ಬೈರೂತ ನಗರವನ್ನು ಗಾಝಾ ಮಾಡುತ್ತೇವೆ ! – ನೆತನ್ಯಾಹು ಇವರಿಂದ ಲೆಬನಾನ್‌ಗೆ ಬೆದರಿಕೆ

ಇಸ್ರೈಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು

ತೆಲ್ ಅವಿವ (ಇಸ್ರೈಲ್) – ಲೆಬನಾನ್‌ನಿಂದ ಇಸ್ರೇಲ್ ಮೇಲೆ ದೊಡ್ಡ ಪ್ರಮಾಣದಲ್ಲಿ ದಾಳಿ ಮಾಡಲಾಗುತ್ತಿದೆ. ಇಲ್ಲಿನ ಭಯೋತ್ಪಾದಕ ಸಂಘಟನೆ ಹಿಜಬುಲ್ಲಾ ಇಸ್ರೈಲ್ ಗಡಿಯಲ್ಲಿ ಟ್ಯಾಂಕ್ ಗಳನ್ನು ನಾಶಪಡಿಸಿ, ಕ್ಷಿಪಣಿಯಾಸ್ತ್ರಗಳನ್ನು ಹಾರಿಸಿದೆ. ಇದರಲ್ಲಿ ಒರ್ವ ಇಸ್ರೈಲ್ ಪ್ರಜೆ ಸಾವನ್ನಪ್ಪಿದ್ದಾನೆ. ಇದರಿಂದ ಇಸ್ರೈಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಹಿಜಬುಲ್ಲಾಗೆ ಬೆದರಿಕೆ ಹಾಕಿದ್ದಾರೆ. ಅವರು ಮಾತನಾಡುತ್ತಾ, ಲೆಬನಾನ್‌ನಿಂದ ದಾಳಿಗಳು ನಿಲ್ಲದಿದ್ದರೆ, ಇಸ್ರೈಲಿ ಸೈನ್ಯವು ಗಾಜಾದಂತೆಯೇ ಲೆಬನಾನ್ ರಾಜಧಾನಿ ಬೈರುತ್ ಅನ್ನು ನಾಶಪಡಿಸುತ್ತೇವೆ ಎಂದು ಹೇಳಿದರು.

(ಸೌಜನ್ಯ: WION)

ಹಮಾಸ್‌ನ ಹಲವು ಭಯೋತ್ಪಾದಕರ ಶರಣಾಗತಿ !

ಹಮಾಸ ಭಯೋತ್ಪಾದಕರು ಒಳ ಉಡುಪುಗಳನ್ನು ಮಾತ್ರ ಧರಿಸಿ, ಕಣ್ಣುಮುಚ್ಚಿ ಮತ್ತು ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡಿರುವ ಅವಸ್ಥೆಯಲ್ಲಿ ಮರುಭೂಮಿಯಲ್ಲಿ ಕುಳಿತುಕೊಂಡಿರುವ ಮತ್ತು ಹಿಂದೆ ಇಸ್ರೈಲಿ ಸೈನಿಕರು ನಿಂತಿರುವ ಛಾಯಾಚಿತ್ರಗಳನ್ನು ಪ್ರಸಾರ ಮಾಡಿದೆ. ಇದಕ್ಕೆ ಇಸ್ರೈಲ್ ಗಾಝಾದಲ್ಲಿರುವ ಪ್ಯಾಲೇಸ್ಟಿನಿಯನ್ ನಾಗರಿಕರನ್ನು ಒತ್ತೆಯಾಳಾಗಿ ಹಿಡಿದಿಟ್ಟುಕೊಂಡಿದೆ ಎಂದು ಆರೋಪಿಸಲಾಗಿದೆ; ಆದರೆ, ಹಮಾಸ್ ಉಗ್ರರು ಶರಣಾಗಿದ್ದಾರೆ ಎಂದು ಇಸ್ರೈಲ್ ಹೇಳಿಕೊಂಡಿದೆ. ಈ ಶರಣಾಗತಿ ಜಬಾಲಿಯಾ ಪ್ರದೇಶದಲ್ಲಿ ಆಗಿದೆಯೆಂದು ಹೇಳಲಾಗಿದೆ.

ಗಾಜಾದಲ್ಲಿ ಇದುವರೆಗೆ 17 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ !

ಗಾಝಾದ ಆರೋಗ್ಯ ಸಚಿವಾಲಯವು ಇಸ್ರೈಲ್ ನ ದಾಳಿಯಲ್ಲಿ ಇದುವರೆಗೆ ಒಟ್ಟು 17 ಸಾವಿರ 177 ಜನರು ಸಾವನ್ನಪ್ಪಿದ್ದಾರೆ ಮತ್ತು 46 ಸಾವಿರ ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಅಮೇರಿಕಾದ ಯಹೂದಿ ದೇವಸ್ಥಾನದ ಹೊರಗೆ ಗುಂಡಿನ ದಾಳಿ !

ಅಮೇರಿಕಾದ ನ್ಯೂಯಾರ್ಕ್ ನಗರದ ಓರ್ವ ವ್ಯಕ್ತಿ ಯಹೂದಿ ದೇವಸ್ಥಾನದ ಹೊರಗೆ ಗುಂಡಿನ ದಾಳಿ ನಡೆಸಿದ್ದಾನೆ. ಆ ಸಮಯದಲ್ಲಿ ಅವನು ಪ್ಯಾಲೆಸ್ಟೇನ ಅನ್ನು ವಿಮೋಚನೆಗೊಳಿಸುವ ಘೋಷಣೆಯನ್ನು ನೀಡುತ್ತಿದ್ದನು. ಆತನನ್ನು ಬಂಧಿಸಲಾಗಿದ್ದು, ಈ ಗುಂಡಿನ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರುವ ಸುದ್ದಿಯಿಲ್ಲ. ಈ ಕುರಿತು ಇಲ್ಲಿಯ ರಾಜ್ಯಪಾಲ ಕ್ಯಾಥಿ ಹ್ಯಾಚುಲ್ ಅವರು ಮಾತನಾಡಿ, ಆರೋಪಿಯ ವಯಸ್ಸು 28 ವರ್ಷವಾಗಿದ್ದು, ಅವನು ಸ್ಥಳೀಯ ನಿವಾಸಿಯಾಗಿದ್ದಾನೆ. ಅವನು ಗಾಝಾದ ಮೇಲಿನ ಇಸ್ರೈಲ್ ಆಕ್ರಮಣದಿಂದ ದುಃಖಿತರಾಗಿದ್ದನು ಎಂದು ಹೇಳಿದ್ದಾರೆ.