ಕರ್ಣಾವತಿ/ಅಯೋಧ್ಯೆ – ಅಯೋಧ್ಯೆಯ ಶ್ರೀ ರಾಮನ ದೇವಸ್ಥಾನದ ಪ್ರತ್ಯಕ್ಷ ಪ್ರಾಣಪ್ರತಿಷ್ಠೆಯ ಕಾರ್ಯಕ್ರಮಕ್ಕೆ ಈಗ ಕೇವಲ ಒಂದು ತಿಂಗಳು ಮಾತ್ರ ಬಾಕಿ ಉಳಿದಿದೆ, ಎಲ್ಲೆಡೆ ಅತ್ಯುತ್ಸಾಹದ ವಾತಾವರಣ ಕಂಡು ಬರುತ್ತಿದೆ. ಇಂತಹದರಲ್ಲಿ ಜನೇವರಿ 22, 2024 ರಂದು ದೇವಸ್ಥಾನದಲ್ಲಿ ಅಭಿಷೇಕವಾದ ಬಳಿಕ ಅಲ್ಲಿ ಶ್ರೀರಾಮನ ಚರಣ ಪಾದುಕೆಗಳನ್ನು ಸ್ಥಾಪಿಸಲಾಗುವುದು. ಈ ಚರಣ ಪಾದುಕೆಗಳು 1 ಕೆ.ಜಿ. ಬಂಗಾರ ಮತ್ತು 7 ಕೆ.ಜಿ. ಬೆಳ್ಳಿಯಿಂದ ತಯಾರಿಸಲಾಗಿದೆ.
ಭಾಗ್ಯನಗರದ ಶ್ರೀಚಲ ಶ್ರೀನಿವಾಸ ಶಾಸ್ತ್ರಿ ಅವರು ಈ ಚರಣಪಾದುಕೆಗಳನ್ನು ತಯಾರಿಸಿದ್ದು, ಸದ್ಯಕ್ಕೆ ಈ ಪಾದುಕೆಗಳನ್ನು ದೇಶಾದ್ಯಂತೆ ಮೆರವಣಿಗೆ ಮಾಡಲಾಗುತ್ತಿದೆ. ಡಿಸೆಂಬರ 17,ರಂದು ಅದು ರಾಮೇಶ್ವರ ಧಾಮದಿಂದ ಕರ್ಣಾವತಿಗೆ ತರಲಾಗಿದೆ. ಅಲ್ಲಿಂದ ಅದನ್ನು ಸೋಮನಾಥ ಜ್ಯೋತಿರ್ಲಿಂಗ ಧಾಮ, ದ್ವಾರಕಾಧೀಶನಗರಿ ಮತ್ತು ಬಳಿಕ ಬದ್ರಿನಾಥ ಧಾಮಕ್ಕೆ ತೆಗೆದುಕೊಂಡು ಹೋಗಲಾಗುವುದು. ಶ್ರೀಚಲ ಶ್ರೀನಿವಾಸರು ಈ ಪಾದುಕೆಗಳನ್ನು ಕೈಯಲ್ಲಿ ತೆಗೆದುಕೊಂಡು 41 ದಿನಗಳ ವರೆಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮಮಂದಿರದ ಪ್ರದಕ್ಷಿಣೆಯನ್ನು ಮಾಡಿದ್ದಾರೆ.
ಈ ರೀತಿ ದೇವಸ್ಥಾನದ ಕಾರ್ಯ ಹೀಗೆ ನಡೆಯುತ್ತಿದೆ !
1. ಅಯೋಧ್ಯೆಯ ರಾಮಮಂದಿರದ ಮೊದಲ ಮಹಡಿ ಶೇ 80ರಷ್ಟು ಪೂರ್ಣಗೊಂಡಿದೆ. ಕಲ್ಲಿನ ನೆಲಹಾಸು ಮತ್ತು ಕಂಬಗಳ ಕೆಲಸಗಳೂ ಅಂತಿಮ ಹಂತದಲ್ಲಿವೆ.
2. ಕಟ್ಟಡ ಕಾಮಗಾರಿ ನಿಗದಿತ ಕಾಲಾವಧಿಯೊಳಗೆ ಪೂರ್ಣಗೊಳಿಸಲು ರಾಮಮಂದಿರದ ಸಂಕೀರ್ಣದಲ್ಲಿರುವ ಕಾರ್ಮಿಕರ ಸಂಖ್ಯೆಯನ್ನು 3,000ದಿಂದ 3,500ಕ್ಕೆ ಹೆಚ್ಚಿಸಲಾಗಿದೆ.
3. ಮೇಲ್ಛಾವಣಿಯ ನಕ್ಷೆಯ ಕೆಲಸ ಪ್ರಗತಿಯಲ್ಲಿದ್ದು, ಕೆಳಮಹಡಿಯ 18 ಬಾಗಿಲುಗಳ ಪೈಕಿ 14 ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗುತ್ತಿದೆ.
4. ದೇವಸ್ಥಾನದ ಪ್ರದೇಶದಲ್ಲಿ ಗೌರವಾನ್ವಿತ ವ್ಯಕ್ತಿಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ದೇವಸ್ಥಾನ ನಿರ್ಮಾಣದ ಗತಿಯು ಯಾವುದೇ ವ್ಯತ್ಯಯವಿಲ್ಲದೇ ಮುಂದುವರಿಯಬೇಕೆನ್ನುವುದೇ ಇದರ ಹಿಂದಿನ ಉದ್ದೇಶವಾಗಿದೆ.
5. ಡಿಸೆಂಬರ್ ಕೊನೆಯಲ್ಲಿ ಮೊದಲನೇ ಮಹಡಿಯ ಕಾಮಗಾರಿ ಪೂರ್ಣವಾಗಲಿದೆ ಎಂದು ದೇವಸ್ಥಾನದ ಟ್ರಸ್ಟೀ ಹೇಳಿದ್ದಾರೆ.