ರಾಷ್ಟ್ರೀಯ ತನಿಖಾ ದಳದಿಂದ ಮಹಾರಾಷ್ಟ್ರದ 43 ಸ್ಥಳಗಳಲ್ಲಿ ದಾಳಿ !

15 ಜನರು ವಶಕ್ಕೆ

ಐಸಿಸ್ ಸಂಚು ಬಯಲಾಗುವ ಸಾಧ್ಯತೆ

ಮುಂಬಯಿ – ರಾಷ್ಟ್ರೀಯ ತನಿಖಾ ದಳವು ಡಿಸೆಂಬರ್ 9 ರಂದು ಮಹಾರಾಷ್ಟ್ರ ಮತ್ತು ಕರ್ನಾಟಕದ 44 ಸ್ಥಳಗಳಲ್ಲಿ ದಾಳಿ ನಡೆಸಿದೆ. ಇದರಲ್ಲಿ ಮಹಾರಾಷ್ಟ್ರದ 43 ಸ್ಥಳಗಳಲ್ಲಿ ನಡೆಸಿದ ದಾಳಿಯೂ ಒಳಗೊಂಡಿದೆ. ಮಹಾರಾಷ್ಟ್ರದ ಪುಣೆ 1, ಥಾಣೆ ಗ್ರಾಮಾಂತರ 31, ಥಾಣೆ ನಗರ 1 ಮತ್ತು ಭಾಯಿಂದರ್ 1 ಈ ಸ್ಥಳಗಳು ಸೇರಿವೆ. ರಾಜ್ಯ ಉಗ್ರ ನಿಗ್ರಹ ದಳ ಮತ್ತು ರಾಷ್ಟ್ರೀಯ ತನಿಖಾ ದಳವು ನಡೆಸಿರುವ ಅತ್ಯಂತ ದೊಡ್ಡ ಜಂಟಿ ಕಾರ್ಯಾಚರಣೆಯಾಗಿದೆ. ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ 15 ಜನರನ್ನು ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆಸಿ ಬಂಧಿಸುವ ಸಾಧ್ಯತೆಗಳಿವೆ.

ಈ ಕಾರ್ಯಾಚರಣೆಯ ಮೂಲಕ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲ ಮತ್ತು ಐಸಿಸ್ ಕಾರ್ಯಕರ್ತರೊಂದಿಗಿನ ಸಂಬಂಧದ ಷಡ್ಯಂತ್ರ ಬಯಲಾಗಲಿದೆ ಎಂದು ತಿಳಿದುಬಂದಿದೆ. ಇದು ಭಾರತದಲ್ಲಿ ಐಸಿಸ್‌ನ ಉಗ್ರಗಾಮಿ ಸಿದ್ಧಾಂತವನ್ನು ಪ್ರಚಾರ ಮಾಡುವ ಮಾಸ್ಟರ್‌ಮೈಂಡ್ ಅನ್ನು ಒಳಗೊಂಡಿತ್ತು. ಭಾರತದ ನೆಲದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಸಂಚು ರೂಪಿಸಲಾಗಿದೆ ಎಂದು ನಂಬಲಾಗಿದೆ. ಹೆಸರುಗಳು, ಶಾಕಿಬ ನಾಚನ, ಹಾಸಿಬ ಮುಲ್ಲಾ, ಮುಸಾಬ ಮುಲ್ಲಾ, ರೇಹಾನ ಸುಸೆ, ಫರಹಾನ ಸುಸೆ, ಫಿರೋಝ ಕುವಾರ, ಆದಿಲ ಖೋತ ಮುಖನಿಸ ನಾಚನ, ಸೈಫ ಆತಿಕ ನಾಚನ, ಯಾಹ್ಯಾ ಖೋತ, ರಾಫಿಲ ನಾಚನ, ರಾಝೀಲ ನಾಚನ, ಶಕೂಬ ವದಿವಕರ, ಕಾಶೀಫ ಬೆಲಾರೆ ಮತ್ತು ಮುಂಝಿರ ಕೇಪಿ ಆಗಿದೆ.

(ಸೌಜನ್ಯ: Republic World)

ಪುಣೆಯ ಕೊಂಡವಾ ಮತ್ತು ಮೊಮಿನಪುರದಲ್ಲಿ ದಾಳಿ

ಮೀರಾ-ಭಯಿಂದರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ 2 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೊಂಡವಾ (ಪುಣೆ)ಯಲ್ಲಿರುವ ತಾಲಾಬ ಕಾರ್ಖಾನೆಯ ಶೋಯೆಬ್ ಅಲಿ ಶೇಖ ಇವನ ಮನೆ ಮೇಲೆ ದಾಳಿ ನಡೆಸಿ, ಸಂಸ್ಥೆಯು 1 ಲ್ಯಾಪಟಾಪ ಮತ್ತು ಮೊಬೈಲ್ ವಶಕ್ಕೆ ಪಡೆದುಕೊಂಡಿದೆ. ಮೋಮಿನ್‌ಪುರ (ಪುಣೆ)ಯಲ್ಲಿರುವ ಅನ್ವರ್ ಅಲಿ ಎಂಬವನ ಮನೆಯ ಮೇಲೆ ನಡೆಸಿದ ದಾಳಿಯಲ್ಲಿ ಮೊಬೈಲ್, ಲ್ಯಾಪ ಟಾಪ್ ಮತ್ತು ಎರಡು ಕಡೆ ಅಲಗು ಇರುವ ಕತ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳದ ಮೂಲಕ ಈ ದಾಳಿಗಳನ್ನು ನಡೆಸಲಾಗಿದೆ. ಪಡಘಾ (ಭಿವಂಡಿ)ಯಿಂದ 7 ರಿಂದ 8 ಜನರನ್ನು ವಶಕ್ಕೆ ಪಡೆದುಕೊಂಡಿದೆ. ಪಡಘಾ ಗ್ರಾಮದ ಮೇಲೆ ತನಿಖಾ ದಳ ಗಮನವಿಟ್ಟಿದೆ. ಇಲ್ಲಿ ಅತಿ ದೊಡ್ಡ ಕಾರ್ಯಾಚರಣೆ ನಡೆದಿದೆ.

ಈ ಕಾರ್ಯಾಚರಣೆಯ ಮಾಧ್ಯಮದಿಂದ ಅಂತಾರಾಷ್ಟ್ರೀಯ ಭಯೋತ್ಪಾದಕ ಜಾಲ ಮತ್ತು ಐಸಿಸ್ ಕಾರ್ಯಕರ್ತರೊಂದಿಗಿನ ಸಂಬಂಧದ ಸಂಚು ಬಯಲಾಗಲಿದೆ ಎಂದು ತಿಳಿದುಬಂದಿದೆ. ಭಾರತದಲ್ಲಿ ಐಸಿಸ್‌ನ ಉಗ್ರಗಾಮಿ ವಿಚಾರ ಸರಣಿಯನ್ನು ಪ್ರಚಾರ ಮಾಡಲು ತೊಡಗಿರುವ ಓರ್ವ ಸೂತ್ರಧಾರನ ಸಮಾವೇಶವಿದೆ.