೆಂಬ್ಲಿ ಸ್ಪೀಕರ್ ಮತ್ತು ಉಪಾಧ್ಯಕ್ಷ ಅವರನ್ನು ಅಣಕಿಸಿರುವ ಘಟನೆಯ ಬಗ್ಗೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಆಡಳಿತಾರೂಢ ಸಂಸದರು ಕೈಗೊಂಡ ನಿರ್ಣಯದ ಬಳಿಕ ಕೆಲಕಾಲ ಎಲ್ಲ ಸಂಸದರು ತಮ್ಮ ಸ್ಥಾನದಲ್ಲಿಯೇ ಎದ್ದು ನಿಂತು ಕಾರ್ಯಕಲಾಪದಲ್ಲಿ ಪಾಲ್ಗೊಂಡರು. ತದನಂತರ ಸಭಾಪತಿ ಜಗದೀಶ ಧನಕರ ಅವರು ಎಲ್ಲರಿಗೂ ಕುಳಿತುಕೊಳ್ಳುವಂತೆ ಮನವಿ ಮಾಡಿದರು. ಅವರು ಹೇಳಿದರು, ನೀವು ನನ್ನ ಗೌರವಕ್ಕಾಗಿ ಮಾಡಿರುವ ಕೃತ್ಯದಿಂದ ನನ್ನ ಮನಸ್ಸುತುಂಬಿ ಬಂದಿದೆ. ನಾನು ಯಾರೋ ಒಬ್ಬರನ್ನೇ ಪ್ರತಿನಿಧಿಸುವುದಿಲ್ಲ. ನಾನು ಸಂವಿಧಾನದ ಹುದ್ದೆಯಲ್ಲಿ ಕುಳಿತಿದ್ದು, ಸಂವಿಧಾನ ನೀಡಿರುವ ಜವಾಬ್ದಾರಿಯನ್ನು ನಾನು ನಿರ್ವಹಿಸಬೇಕಾಗಿದೆ. ಆದುದರಿಂದ ಎಲ್ಲ ಸದಸ್ಯರನ್ನು ಕುಳಿತುಕೊಳ್ಳುವಂತೆ ನಾನು ವಿನಂತಿಸುತ್ತೇನೆ. ಮತ್ತು ಕಾರ್ಯಕಲಾಪವನ್ನು ಮುಂದುವರಿಸಬೇಕು ಎಂದು ನಿರ್ದೇಶಿಸುತ್ತೇನೆ ಎಂದು ಹೇಳಿದರು.

ಸಭಾಪತಿಯವರನ್ನು ಅಣಕಿಸಿರುವ ಘಟನೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಮಂತ್ರಿ ನರೇಂದ್ರಮೋದಿ ಮತ್ತು ಲೋಕಸಭೆಯ ಸಭಾಧ್ಯಕ್ಷರಾದ ಓಂ ಬಿರ್ಲಾ ಇವರು `ಎಕ್ಸ್’ ಮೇಲೆ ನಿಷೇಧವನ್ನು ವ್ಯಕ್ತಪಡಿಸಿದ್ದಾರೆ. (ಖಂಡಿಸಿದ್ದಾರೆ)