ಮೂರ್ತಿ ಪೂಜೆ ಮಾಡುತ್ತಿರುವ ಆರೋಪ !
ಶಿರಡಿ (ಆಹಿಲ್ಯಾನಗರ) – ನಟ ಶಾರುಖ್ ಖಾನ್ ಮತ್ತು ಅವರ ಕುಟುಂಬದವರು ಶಿರಡಿಗೆ ಹೋಗಿ ಶ್ರೀ ಸಾಯಿಬಾಬಾರ ದರ್ಶನ ಪಡೆದರು. ಇದರಿಂದ ಕಟ್ಟರವಾದಿ ಮುಸಲ್ಮಾನರು ಅವರನ್ನು ಗುರಿ ಮಾಡಿ ಬೈಗುಳ ನೀಡಿದರು. ಶಾರುಖ್ ಖಾನ್ ಇವರು ಅವರ ಮಗಳು ಸುಹಾನ ಇವಳ ಜೊತೆಗೆ ಶ್ರೀ ಸಾಯಿ ಬಾಬಾರ ದರ್ಶನ ಪಡೆದು ಅವರ ಮುಂಬರುವ ಚಲನಚಿತ್ರದ ‘ಡಂಕಿ’ ಈ ಚಲನಚಿತ್ರಕ್ಕಾಗಿ ಪ್ರಾರ್ಥನೆ ಮಾಡಿದರು. ಖಾನ್ ಮತ್ತು ಅವರ ಮಗಳು ಶ್ರೀ ಸಾಯಿ ಬಾಬಾರ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಮತಾಂಧರು ಟ್ವಿಟರ್ ನಲ್ಲಿ ಶಾರುಖ್ ಖಾನ್ ಮೂರ್ತಿ ಪೂಜೆ ಮಾಡುತ್ತಿರುವುದಾಗಿ ಆರೋಪಿಸಿ ಅವರನ್ನು ‘ಕಾಫಿರ್’ ಎಂದು ಹೇಳುತ್ತಾ ಅಶ್ಲೀಲ ಟಿಪ್ಪಣಿಗಳು ಮಾಡಿದ್ದಾರೆ.
ಓರ್ವ ಟ್ವೀಟರ್ ಬಳಕೆದಾರನು, ಶಾರುಖ್ ಖಾನ್ ಮುಸಲ್ಮಾನನಲ್ಲ. ಅವನು ಅಲ್ಲಾಹನ ಮೇಲೆ ವಿಶ್ವಾಸ ಇಟ್ಟಿದ್ದರೆ, ಎಂದೂ ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಮಾಡುತ್ತಿರಲಿಲ್ಲ. ಇಸ್ಲಾಂನ ಧರ್ಮಗ್ರಂಥದ ಪ್ರಕಾರ ಮುಸಲ್ಮಾನರು ಮೂರ್ತಿ ಪೂಜೆ ಮಾಡಲು ನಿಷೇಧವಿದೆ ಮತ್ತು ಮೂರ್ತಿ ಪೂಜೆ ಮಾಡುವುದು ಇದು ಪಾಪ ಎಂದು ನಂಬಲಾಗಿದೆ. ಇಸ್ಲಾಂನಲ್ಲಿ ಇದು ನಿಶಿದ್ಧವಾಗಿದೆ ಎಂದು ಹೇಳಿದ್ದಾನೆ.
(ಸೌಜನ್ಯ : CNBC-TV18)
ಸಂಪಾದಕರ ನಿಲುವು* ಇಂತಹವರ ಸರ್ವಧರ್ಮಸಮಭಾವ ಎಂದರೆ ಇದೇನಾ ? ಎಷ್ಟೋ ಹಿಂದೂಗಳು ದರ್ಗಾಗೆ ಹೋಗಿ ಚಾದರ್ ಹೊದಿಸುತ್ತಾರೆ, ಆ ಸಮಯದಲ್ಲಿ ಹಿಂದುಗಳು ಅವರ ವಿರುದ್ಧ ಮಾತನಾಡುವುದಿಲ್ಲ; ಆದರೆ ಮತಾಂಧರು ಯಾವುದೇ ಮುಸಲ್ಮಾನನು ಹಿಂದುಗಳ ದೇವಸ್ಥಾನಕ್ಕೆ ಹೋಗಿರುವುದು ಸಹಿಸುವುದಿಲ್ಲ ! ಇದರಿಂದ ‘ಸರ್ವಧರ್ಮಸಮಭಾವ’ ಕೇವಲ ಹಿಂದುಗಳೆ ಪಾಲಿಸಬೇಕು ಹೀಗೆಯೇ ಆಗಿದೆ. ಇದರ ಬಗ್ಗೆ ಪ್ರಗತಿ(ಅಧೋ)ಪರರು ಏನೂ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ ! |