ಬದಾಯೂಂ (ಉತ್ತರ ಪ್ರದೇಶ) ಇಲ್ಲಿನ ಗೋಕಳ್ಳಸಾಗಣೆದಾರ ಮೊಹಮ್ಮದ ಆಲಂನಿಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಮನವಿ

  • ಯೋಗಿ ಬಾಬಾ ನನ್ನನ್ನು ಕಾಪಾಡಿ ನಾನು ಎಂದಿಗೂ ಗೋವು ಕಳ್ಳಸಾಗಣೆಯನ್ನು ಮಾಡುವುದಿಲ್ಲ ! – ಗೋಕಳ್ಳಸಾಗಣೆದಾರ ಮೊಹಮ್ಮದ ಆಲಂ

  • ಪೊಲೀಸರ ಎದುರಿಗೆ ಶರಣಾಗತಿ !

ಸೌಜನ್ಯ : ZEE News

ಬದಾಯೂಂ (ಉತ್ತರ ಪ್ರದೇಶ) – ಗೋ ಕಳ್ಳಸಾಗಣೆ ಮತ್ತು ಇತರ ಹಲವು ಅಪರಾಧಗಳಲ್ಲಿ ಪರಾರಿಯಾಗಿದ್ದ ಮಹಮ್ಮದ ಆಲಂ ಪೊಲೀಸರಿಗೆ ಶರಣಾದನು. ಈ ಸಂದರ್ಭದಲ್ಲಿ ಅವನು ಕುತ್ತಿಗೆಯಲ್ಲಿ ಒಂದು ಫಲಕವನ್ನು ಹಾಕಿಕೊಂಡಿದ್ದನು. ಫಲಕದ ಮೇಲೆ `ನಾನು ಮಹಮ್ಮದ ಆಲಂ ಪುತ್ರ ನೂರ ಮಹಮ್ಮದ, ಖೈರಪೂರ ಖೈರಾತಿ ಠಾಣೆ ನಿವಾಸಿ, ಸಹಸವಾನ, ಬದಾಯೂಂ ! ನಾನು ಪೊಲೀಸರಿಗೆ ಶರಣಾಗುತ್ತಿದ್ದೇನೆ. ಇನ್ನುಮುಂದೆ ಎಂದಿಗೂ ಗೋಕಳ್ಳಸಾಗಣೆ ಮಾಡುವುದಿಲ್ಲ, ಯೋಗಿ ಬಾಬಾ ನನ್ನನ್ನು ರಕ್ಷಿಸಬೇಕು.” ಎಂದು ಬರೆದಿರುವ ಛಾಯಾಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದೆ. ಪೊಲೀಸರು ಮಹಮ್ಮದ್ ಆಲಂನನ್ನು ಹುಡುಕುತ್ತಿದ್ದರು. ಅವನ ಗುಂಪಿನಲ್ಲಿ ಒಟ್ಟು 5 ಜನರು ಇದ್ದರು, ಉಳಿದ ನಾಲ್ವರನ್ನು ಪೊಲೀಸರು ಈ ಮೊದಲೇ ಬಂಧಿಸಿದ್ದರು. ಆಲಂನನ್ನು ಹುಡುಕಲು ಪೊಲೀಸರು ಅವನ ಮನೆಯ ಮೇಲೆಯೂ ದಾಳಿ ನಡೆಸಿದ್ದರು. ಅದರಿಂದಾಗಿ ಹೆದರಿದ ಆಲಂ ಪೊಲೀಸರ ಎದುರಿಗೆ ಶರಣಾಗತಿಯನ್ನು ಸ್ವೀಕರಿಸಿದನು.