|
ಕೋಲಕಾತಾ (ಬಂಗಾಳ) – ನ್ಯಾಯಾಂಗ ನಿಂದನೆ ಆರೋಪದ ಮೇಲೆ ವಕೀಲ ಪ್ರೊಸೆನಜಿತ್ ಮುಖರ್ಜಿ ಅವರನ್ನು ಬಂಧಿಸುವಂತೆ ಕಲಕಾತಾ ಹೈಕೋರ್ಟ್ ನ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಆದೇಶಿಸಿದರು. ಇದಕ್ಕೆ ಬಾರ್ ಅಸೊಸಿಯೇಶನ್ ಆಕ್ಷೇಪ ವ್ಯಕ್ತಪಡಿಸಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ಎಲ್ಲಾ ನ್ಯಾಯಾಂಗ ಕಾರ್ಯಗಳನ್ನು ಹಿಂಪಡೆಯಬೇಕು ಎಂದು ಮುಖ್ಯ ನ್ಯಾಯಾಧೀಶ ಟಿ.ಎಸ್. ಶಿವಗಣನಂ ಒತ್ತಾಯಿಸಿದರು. ಈ ವೇಳೆ ವಕೀಲರು, ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರು ನ್ಯಾಯಾಲಯದಲ್ಲಿದ್ದಾಗ ನಮ್ಮ ಸಂಘಟನೆಯ ಯಾವೊಬ್ಬ ಸದಸ್ಯನೂ ನ್ಯಾಯಾಲಯದ ಮೆಟ್ಟಿಲೇರುವುದಿಲ್ಲ. ಅವರು ವಕೀಲ ಮುಖರ್ಜಿ ಅವರ ಕ್ಷಮೆ ಕೇಳಬೇಕು.
ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಡಿಸೆಂಬರ್ 18 ರಂದು ‘ಪಶ್ಚಿಮ ಬಂಗಾಳ ಮದರಸಾ ಸೇವಾ ಆಯೋಗ’ಕ್ಕೆ ಸಂಬಂಧಿಸಿದ ಪ್ರಕರಣವನ್ನು ವಿಚಾರಣೆ ನಡೆಸುತ್ತಿದ್ದರು. ಆಗ ವಕೀಲ ಪ್ರೊಸೆನಜಿತ್ ಮುಖರ್ಜಿ ಹಾಜರಾಗಿದ್ದರು. ಅವರ ನಡವಳಿಕೆ ಅನುಚಿತವಾಗಿದೆ ಎಂದು ಆರೋಪಿಸಿ ನ್ಯಾಯಾಧೀಶರು ಅವರನ್ನು ಬಂಧಿಸಲು ಆದೇಶಿಸಿದರು. ವಕೀಲ ಮುಖರ್ಜಿ ಕ್ಷಮೆಯಾಚಿಸಿದರೂ ನ್ಯಾಯಾಧೀಶರು ತಮ್ಮ ಆದೇಶವನ್ನು ಹಿಂಪಡೆಯಲಿಲ್ಲ.
ವಕೀಲ ಮುಖರ್ಜಿ ನಂತರ ನ್ಯಾಯಮೂರ್ತಿ ಹರೀಶ್ ಟಂಡನ್ ಮತ್ತು ನ್ಯಾಯಮೂರ್ತಿ ಹಿರಣ್ಮಯ್ ಭಟ್ಟಾಚಾರ್ಯ ಅವರ ವಿಭಾಗೀಯ ಪೀಠದಿಂದ ನ್ಯಾಯವನ್ನು ಕೋರಿದರು. ನಂತರ ಅವರು ನ್ಯಾಯಮೂರ್ತಿ ಗಂಗೋಪಾಧ್ಯಾಯ ಅವರ ನಿರ್ಧಾರಕ್ಕೆ ತಡೆ ನೀಡಿದರು.