ಜಪಾನ್‌ನಲ್ಲಿ ಹಸುವಿನ ಸಗಣಿಯಿಂದ ತಯಾರಿಸಿದ ಇಂಧನದಿಂದ ರಾಕೆಟ್ ಎಂಜಿನ ಚಾಲನೆ !

ಟೋಕಿಯೊ (ಜಪಾನ) – ಜಪಾನಿನ `ಇಂಟರ್‌ಸ್ಟೆಲ್ಲರ್ ಟೆಕ್ನಾಲಜೀಸ್’ ಕಂಪನಿಯು ಗೋಮಯದಿಂದ ಇಂಧನವನ್ನು ತಯಾರಿಸಿದ್ದು, ಅದರಿಂದ ರಾಕೆಟ್ ಎಂಜಿನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಇಂಧನವನ್ನು ಪರೀಕ್ಷಿಸಿದಾಗ, ರಾಕೆಟ್‌ನಿಂದ 15 ಮೀಟರ್ ದೂರದವರೆಗೆ ಜ್ವಾಲೆಗಳು ಹೊರಸೂಸಲ್ಪಟ್ಟಿದ್ದವು. ಇದರ ವಿಡಿಯೋ ವೆಬ್‌ಸೈಟ್‌ನಲ್ಲಿ ಹರಿದಾಡುತ್ತಿದೆ. ಈ ರಾಕೆಟ್ ಅನ್ನು ಅಭಿವೃದ್ಧಿಪಡಿಸಿದ ಕಂಪನಿಯು ಇನ್ನೂ ದೊಡ್ಡ ರಾಕೆಟ್‌ಗಳನ್ನು ತಯಾರಿಸಲು ಪ್ರಯತ್ನಿಸುತ್ತಿದೆ.

1. ‘ಬ್ಯಾರನ್’ ವೆಬ್‌ಸೈಟ್‌ನಲ್ಲಿ ಈ ಘಟನೆಯ ಸುದ್ದಿಯನ್ನು ಪ್ರಸಾರ ಮಾಡಲಾಗಿದೆ. ಈ ಇಂಧನದ ಪರೀಕ್ಷಣೆಯನ್ನು ಜಪಾನಿನ ತಾಯಕಿ ನಗರದಲ್ಲಿ ನಡೆಸಲಾಯಿತು. ಈ ರಾಕೆಟ್‌ನಲ್ಲಿ ಗೋಮಯದಿಂದ ತಯಾರಿಸಿದ ಇಂಧನದ ಹೆಸರು ‘ಬಯೋಮಿಥೇನ್’ ಆಗಿದೆ. ಇದಕ್ಕಾಗಿ ಸ್ಥಳೀಯ ಹಸು ಸಾಕಣೆ ಮಾಡುವ ಜನರಿಂದ ಗೋಮಯವನ್ನು ಖರೀದಿಸಲಾಗಿತ್ತು. ಈ ಮೂಲಕ ಮೊದಲು ಅನಿಲ ಮತ್ತು ನಂತರ ಅದರಿಂದ ಇಂಧನವನ್ನು ಅಭಿವೃದ್ಧಿಪಡಿಸಿತು.

2. `ಇಂಟರ್ ಸ್ಟೆಲ್ಲರ್ ಟೆಕ್ನಾಲಜೀಸ್‘ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ತಾಕಾಹಿರೊ ಇನಾಗಾವಾ ಇವರು ಮಾತನಾಡಿ, ಹಸುವಿನ ಸಗಣಿಯಿಂದ ತಯಾರಿಸಿದ ಇಂಧನದ ಉಪಯೋಗವನ್ನು ಕೇವಲ ಪರಿಸರಕ್ಕೆ ಅನುಕೂಲವಾಗುವಂತೆ ಮಾತ್ರ ಉಪಯೋಗಿಸಲಾಗಿಲ್ಲ, ಇದರ ಉಪಯೋಗವನ್ನು ಸ್ಥಳೀಯವಾಗಿಯೂ ಮಾಡಬಹುದು. ಇದು ಅಗ್ಗದ ಮತ್ತು ಶುದ್ಧವಾಗಿದೆ. ನಾವು ಇಡೀ ಜಗತ್ತು ಅದನ್ನು ಬಳಸಬೇಕು ಎಂದು ನಾವು ಹೇಳಲಾರೆವು; ಆದರೆ ನಾವು ಖಾಸಗಿ ಸಂಸ್ಥೆಯವರಾಗಿದ್ದು, ನಾವು ಅದನ್ನು ಉಪಯೋಗಿಸುತ್ತಿದ್ದೇವೆ ಎಂದು ಹೇಳಿದರು.

3. ‘ಇಂಟರ್ ಸ್ಟೆಲ್ಲರ್’ವು ‘ಏರ್ ವಾಟರ್’ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕಂಪನಿಯು ರೈತರಿಂದ ಜೈವಿಕ ಅನಿಲವನ್ನು ಸಂಗ್ರಹಿಸುತ್ತದೆ. ಹಾಗೆಯೇ ಈ ಕಂಪನಿಯು ದೊಡ್ಡ ಗೋಶಾಲೆಯನ್ನು ಹೊಂದಿದ್ದು, ಅಲ್ಲಿಯ ಹಸುವಿನ ಸಗಣಿಯಿಂದ ಜೈವಿಕ ಅನಿಲವನ್ನು ತಯಾರಿಸಲಾಗುತ್ತದೆ.

4. ಈ ಪ್ರಯೋಗದಲ್ಲಿರುವ ಒಬ್ಬ ಇಂಜಿನಿಯರ್ ತೊಮೊಹಿರೊ ನಿಶಿಕಾವಾ ಇವರು ಮಾತನಾಡಿ, ಈ ಪ್ರದೇಶದ ಹಸುಗಳು ಸಾಕಷ್ಟು ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದ್ದಾರೆ. ವಿದೇಶವನ್ನು ಅವಲಂಬಿಸಿರದೇ ಜಪಾನ ಬಳಿ ಇಂತಹ ಒಂದು ಇಂಧನ ಮೂಲವನ್ನು ಹೊಂದಬೇಕು, ಎಂದು ಹೇಳಿದರು.

5. ರಾಕೆಟ್ ಇಂಜಿನ್ ಗಳಿಗೆ ಹಸುವಿನ ಸಗಣಿಯಿಂದ ತಯಾರಿಸಿದ ಇಂಧನ ಬಳಸುತ್ತಿರುವುದರಿಂದ ಸ್ಥಳೀಯ ಗ್ರಾಮಸ್ಥರು ಹಾಗೂ ಕುರಿಗಾಹಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಇಂತಹ ಇಂಧನದಿಂದ ರಾಕೆಟ್ ಹಾರುವುದನ್ನು ನೋಡಲು ಖುಷಿಯಾಗುತ್ತದೆ ಎಂದು ಅವರು ಹೇಳುತ್ತಾರೆ. ಈ ಗ್ರಾಮಸ್ಥರು ಜಪಾನ್ ಸರಕಾರ ಈ ನಿಟ್ಟಿನಲ್ಲಿ ಮುಂದುವರಿಯಬೇಕು ಎಂದು ಕೋರಿದ್ದಾರೆ.

ಸಂಪಾದಕರ ನಿಲುವು

* ಗೋಮಯ ಮತ್ತು ಗೋಮೂತ್ರವನ್ನು ತುಚ್ಛವಾಗಿ ಕಾಣುವವರಿಗೆ ಈಗಲಾದರೂ ಅವುಗಳ ಮಹತ್ವ ತಿಳಿಯುವುದೇ ?