ಹಿಂದೂ ಯುವಕ ಭಜರಂಗದಳದ ಕಾರ್ಯಕರ್ತ !

ಸುರತ್ಕಲನ – ಇಲ್ಲಿಯ ಮುಸ್ಲಿಂ ಹುಡುಗಿ ಆಯಿಷಾಳು ಬಜರಂಗದಳ ಕಾರ್ಯಕರ್ತ ಪ್ರಶಾಂತ ಭಂಡಾರಿ ಅವರನ್ನು ವಿವಾಹವಾದಳು. ಆಯಿಷಾ ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದಳು. ಇವರಿಬ್ಬರ ಮದುವೆಯ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇಬ್ಬರೂ 3 ವರ್ಷಗಳಿಂದ ಪ್ರೀತಿಸುತ್ತಿದ್ದರು. ಆಯಿಷಾಳ ತಾಯಿ ಅವರ ವಿವಾಹಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆಗ ಆಯೇಷಾ ಸ್ವ ಇಚ್ಛೆಯಿಂದ ಪ್ರಶಾಂತ ಅವರನ್ನು ವೈದಿಕ ರೀತಿಯಲ್ಲಿ ವಿವಾಹವಾದರು. ಈಗ ಆಕೆಗೆ ಅಕ್ಷತಾ ಎಂದು ಹೆಸರಿಡಲಾಗಿದೆ. ಈ ಘಟನೆಯಿಂದಾಗಿ ಆಯೇಷಾ ಕುಟುಂಬದವರು ಪೊಲೀಸರಲ್ಲಿ ದೂರು ನೀಡಿದ್ದಾರೆ. ಪ್ರಶಾಂತ ಮತ್ತು ಆಯೇಷಾ ತಾವಾಗಿಯೇ ಪೊಲೀಸ್ ಠಾಣೆಗೆ ತೆರಳಿ ತಮ್ಮ ಮದುವೆಯ ಬಗ್ಗೆ ತಿಳಿಸಿದರು.
ಪ್ರಸಾರಮಾಧ್ಯಮಗಳ ಹಿಂದೂ ದ್ವೇಷ !
ಆಯೇಷಾ ಮತ್ತು ಪ್ರಶಾಂತ ಇವರ ಮದುವೆಯ ಸುದ್ದಿಯನ್ನು ಕೆಲವು ಪ್ರಸಾರ ಮಾಧ್ಯಮಗಳು ‘ರಿವರ್ಸ್ ಲವ್ ಜಿಹಾದ್’ ಎಂದು ವರದಿ ಮಾಡಿದೆ. ವಾಸ್ತವವಾಗಿ ಲವ್ ಜಿಹಾದ್ ಇದು ಹಿಂದೂ ದ್ವೇಷದಿಂದ ಮುಸ್ಲಿಂ ಯುವಕರಿಂದ ಹಿಂದೂ ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಸೆಳೆಯಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಅವರು ತಾವು ಹಿಂದೂಗಳು ಎಂದು ಸುಳ್ಳು ಹೇಳುತ್ತಾರೆ, ಮದುವೆಯಾಗಿರುವ ಮಾಹಿತಿ ಮುಚ್ಚಿಡುತ್ತಾರೆ, ಹಾಗೂ ಮದುವೆಯಾದ ನಂತರ ಮತಾಂತರಕ್ಕಾಗಿ ಹಿಂದೂ ಹುಡುಗಿಯನ್ನು ಹಿಂಸಿಸುತ್ತಾರೆ. ಹೀಗಿರುವಾಗ ಮಾಧ್ಯಮಗಳಲ್ಲಿ ಹಿಂದೂ ಯುವಕನೊಬ್ಬ ಮುಸ್ಲಿಂ ಯುವತಿಯನ್ನು ಶುದ್ಧ ಪ್ರೀತಿಯಿಂದ ಮದುವೆಯಾದಾಗ ಆತನನ್ನು ಲವ್ ಜಿಹಾದ್ ಎಂದು ಕರೆಯುವುದು ಹಿಂದೂ ದ್ವೇಷವೇ ಆಗಿದೆ. ಇದರ ವಿರುದ್ಧ ನ್ಯಾಯೋಚಿತ ಮಾರ್ಗದಿಂದ ಹಿಂದೂ ಸಂಘಟನೆಗಳು ಸಕ್ರಿಯವಾಗಬೇಕು.
ದ್ವೇಷ ಗೆದ್ದ ಪ್ರೀತಿ; ಮನ ಮೆಚ್ಚಿದ ಭಜರಂಗದಳ ಕಾರ್ಯಕರ್ತನನ್ನೇ ವರಿಸಿದ ಮುಸ್ಲಿಂ ಯುವತಿ#KannadaNews #Muslim #Hidnu #DakshinaKannada #Karnataka #Surathkal
— News18 Kannada (@News18Kannada) December 8, 2023
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಅವರು ಮಾಡಿರುವ ‘ಹಿಂದೂ ರಾಷ್ಟ್ರ ಸ್ಥಾಪನೆ’ಯ ಮಹಾ ಸಂಕಲ್ಪವು ಶೀಘ್ರದಲ್ಲೇ ಸಿದ್ಧಿಯಾಗಲಿದೆ ! – ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ
US-Based Christian Missionary : ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಮತ್ತು ೭ ವ್ಯಕ್ತಿಗಳ ವಿರುದ್ಧ ಮೊಕದ್ದಮೆ ದಾಖಲು
‘ನ್ಯಾಷನಲಿಸ್ಟ್ ಸಿಟಿಜನ್ಸ್ ಪಾರ್ಟಿ ಆಫ್ ಇಂಡಿಯಾ’ದಲ್ಲಿ ವಿಲೀನಗೊಳ್ಳಲು ನಿರ್ಧರಿಸಿರುವ ತೃಣಮೂಲ ಕಾಂಗ್ರೆಸ್ಸಿನ 20 ಲೋಕಸಭಾ ಸಂಸದರು !
ಬಾಂಗ್ಲಾದೇಶದ ಶಿವಗಂಜ್ ಉಪಜಿಲ್ಲೆಯ ಹೆಸರು ಬದಲಾಯಿಸಿ ‘ಮಹಾಸ್ಥಾನ’ ಆಗಲಿದೆ !
ವಿಶೇಷ ನ್ಯಾಯಾಲಯದಿಂದ ಪೊಲೀಸ್ ಉಪಾಧೀಕ್ಷಕನ ಜಾಮೀನು ಅರ್ಜಿ ವಜಾ !
ಹಿಂದುತ್ವನಿಷ್ಠ ಹರ್ಷ ಅವರ ಹತ್ಯೆಗೈದ ಆರೋಪಿಗಳಿಂದ ಜೈಲು ‘ವಾರ್ಡನ್’ ಮೇಲೆ ದಾಳಿ !