ಡೆಹ್ರಾಡೂನ್ (ಉತ್ತರಾಖಂಡ) – ರಾಜ್ಯದ ಹರ್ರಾವಾಲಾ ಪಟ್ಟಣದ ಶ್ರೀ ಕಾಳಿಮಾತಾ ದೇವಸ್ಥಾನದ ಮುಖ್ಯ ಪ್ರವೇಶದ್ವಾರದ ಮುಂಭಾಗದಲ್ಲಿ ಹಿಂದೂ ದ್ವೇಷಿ ಯುವಕನೊಬ್ಬ ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆಸಿದ್ದಾನೆ. ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಘಟನೆಯ ನಂತರ, ಹಿಂದೂ ಸಂಘಟನೆಗಳ ಕಾರ್ಯಕರ್ತರು ದೇವಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಹಿಂದೂ ವಿರೋಧಿಯನ್ನು ಶೀಘ್ರವಾಗಿ ಬಂಧಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
1. ಹಿಂದೂ ಸಂಘಟನೆಗಳ ಪ್ರಕಾರ, ದೇವಾಲಯಗಳಲ್ಲಿನ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸುವ ಅಥವಾ ದೇವಾಲಯಗಳಿಗೆ ಹಾನಿ ಮಾಡುವ ಹಲವಾರು ಘಟನೆಗಳು ಹಿಂದೆಯೂ ನಡೆದಿವೆ; ಆದರೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
2. ‘ಆರೋಪಿಯ ಬಂಧಿಸಿದ ನಂತರವೇ ಈ ವ್ಯಕ್ತಿ ಧಾರ್ಮಿಕ ಸೌಹಾರ್ದತೆ ಕದಡುವ ಉದ್ದೇಶ ಹೊಂದಿದ್ದನೇ ಅಥವಾ ಮಾನಸಿಕವಾಗಿ ಹುಚ್ಚನಾಗಿದ್ದನೇ ಎಂಬುದು ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. (ದೇವಸ್ಥಾನಗಳ ಮೇಲೆ ದಾಳಿ ಮಾಡುವವರನ್ನು ಅಥವಾ ವಿಗ್ರಹಗಳನ್ನು ಧ್ವಂಸ ಮಾಡುವವರನ್ನು ‘ಹುಚ್ಚು’ ಎಂದು ಕರೆಯುವ ಆತುರ ಪೊಲೀಸರಿಗೇಕೆ ? ಇಂತಹ ಪೊಲೀಸರು ಹಿಂದೂಗಳಿಗೆ ನ್ಯಾಯ ಕೊಡಿಸುವರೇ ? – ಸಂಪಾದಕರು)