ಕಿರೀಟ ಕಳಿದಿರುವ ಬಗ್ಗೆ ಎಣಿಕೆ ಸಮಿತಿ ವರದಿಯಲ್ಲಿ ದಾಖಲಾಗಿತ್ತು !
ದೇವಸ್ಥಾನದ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಕದಂ ಇವರ ದಾವೆ ! |
ತುಳಜಾಪುರ (ಧಾರಾಶಿವ ಜಿಲ್ಲೆ) – ನಾಪತ್ತೆಯಾಗಿದ್ದ ತುಳಜಾಪುರ (ಜಿಲ್ಲೆ ಧಾರಾಶಿವ) ಶ್ರೀ ಭವಾನಿದೇವಿಯ ಚಿನ್ನದ ಕಿರೀಟ ಪತ್ತೆಯಾಗಿದೆ ಎಂದು ಚಿನ್ನದ ಎಣಿಕೆ ಸಮಿತಿ ಸದಸ್ಯ ಹಾಗೂ ಪೂಜಾರಿ ಮಂಡಲದ ಅಧ್ಯಕ್ಷ ಅಮರರಾಜೇ ಕದಂ ಹೇಳಿದ್ದಾರೆ. ಈ ಕಿರೀಟವು ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿನ ಹಿತ್ತಾಳೆಯ ಪೆಟ್ಟಿಗೆಯಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತದೆ. 826 ಗ್ರಾಂ ತೂಕದ ಚಿನ್ನದ ಕಿರೀಟ ಕಾಣೆಯಾಗಿದೆ ಎಂದು ಏಣಿಕೆ ಸಮಿತಿಯ ವರದಿಯಲ್ಲಿ ನೊಂದಾಯಿಸಿತ್ತು; ಆದರೆ ಈಗ ಅದೇ ಕಿರೀಟ ಸಿಕ್ಕಿದೆ ಎಂದು ಕದಂ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2009 ರಿಂದ 2023 ರ ಅವಧಿಯಲ್ಲಿ ಶ್ರೀ ಭವಾನಿದೇವಿಗೆ ಭಕ್ತರು ಅರ್ಪಿಸಿದ ಚಿನ್ನ, ಬೆಳ್ಳಿ ಮತ್ತು ಬೆಲೆಬಾಳುವ ವಸ್ತುಗಳ ಎಣಿಕೆಯನ್ನು ಕೆಲವು ದಿನಗಳ ಹಿಂದೆ ದೇವಾಲಯ ಸಂಸ್ಥಾನದಿಂದ ಮಾಡಲಾಯಿತು. 27 ಆಭರಣಗಳ ಪೈಕಿ 4 ಆಭರಣಗಳು ನಾಪತ್ತೆಯಾಗಿರುವುದು ಪತ್ತೆಯಾಗಿತ್ತು. ಅದರಲ್ಲಿ ಮಂಗಳಸೂತ್ರ, 826 ಗ್ರಾಂ ತೂಕದ ಚಿನ್ನದ ಕಿರೀಟವೂ ಸೇರಿತ್ತು. ಈ ಕಳ್ಳತನವನ್ನು ಮರೆಮಾಡಲು ಮತ್ತೊಂದು ಕಿರೀಟವನ್ನು ಇಡಲಾಗಿದೆ ಎಂದು ವರದಿಯಾಗಿತ್ತು.
ಸಂಪಾದಕರ ನಿಲುವು* ಕಿರೀಟ ಕಳೆದಿದೆ ಎಂದು ಸುಳ್ಳು ವರದಿ ನೀಡಿದವರನ್ನು ಸರಕಾರ ಜೀವಾವಧಿ ಜೈಲಿಗೆ ಹಾಕಬೇಕು ! * ಸರಕಾರಿ ಸ್ವಾಮ್ಯದ ದೇವಸ್ಥಾನಗಳಲ್ಲಿ ಚಿನ್ನ ಬೆಳ್ಳಿಯ ಆಭರಣಗಳ ಕಳವು, ದೇವಸ್ಥಾನದ ಜಮೀನುಗಳ ‘ನಾಪತ್ತೆ’, ದೇವಾಲಯಗಳಲ್ಲಿ ಭ್ರಷ್ಟಾಚಾರ, ಅವರ ಆಸ್ತಿ ಲೂಟಿ ಇತ್ಯಾದಿಗಳೆಲ್ಲವೂ ದೇವಾಲಯಗಳ ಸರಕಾರೀಕರಣದ ಪರಿಣಾಮಗಳಾಗಿವೆ ! ಇದಕ್ಕಾಗಿ ದೇವಾಲಯಗಳು ಭಕ್ತರ ವಶದಲ್ಲಿರಬೇಕೆಂದು ಭಕ್ತರು ಒತ್ತಾಯಿಸುತ್ತಲೇ ಇರಬೇಕು ! |