ಶಿಥಿಲಗೊಂಡ ದೇವಾಲಯಗಳನ್ನು ನಿರ್ಮಾಣ !ಹಿಂದೂಗಳ ಜನಸಂಖ್ಯೆ ಕಡಿಮೆ ಇರುವ ಗ್ರಾಮಗಳಲ್ಲಿ ದೇವಾಲಯಗಳ ಸೇರ್ಪಡೆ !ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಡಳಿ ಸ್ಥಾಪನೆ : ಸ್ಥಳೀಯರೂ ಸೇರಿದ್ದಾರೆ ! |
ಚಂಡೀಗಢ – ಹರಿಯಾಣದ ಬಿಜೆಪಿ ಸರಕಾರ ಹಿಂದೂ ದೇವಾಲಯಗಳಿಗೆ ಹೊಸ ಕಾನೂನನ್ನು ಜಾರಿಗೆ ತರಲಿದೆ. ಈ ಕಾನೂನಿನ ಪ್ರಕಾರ, ಶೇಕಡಾ 20 ಕ್ಕಿಂತ ಕಡಿಮೆ ಹಿಂದೂಗಳಿರುವ ಹಳ್ಳಿಗಳಲ್ಲಿನ ದೇವಾಲಯಗಳ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಸರಕಾರ ಜಿಲ್ಲೆಯಲ್ಲಿ ಮಂಡಳಿ ಸ್ಥಾಪಿಸಿ ಜಿಲ್ಲಾಧಿಕಾರಿಗೆ ಜವಾಬ್ದಾರಿ ನೀಡಲಿದೆ. 12 ಜಿಲ್ಲೆಗಳ ದೇವಾಲಯಗಳ ಶಿಥಿಲಾವಸ್ಥೆಯನ್ನು ಪರಿಗಣಿಸಿ, ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಸರಕಾರ ತೆಗೆದುಕೊಳ್ಳುತ್ತದೆ.
ಈ ನಿಟ್ಟಿನಲ್ಲಿ ರಾಜ್ಯ ಗೃಹ ಇಲಾಖೆ ಮಸೂದೆಗೆ ಅನುಮೋದನೆಯನ್ನು ಪೂರ್ಣಗೊಳಿಸಿದೆ. ಮುಂಬರುವ ಚಳಿಗಾಲದ ವಿಧಾನಸಭೆಯ ಅಧಿವೇಶನದಲ್ಲಿ ಸರಕಾರ ಮಸೂದೆಯನ್ನು ಮಂಡಿಸಬಹುದು. ಹರಿಯಾಣದ ಅನೇಕ ಹಳ್ಳಿಗಳಲ್ಲಿ ಹಿಂದೂಗಳ ಕಡಿಮೆ ಜನಸಂಖ್ಯೆ ಇದೆ ಅಥವಾ ಹಿಂದೂಗಳು ಅಲ್ಲಿಂದ ವಲಸೆ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇವಸ್ಥಾನಗಳು ಸರಿಯಾಗಿ ನಿರ್ವಹಣೆಯಾಗುತ್ತಿಲ್ಲ. ಅದರಲ್ಲೂ ನೂಹ್‌ನಂತಹ ಜಿಲ್ಲೆಗಳ ದೇವಸ್ಥಾನಗಳು ದುಸ್ಥಿತಿಯಲ್ಲಿವೆ. ಅಂತಹ ಜಿಲ್ಲೆಗಳ ದೇವಸ್ಥಾನಗಳಿಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಮಂಡಳಿ ರಚಿಸಲಾಗುವುದು. ಈ ಮಂಡಳಿಯಲ್ಲಿ ಸ್ಥಳೀಯರನ್ನೂ ಸೇರಿಸಲಾಗುವುದು. ಸರಕಾರ ಮೊದಲು ದೇವಸ್ಥಾನಗಳನ್ನು ದುರಸ್ತಿ ಮಾಡುತ್ತದೆ; ನಂತರ ಅಲ್ಲಿ ನಿತ್ಯ ಪೂಜೆಯನ್ನು ಏರ್ಪಡಿಸುತ್ತಾರೆ. ಸಿಖ್ಖರ ಧಾರ್ಮಿಕ ಸ್ಥಳಗಳನ್ನು ನೋಡಿಕೊಳ್ಳಲು ‘ಹರಿಯಾಣ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ’ಯನ್ನು ಸ್ಥಾಪಿಸಲಾಗಿದೆ. ಮುಸ್ಲಿಮರ ಧಾರ್ಮಿಕ ಸ್ಥಳಗಳನ್ನು ‘ವಕ್ಫ್ ಬೋರ್ಡ್’ ನಿರ್ವಹಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಹಿಂದೂ ದೇವಾಲಯಗಳ ನಿರ್ವಹಣೆಗೆ ಪ್ರತ್ಯೇಕ ಹಾಗೂ ಸಮಾನ ವ್ಯವಸ್ಥೆ ಕಲ್ಪಿಸಲು ಯಾವುದೇ ತೊಂದರೆ ಇಲ್ಲ ಎಂದು ಸರಕಾರ ಹೇಳಿದೆ.