ಶಬರಿಮಲೆ ದೇಗುಲದಲ್ಲಿ ಅಪಾರ ಭಕ್ತ ಸಮೂಹ : ವ್ಯವಸ್ಥೆ ಕುಂಠಿತ

ಭಾರತೀಯ ಜನತಾ ಯುವ ಮೋರ್ಚಾದಿಂದ ಆಂದೋಲನ

ತಿರುವನಂತಪುರಂ – ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಿದ್ದಾರೆ. ಭಕ್ತ ಸಮೂಹದಿಂದ ದೇವಸ್ಥಾನದಲ್ಲಿ ಪ್ರಚಂಡ ಜನದಟ್ಟಣೆ ಉಂಟಾಗಿದೆ. ಯಾತ್ರಾರ್ಥಿಗಳು ಮೂಲ ಸೌಕರ್ಯ ಮತ್ತು ಭದ್ರತೆಯ ಕೊರತೆ ಇದೆ ಎಂದು ದೂರಿದ್ದಾರೆ. ಈ ದೂರಿನ ಹಿನ್ನಲೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಅಯ್ಯಪ್ಪ ದೇಗುಲದಲ್ಲಿ ಸೌಲಭ್ಯಗಳ ಕೊರತೆಯ ವರದಿಯನ್ನು ತಳ್ಳಿ ಹಾಕಿದ್ದಾರೆ. ಶಬರಿಮಲೆ ನಿರ್ವಹಣೆಯಲ್ಲಿ ಲೋಪ ಎಸಗಿರುವ ಕೇರಳ ಸರಕಾರವನ್ನು ಬಿಜೆಪಿ ಖಂಡಿಸಿದೆ. ಈ ವೇಳೆ ಭಾರತೀಯ ಜನತಾ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ಕೂಡ ನಡೆಸಲಾಯಿತು.

ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಭಕ್ತರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು ಮುಖ್ಯಮಂತ್ರಿ ವಿಜಯನ್ ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶಿಸಿದರು. ಡಿಸೆಂಬರ್ 6 ರಿಂದ ಭಕ್ತರ ಸಂಖ್ಯೆ ಹೆಚ್ಚಿಸಿದ್ದು, ಪ್ರತಿದಿನ 88 ಸಾವಿರ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಜನಸಂದಣಿ ಹೆಚ್ಚಿರುವ ಹಿನ್ನೆಲೆಯಲ್ಲಿ ದರ್ಶನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ಹೇಳಿದರು.