ಹಿಂದೂ ಪಕ್ಷದ ಅರ್ಜಿ ವಿಚಾರಣೆಗೆ ಅರ್ಹ ! – ಅಲಾಹಾಬಾದ್ ಉಚ್ಚ ನ್ಯಾಯಾಲಯ
ಪ್ರಯಾಗರಾಜ್ (ಉತ್ತರ ಪ್ರದೇಶ) – ಜ್ಞಾನವಾಪಿ ಪ್ರಕರಣದ ವಿಚಾರಣೆಯ ನಂತರ ಅಲಹಾಬಾದ್ ಹೈಕೋರ್ಟ್ ಡಿಸೆಂಬರ್ 8 ರಂದು ಕಾಯ್ದಿರಿಸಿದ ನಿರ್ಧಾರವನ್ನು ಡಿಸೆಂಬರ್ 19 ರಂದು ಪ್ರಕಟಿಸಿತು. ಮುಸ್ಲಿಂ ಪಕ್ಷದ ಎಲ್ಲಾ ಅರ್ಜಿಗಳನ್ನು ತಿರಸ್ಕರಿಸಿದೆ. ಹಾಗೂ ಹಿಂದೂ ಪಕ್ಷದ ಅರ್ಜಿ ವಿಚಾರಣೆಗೆ ಅರ್ಹವಾಗಿದೆ ಎಂದು ಹೇಳಿದೆ. ನ್ಯಾಯಮೂರ್ತಿ ರೋಹಿತ ರಂಜನ ಅಗ್ರವಾಲ್ ನೇತೃತ್ವದ ವಿಭಾಗೀಯ ಪೀಠವು ಜ್ಞಾನವಾಪಿ ಮಾಲೀಕತ್ವಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ಪ್ರಶ್ನಿಸಿ ಅಂಜುಮನ್ ಇಂತೇಜಾಮಿಯಾ ಮಸೀದಿ ಸಮಿತಿಯ ಅರ್ಜಿಗಳನ್ನು ವಜಾಗೊಳಿಸಿದೆ. ನ್ಯಾಯಾಲಯವು, ‘ಅರ್ಜಿಯ ಫಲಿತಾಂಶವು ದೇಶದ ಎರಡು ಪ್ರಮುಖ ಸಮುದಾಯಗಳ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದೆ. ಅರ್ಜಿಯನ್ನು 6 ತಿಂಗಳೊಳಗೆ ತ್ವರಿತವಾಗಿ ತೀರ್ಮಾನಿಸುವಂತೆ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ನಿರ್ದೇಶನ ನೀಡುತ್ತೇವೆ’ ಎಂದರು.
ಒಂದು ಅರ್ಜಿಯಲ್ಲಿ ನಡೆಸಲಾದ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಇತರ ಅರ್ಜಿಗಳಲ್ಲಿ ನಮೂದಿಸಲಾಗುವುದು ಮತ್ತು ಜ್ಞಾನವಾಪಿಯ ಯಾವುದೇ ಭಾಗವನ್ನು ಸಮೀಕ್ಷೆ ಮಾಡಬೇಕೆಂದು ಜಿಲ್ಲಾ ನ್ಯಾಯಾಲಯವು ಭಾವಿಸಿದರೆ, ಸಮೀಕ್ಷೆ ನಡೆಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶಿಸಬಹುದು ಎಂದು ಹೈಕೋರ್ಟ್ ಹೇಳಿದೆ.
ಮುಸ್ಲಿಂ ಪಕ್ಷದ ಮನವಿಯಲ್ಲಿ ಈ ಬೇಡಿಕೆಗಳಿದ್ದವು !
ಅಂಜುಮನ್ ಇಂತೇಜಾಮಿಯಾ ಮಸೀದಿ ಕಮಿಟಿ ಮತ್ತು ಉತ್ತರ ಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ 2021 ರ ಏಪ್ರಿಲ್ 8 ರಂದು ಜ್ಞಾನವಾಪಿ ಸಮೀಕ್ಷೆ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿತ್ತು. ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಈಗ ಮುಸ್ಲಿಂ ಪಕ್ಷ ಸುಪ್ರೀಂ ಕೋರ್ಟ್‌ಗೆ ಹೋಗಬಹುದು.
ಹಿಂದೂ ಪಕ್ಷದ ಪ್ರಕಾರ, ಜ್ಞಾನವಾಪಿ ಮಸೀದಿಯು ದೇವಾಲಯದ ಒಂದು ಭಾಗವಾಗಿದೆ. 1991 ರ ‘ಪೂಜಾ ಸ್ಥಳ ಕಾಯ್ದೆ’ ಅಡಿಯಲ್ಲಿ ಹಿಂದೂ ಪಕ್ಷದ ಅರ್ಜಿಯು ಅಸಂವಿಧಾನಿಕವಾಗಿದೆ ಎಂದು ಮುಸ್ಲಿಂ ಪಕ್ಷ ಹೇಳುತ್ತದೆ.
ಹಿಂದೂ ಪಕ್ಷದ ವಕೀಲರು ಹೇಳಿದ್ದೇನು ?
