ಮೂರೂ ಆರೋಪಿಗಳು ಪೊಲೀಸರ ವಶಕ್ಕೆ

ಕರಣಿ ಸೇನೆಯ ಮುಖ್ಯಸ್ಥ ಸುಖದೇವ ಸಿಂಹ ಗೊಗಾಮೆಡಿಯವರ ಹತ್ಯೆ ಪ್ರಕರಣ

ಚಂಡಿಗಢ – ಶ್ರೀ ರಾಷ್ಟ್ರೀಯ ರಜಪೂತ ಕರಣಿ ಸೇನೆಯ ಮುಖ್ಯಸ್ಥ ಸುಖದೇವ್ ಸಿಂಹ ಗೊಗಾಮೆಡಿಯವರ ಮೇಲೆ ಪ್ರತ್ಯಕ್ಷ ಗುಂಡಿನ ದಾಳಿ ನಡೆಸಿದ ರೋಹಿತ ರಾಠೋಡ ಮತ್ತು ನಿತಿನ ಫೌಜಿ ಜೊತೆಗೆ, ಉದ್ಧಮ ಹೆಸರಿನ ಮೂರನೇ ವ್ಯಕ್ತಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರ ಅಪರಾಧ ವಿಭಾಗ ಮತ್ತು ರಾಜಸ್ಥಾನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಈ ಮೂವರನ್ನು ಚಂಡಿಗಢದಲ್ಲಿ ಬಂಧಿಸಿದ್ದಾರೆ.

1. ದೆಹಲಿ ಪೊಲೀಸರು ರೋಹಿತ ಮತ್ತು ಉದ್ಧಮನನ್ನು ದೆಹಲಿಗೆ ಕರೆತಂದಿದ್ದಾರೆ ಹಾಗೂ ನಿತಿನ್ ಫೌಜಿಯನ್ನು ರಾಜಸ್ಥಾನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

2. ಪೊಲೀಸರು ನೀಡಿರುವ ಮಾಹಿತಿಯನುಸಾರ, ಗೊಗಾಮೆಡಿಯ ಹತ್ಯೆಯ ನಂತರ ಆರೋಪಿಗಳು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟು ರಾಜಸ್ಥಾನದಿಂದ ಹರಿಯಾಣದ ಹಿಸಾರ್‌ಗೆ ಪರಾರಿಯಾಗಿದ್ದರು. ಆ ಬಳಿಕ ಎಲ್ಲ ಆರೋಪಿಗಳು ಹಿಮಾಚಲ ಪ್ರದೇಶದ ಮನಾಲಿಗೆ ಹೋಗಿದ್ದರು. ಅಲ್ಲಿ ಕೆಲವು ದಿನ ಇದ್ದು ಎಲ್ಲರೂ ಚಂಡೀಗಢಕ್ಕೆ ಹಿಂತಿರುಗಿದರು. ಅಲ್ಲಿ ಎಲ್ಲರನ್ನೂ ಬಂಧಿಸಲಾಯಿತು.