ಮಾಲೆಗಾಂವ್‌ನಲ್ಲಿ ವಿದ್ಯಾರ್ಥಿಗಳ ಮತಾಂತರ ಯತ್ನದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ! – ಶಾಸಕ ರಾಹುಲ ಢಿಕಲೆ, ಬಿಜೆಪಿ

ನಾಗ್ಪುರ, ಡಿಸೆಂಬರ್ 19 (ಸುದ್ದಿ.) – ನಾಸಿಕ್ ನ ಮಾಲೆಗಾಂವ್ ನಿಂದ ಎಂ.ಎಸ್.ಜಿ. ಕಾಲೇಜಿನಲ್ಲಿ ‘ಕರಿಯರ್’ ಮಾರ್ಗದರ್ಶನದ ಹೆಸರಿನಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಒಂದು ನಿರ್ದಿಷ್ಟ ಧರ್ಮದ ಮಾಹಿತಿ ನೀಡಿ ಮತಾಂತರ ಮಾಡುವ ಪ್ರಯತ್ನ ನಡೆದಿದೆ. ನಾಸಿಕ್‌ನ ಬಿಜೆಪಿ ಶಾಸಕ ರಾಹುಲ್ ಧಿಕ್ಲೆ ಅವರು ಡಿಸೆಂಬರ್ 19 ರಂದು ವಿಧಾನಸಭೆಯಲ್ಲಿ ಈ ರೀತಿಯ ವಿಷಯದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದರು.

ಎಂ.ಎಸ್.ಜಿ. ಕಾಲೇಜಿನಲ್ಲಿ 10 ಮತ್ತು 12 ನೇ ತರಗತಿಯ ವಿದ್ಯಾರ್ಥಿಗಳಿಗೆ ‘ಕರಿಯರ್’ ಮಾರ್ಗದಶ್ನದ ಹೆಸರಿನಲ್ಲಿ ಜೂನ್ 11ರಂದು ಹಿಂದೂ ವಿದ್ಯಾರ್ಥಿಗಳನ್ನು ಮತಾಂತರಿಸುವ ಪ್ರಯತ್ನ ಮಾಡಲಾಯಿತು. ಈ ಬಾರಿ ಮಾರ್ಗದರ್ಶನಕ್ಕೆ ಬಂದಿದ್ದ ಪುಣೆಯ ‘ಡಿಫೆನ್ಸ್ ಕರಿಯರ್ ಇನ್‌ಸ್ಟಿಟ್ಯೂಟ್’ನ ಅನಿಲ ಗಟ್ಟಿ ಅವರು ಮಾರ್ಗದರ್ಶನ ನೀಡುವಾಗ ಧಾರ್ನಿಕ ಬಿರಿಕು ಉಂಟಾಂಗುವಂತೆ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಮಕ್ಕಳ ಹಕ್ಕು ಆಯೋಗ ಅನಿಲ್ ಗಟ್ಟಿ ಅವರಿಗೆ ನೋಟಿಸ್ ಕಳುಹಿಸಿದೆ. ಇದನ್ನು ವಿರೋಧಿಸಿ ಜುಲೈ 2 ರಂದು ಹಿಂದೂ ಜನಾಕ್ರೋಶ ಮೋರ್ಚಾವನ್ನು ಆಯೋಜಿಸಲಾಗಿದೆ; ಆದರೆ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಹುಲ್ ಢಿಕಲೆ ಇವರು ವಿಧಾನಸಭೆಗೆ ತಿಳಿಸಿದರು.