ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಾಧನೆ ಬಗ್ಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ

೧. ‘ಸೇವೆ ಮಾಡುವಾಗ ಮನಸ್ಸಿನಲ್ಲಿ ಪ್ರತಿಕ್ರಿಯೆ ಬಂದರೆ ಆ ಸೇವೆ ಭಾವಪೂರ್ಣವಾಗಿ ಆಗುವುದಿಲ್ಲ. ಪ್ರತಿಕ್ರಿಯೆ ಇರುವಲ್ಲಿ ಭಾವ ಇರಲು ಸಾಧ್ಯವಿಲ್ಲ. ಕೃತಿ ಮಾಡುವಾಗ ಮನಸ್ಸಿನಲ್ಲಿ ಭಾವವಿದ್ದರೆ, ಆ ಕೃತಿಯಲ್ಲಿ ದೇವತ್ವ ಬರುತ್ತದೆ; ಆದುದರಿಂದ ಸಾಧಕರು ಭಾವಸಹಿತ ಸೇವೆಯನ್ನು ಮಾಡಬೇಕು.
೨. ಸಾಧಕರು ತಮ್ಮ ಸಾಧನೆಯಲ್ಲಿ ಏಕೆ ಸಾತತ್ಯ ಇರುವುದಿಲ್ಲ ? ಎಂಬುದರ ಕಾರಣವನ್ನು ಕಂಡು ಹಿಡಿಯಬೇಕು.
೩. ಇತರರ ಕೃತಿಯ ನಕಲು (ಕಾಪಿ) ಮಾಡಬಾರದು. ಇತರರ ಒಳ್ಳೆಯ ವಿಚಾರ ಮತ್ತು ಗುಣಗಳ ಅಧ್ಯಯನ ಮಾಡಬೇಕು. ಕೇವಲ ನಕಲು ಮಾಡಿದರೆ ಅದು ತೋರಿಕೆಯಾಗುತ್ತದೆ.
೪. ‘ನಮ್ಮ ಮನಸ್ಸಿನಲ್ಲಿನ ವಿಚಾರವೆಂದರೆ ಸ್ವೇಚ್ಛೆ’, ಹೀಗಿರುವುದಿಲ್ಲ. ಆ ವಿಚಾರ ದೇವರದ್ದೂ ಆಗಿರಬಹುದು ಮತ್ತು ಕೆಲವೊಮ್ಮೆ ಅದು ಯೋಗ್ಯವಾಗಿರಬಹುದು. ಆ ಸಮಯದಲ್ಲಿ ಸಾಧನೆಗಾಗಿ ಆ ವಿಚಾರ ಆವಶ್ಯಕವಾಗಿರುತ್ತದೆ.
೫. ಮನೋಲಯವಾದರೆ ಕೇಳುವವೃತ್ತಿ ಉತ್ಪನ್ನವಾಗುತ್ತದೆ.’

– ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೨೮.೯.೨೦೨೧)

ಸಂಗ್ರಹ : ಕು. ಪ್ರಾರ್ಥನಾ ಪಾಠಕ (೨೦೨೩ ರಲ್ಲಿ ಆಧ್ಯಾತ್ಮಿಕ ಮಟ್ಟ ಶೇ. ೬೮, ವಯಸ್ಸು ೧೨ ವರ್ಷ), ಪುಣೆ (೨೮.೯.೨೦೨೧)