ಅಯೋಧ್ಯೆ (ಉತ್ತರ ಪ್ರದೇಶ) – ಇಲ್ಲಿಯ ಶ್ರೀರಾಮಜನ್ಮಭೂಮಿಯ ಮೇಲೆ ಜನವರಿ 22, 2024 ರಂದು ಭವ್ಯ ಶ್ರೀ ರಾಮ ಮಂದಿರವನ್ನು ಉದ್ಘಾಟಿಸಲಾಗುವುದು. ಅದೇ ರೀತಿ ಅಯೋಧ್ಯೆಯಿಂದ 25 ಕಿ.ಮೀ. ದೂರದಲ್ಲಿರುವ ಧನ್ನಿಪುರ ಗ್ರಾಮದಲ್ಲಿ ನಿರ್ಮಾಣಗೊಳ್ಳಲಿರುವ ಮಸೀದಿಯ ಅಡಿಪಾಯವನ್ನು ರಚಿಸಲಾಗಿದೆ. ಇದು ಭಾರತದ ಅತಿ ದೊಡ್ಡ ಮಸೀದಿಯಾಗಲಿದೆ. ಈ ಮಶೀದಿಯ ಹೆಸರು `ಮಹಮ್ಮದ ಬಿನ್ ಅಬ್ದುಲ್ಲಾ’ ಎಂದು ಇರಲಿದೆ. ಇಲ್ಲಿ ಮೊದಲ ನಮಾಜ ಪಠಣವನ್ನು ಮಕ್ಕಾದ ಇಮಾಮ ಅಬ್ದುಲ್ ರಹಮಾನ ಅಲ್ ಸುದಾಯಿಸ ಮಾಡಲಿದ್ದಾರೆ ಎಂದು ಮುಂಬಯಿಯ ಭಾಜಪ ಮುಖಂಡ ಹಾಜಿ ಅರಾಫತ ಶೇಖ ಮಾಹಿತಿ ನೀಡಿದ್ದಾರೆ. ಅವರನ್ನು `ಮಸೀದ ವಿಕಾಸ ಸಮಿತಿ’ಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಶ್ರೀರಾಮ ಜನ್ಮಭೂಮಿ ಪ್ರಕರಣದ ಮೇಲೆ ತೀರ್ಪು ನೀಡುವಾಗ ಸರ್ವೋಚ್ಚ ನ್ಯಾಯಾಲಯವು ಉತ್ತರಪ್ರದೇಶ ಸರಕಾರಕ್ಕೆ ಮಸೀದಿಯನ್ನು ನಿರ್ಮಿಸಲು ಮುಸಲ್ಮಾನರಿಗೆ 5 ಎಕರೆ ಭೂಮಿಯನ್ನು ನೀಡುವಂತೆ ಆದೇಶವನ್ನು ನೀಡಿದ್ದರು.
ಅರಾಫತ ಶೇಖ ಮಾತನ್ನು ಮುಂದುವರಿಸಿ, ಈ ಮಸೀದಿಯಲ್ಲಿ 21 ಅಡಿ ಎತ್ತರ ಮತ್ತು 36 ಅಡಿ ಆಳದ ವಿಶ್ವದ ಅತಿದೊಡ್ಡ ಕುರಾನ್ ಅನ್ನು ಇರಿಸಲಾಗುವುದು. ಮಸೀದಿಯ ಪರಿಸರದಲ್ಲಿ ಕ್ಯಾನ್ಸರ್ ಆಸ್ಪತ್ರೆ, ಶಾಲೆ, ಮ್ಯೂಸಿಯಂ ಮತ್ತು ವಾಚನಾಲಯವನ್ನು ನಿರ್ಮಿಸಲಾಗುವುದು. ಇಲ್ಲಿ ಸಸ್ಯಾಹಾರಿ ಉಪಹಾರಗೃಹವನ್ನು ನಿರ್ಮಿಸಲಾಗುವುದು. ಅಲ್ಲಿಗೆ ಬರುವ ಜನರಿಗೆ ಉಚಿತ ಊಟ ನೀಡಲಾಗುವುದು. ಅಥವಾ ಮಸೀದಿಯ ರಚನೆ ತಾಜಮಹಲಗಿಂತ ಸುಂದರವಾಗಿರಲಿದೆ. ಮಸೀದಿಯಲ್ಲಿ ದೊಡ್ಡ ದೊಡ್ಡ ಕಾರಂಜಿಗಳನ್ನು ನಿರ್ಮಿಸಲಾಗುವುದು, ಅದನ್ನು ಸಾಯಂಕಾಲ ಪ್ರಾರಂಭಿಸಲಾಗುವುದು. ಈ ಮಸೀದಿಯಲ್ಲಿ ಪ್ರತಿಯೊಂದು ಧರ್ಮದ ಜನರಿಗೆ ಪ್ರವೇಶ ಇರಲಿದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಈ ಮಸೀದಿಯಿಂದ ಜಿಹಾದಿ ಚಟುವಟಿಕೆಗಳು ನಡೆಯುವುದಿಲ್ಲ ಎನ್ನುವ ಕಡೆಗೆ ಸರಕಾರ ಗಮನಹರಿಸಬೇಕು ! |