ಬದಾಯು (ಉತ್ತರ ಪ್ರದೇಶ)ದ ಜಾಮಾ ಮಸೀದಿಯಲ್ಲಿ ಪೂಜೆ ಸಲ್ಲಿಸಲು ಅರ್ಜಿಯ ವಿಚಾರಣೆ ನಡೆಯಲಿದೆ

ನೀಲಕಂಠ ದೇವಾಲಯವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಲಾಗಿತ್ತು !

ಲಕ್ಷ್ಮಣಪುರಿ – ಆಗಸ್ಟ್ 2022 ರಲ್ಲಿ, ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಮುಖೇಶ ಪಟೇಲ್ ಅವರು ಜಾಮಾ ಮಸೀದಿ ಶಾಮ್ಸಯಲ್ಲಿ ಪೂಜೆ ಮಾಡಲು ಅನುಮತಿ ನೀಡುವಂತೆ ಮತ್ತು ಪುರಾತತ್ವ ಇಲಾಖೆಯಿಂದ ಮಸೀದಿಯ ಸಮೀಕ್ಷೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಜಾಮಾ ಮಸೀದಿ ಶಮ್ಸಿಯಲ್ಲಿ ನೀಲಕಂಠನ ದೇವಸ್ಥಾನವಿತ್ತು. ಕುತುಬುದ್ದೀನ್ ಐಬಕ್ ನ ಅಳಿಯ ಇಲ್ತುತಮಿಶ್ ದೇವಸ್ಥಾನವನ್ನು ಕೆಡವಿ ಅಲ್ಲಿ ಮಸೀದಿ ನಿರ್ಮಿಸಿದ ಎಂದು ಪಟೇಲ್ ಅರ್ಜಿಯಲ್ಲಿ ಹೇಳಿದ್ದರು. ಆದ್ದರಿಂದ ಈ ಮಸೀದಿಯಲ್ಲಿ ಪೂಜೆ ಸಲ್ಲಿಸುವಂತೆ ಒತ್ತಾಯಿಸಿದ್ದರು. ಹಿಂದೂ ಮಹಾಸಭಾ ಮಸೀದಿಯ ಸ್ಥಳದಲ್ಲಿ ದೇವಾಲಯವಿದ್ದ ಬಗ್ಗೆ ಹಲವಾರು ಪುರಾವೆಗಳನ್ನು ಪ್ರಸ್ತುತಪಡಿಸಿದೆ. ಈ ಪ್ರಕರಣದ ವಿಚಾರಣೆಯು ಜನವರಿ 6, 2024 ರಂದು ನಡೆಯಲಿದೆ.
ಈ ಸಂದರ್ಭದಲ್ಲಿ ಜಾಮಾ ಮಸೀದಿಯ ಪರವಾಗಿ ‘ಜಾಮಾ ಮಸೀದಿ ಇಂತಾಜಾಮಿಯಾ ಕಮಿಟಿ’, ಜಿಲ್ಲಾಡಳಿತ, ವಕ್ಫ್ ಮಂಡಳಿ, ಪುರಾತತ್ವ ಇಲಾಖೆ ಇವು ನ್ಯಾಯಾಲಯದ ಮುಂದೆ ತಮ್ಮ ಅಭಿಪ್ರಾಯ ಮಂಡಿಸಿವೆ. ಈ ಅರ್ಜಿಯನ್ನು ಹಿಂಪಡೆಯುವಂತೆ ಜಾಮಾ ಮಸೀದಿ ಆಡಳಿತ ಮಂಡಳಿ ಆಗ್ರಹಿಸಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಹೆಚ್ಚಿನ ಮಸೀದಿಗಳನ್ನು ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ. ಹಿಂದೂಗಳು ಈ ದೇವಾಲಯಗಳನ್ನು ಕಾನೂನುಬದ್ಧ ವಿಧಾನಗಳ ಮೂಲಕ ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಸರಕಾರ ಇದನ್ನು ಗಮನಿಸಬೇಕು ಮತ್ತು ಭಾರತದಲ್ಲಿನ ಅಂತಹ ಎಲ್ಲಾ ದೇವಾಲಯಗಳನ್ನು ಪಟ್ಟಿ ಮಾಡಿ ಅವುಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಹಿಂದೂಗಳು ನಿರೀಕ್ಷಿಸುತ್ತಾರೆ !