ಹಿಂದೂ ಪಕ್ಷದ ವಕೀಲ ವಿಜಯ್ ಶಂಕರ್ ರಸ್ತೋಗಿ ಇವರು, ಆಗಸ್ಟ್ 15, 1947 ರಂದು ‘ಆ ಸಂಕೀರ್ಣದ ಧಾರ್ಮಿಕ ಸ್ಥಾನಮಾನ ಏನು’ ಎಂಬುದಕ್ಕೆ ಸಾಕ್ಷ್ಯವನ್ನು ತೆಗೆದುಕೊಳ್ಳುವಂತೆ ವಾರಣಾಸಿ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿದೆ ಎಂದು ಹೇಳಿದರು. ಈ ಪ್ರಕರಣದ ಫಲಿತಾಂಶವನ್ನು 6 ತಿಂಗಳೊಳಗೆ ನೀಡಬೇಕು ಎಂದೂ ಹೇಳಲಾಗಿದೆ. ಸರ್ವೆಗೆ ನ್ಯಾಯಾಲಯ ನೀಡಿರುವ ಆದೇಶವನ್ನೇ ಮುಂದುವರಿಸಬೇಕು ಎಂದೂ ಹೇಳಲಾಗಿದೆ. ಆ ಆದೇಶದ ಪ್ರಕಾರ, ಭಾರತೀಯ ಪುರಾತತ್ವ ಇಲಾಖೆ ಸಿದ್ಧಪಡಿಸಿದ ವರದಿಯನ್ನು ಹೈಕೋರ್ಟ್‌ನಲ್ಲಿ ಪರಿಗಣಿಸಲಾಗುವುದು.
ವಕೀಲ ರಸ್ತೋಗಿ ಅವರು, ‘ಮುಸ್ಲಿಂ ಪಕ್ಷವು ಹೈಕೋರ್ಟ್‌ನಲ್ಲಿ 5 ಅರ್ಜಿಗಳನ್ನು ಸಲ್ಲಿಸಿತ್ತು. ಇವೆಲ್ಲವನ್ನೂ ನ್ಯಾಯಾಲಯ ತಿರಸ್ಕರಿಸಿದೆ. 1991 ರಲ್ಲಿ ಹಿಂದೂ ಪಕ್ಷವು ಸಲ್ಲಿಸಿದ್ದ ಎರಡು ಅರ್ಜಿಗಳು ಯೋಗ್ಯವಲ್ಲ ಎಂದು ಸಲ್ಲಿಸಿದ್ದ ಅರ್ಜಿಗಳಲ್ಲಿ 2 ಅರ್ಜಿ ಒಳಗೊಂಡಿದೆ. ಅದರ ವಿಚಾರಣೆ ನಡೆಸುವಂತೆ ವಾರಣಾಸಿ ನ್ಯಾಯಾಲಯಕ್ಕೆ ಹೈಕೋರ್ಟ್ ಆದೇಶಿಸಿದೆ. ನ್ಯಾಯಾಲಯದಲ್ಲಿ (ಪ್ರಕರಣ ಸಂಖ್ಯೆ 610) ಒಂದು ಅರ್ಜಿ ಇದೆ, ಇದಕ್ಕೆ ಪೂಜಾ ಸ್ಥಳಗಳ ಕಾಯಿದೆ ಅನ್ವಯಿಸುವುದಿಲ್ಲ. 2021 ರಲ್ಲಿ ಜ್ಞಾನವಾಪಿ ಪುರಾತತ್ವ ಸಮೀಕ್ಷೆಯನ್ನು ಪ್ರಶ್ನಿಸಿ ಮುಸ್ಲಿಂ ಪಕ್ಷದ ಇತರ 3 ಅರ್ಜಿಗಳು ವಾರಣಾಸಿ ನ್ಯಾಯಾಲಯದಲ್ಲಿವೆ.
ಸಂಪಾದಕೀಯ ನಿಲುವುಮೊದಲು ಅಯೋಧ್ಯೆ ಮತ್ತು ಈಗ ಜ್ಞಾನವಾಪಿ; ಪ್ರತಿ ಬಾರಿಯೂ ಪ್ರತಿ ನ್ಯಾಯಾಲಯದಲ್ಲಿ ಮುಸ್ಲಿಂ ಪಕ್ಷವು ಸೋಲುತ್ತಿದೆ. ನಿಜವಾದ ಇತಿಹಾಸವನ್ನು ನೋಡಿದರೆ ಅಯೋಧ್ಯೆಯಂತೆಯೇ ಇದರ ಫಲಿತಾಂಶವೂ ಹಿಂದೂಗಳ ಪರವಾಗಿಯೇ ಇರುತ್ತದೆ. ಆದುದರಿಂದ ಮುಸಲ್ಮಾನರು ಸತ್ಯವನ್ನು ಒಪ್ಪಿಕೊಂಡು ಈಗಲೇ ಹಿಂಪಡೆಯಬೇಕು, ಇಲ್ಲವಾದಲ್ಲಿ ಜ್ಞಾನವಾಪಿ ಅಷ್ಟೇ ಅಲ್ಲ ಮಥುರಾದಲ್ಲಾಗಲಿ ಅಥವಾ ಇನ್ಯಾವುದೇ ಪ್ರಕರಣದಲ್ಲಾಗಲಿ ಮುಸ್ಲಿಂ ಪಕ್ಷಕ್ಕೆ ನ್ಯಾಯಾಲಯದಲ್ಲಿ ನಿರಂತರ ಸೋಲುಂಟಾಗುವುದು ಖಚಿತ ! |