ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಬಗ್ಗೆ ಕ್ರಮಕ್ಕೆ ಆಗ್ರಹ !
ಮುಜಫ್ಫರ್‌ನಗರ (ಉತ್ತರ ಪ್ರದೇಶ) – ‘ಎಕ್ಸ್’ ನಲ್ಲಿ ಒಂದು ವೀಡಿಯೊ ವೈರಲ್ ಆಗಿದೆ ಮತ್ತು ಇದು ನಗರದ ಮುಸ್ಲಿಂ ಬಹುಸಂಖ್ಯಾತ ಪ್ರದೇಶದಿಂದ ಬಂದಿದೆ ಎಂದು ಹೇಳಲಾಗುತ್ತದೆ. 38 ಸೆಕೆಂಡುಗಳ ವೀಡಿಯೊದಲ್ಲಿ, ಟೋಪಿ ಧರಿಸಿದ ವ್ಯಕ್ತಿಯೊಬ್ಬರು ಹಾಜಿ ಮಕ್ಬೂಲ್ ತಹ್ರಿ ಢಾಬಾದಲ್ಲಿ ‘ರೋಟಿ’ ಮಾಡುತ್ತಿರುವುದನ್ನು ಕಾಣಬಹುದು. ವೀಡಿಯೊದಲ್ಲಿ, ಅವರು ರೊಟ್ಟಿಗಳ ಮೇಲೆ ಉಗುಳುವುದು ಮತ್ತು ನಂತರ ಅವುಗಳನ್ನು ತಂದೂರ್ನಲ್ಲಿ ಹಾಕುವುದು ಕಂಡುಬರುತ್ತದೆ. ಇದರಿಂದಾಗಿ ಮುಜಫ್ಫರ್‌ನಗರದ ಹಿಂದೂ ಜಾಗರಣ ಮಂಚದ ಹಿಂದುತ್ವನಿಷ್ಠ ಕಾರ್ಯಕರ್ತರು ಈ ಢಾಬಾದ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುವವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
1. ‘ಎಕ್ಸ್’ನಲ್ಲಿ ಓರ್ವ ಹಿಂದೂ ಇದರ ಬಗ್ಗೆ ಪ್ರತಿಕ್ರಿಯಿಸುತ್ತಾ, (ಉಗುಳಿನಿಂದ ರೊಟ್ಟಿ ಮಾಡುವುದು) ‘ಹಲಾಲ್’ ಎಂದು ಕರೆಯುತ್ತಾರೆ. ಆಡಳಿತ ಈ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು.
2. ಹಿಂದೂ ಜಾಗರಣ ಮಂಚ್ ನ ಕಾರ್ಯಕರ್ತರು ದೂರಿನಲ್ಲಿ, ಈ ಮೂಲಕ ಸಮಾಜದಲ್ಲಿ ದ್ವೇಷ ಹರಡುವ ಯತ್ನ ನಡೆದಿದೆ. ಹೋಟೆಲ್ ಇರುವ ಸ್ಥಳದಿಂದ ಮುಸ್ಲಿಂ ಬಹುಸಂಖ್ಯಾತ ಶಾಪಿಂಗ್ ಪ್ರದೇಶ ಆರಂಭವಾಗುತ್ತದೆ. ಈ ಘಟನೆಯಿಂದ ನಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ. ಎಲ್ಲ ಧರ್ಮದವರೂ ಈ ಹೋಟೆಲ್‌ನಲ್ಲಿ ಊಟ ಮಾಡುತ್ತಾರೆ ಎಂದು ಹೇಳಿದರು.