ಮುಸ್ಲೀಮರಿಂದ ಅಹಲ್ಯಾನಗರದಲ್ಲಿರುವ ಶ್ರೀ ಕಾನಿಫನಾಥ್ ದೇವಸ್ಥಾನದ 40 ಎಕರೆ ಭೂಮಿಯನ್ನು ಅನಧಿಕೃತವಾಗಿ ವಕ್ಫ್ ಬೋರ್ಡ್‌ ಗೆ ನೋಂದಣಿ !

ಕಾನಿಫ್‌ನಾಥ್ ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ. ರಿಷಿಕೇಶ್ ಬಾಂಗ್ರೆ ಅವರಿಂದ ಮಾಹಿತಿ

2005 ರಲ್ಲಿ ಅನಧಿಕೃತ ನೋಂದಣಿಯ ಘಟನೆ !

ಪುಣೆ,– ಅಹಲ್ಯಾನಗರದ ಗುಹಾ ತಾಲೂಕಿನ ಕನಿಫ್‌ನಾಥ್ ದೇವಸ್ತಾನದ 40 ಎಕರೆ ಜಮೀನನ್ನು ಮುಸ್ಲಿಂ ಸಮುದಾಯವು 2005 ರಲ್ಲಿ ವಕ್ಫ್ ಮಂಡಳಿಯಲ್ಲಿ ಅನಧಿಕೃತವಾಗಿ ನೋಂದಾಯಿಸಿದೆ; ಆದರೆ, ಈ ಬಗ್ಗೆ ಗ್ರಾಮಕ್ಕೆ ಯಾವುದೇ ರೀತಿಯಲ್ಲಿ ಮಾಹಿತಿ ನೀಡಿಲ್ಲ. ಈ ಆಧಾರದ ಮೇಲೆ ಅವರು ಅಧಿಕಾರ ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಅನುಸಾರವೇ ನವೆಂಬರ್ 13 ರಂದು ಮುಸ್ಲಿಮರು ಶ್ರೀ ಕಾನಿಫ್‌ನಾಥ್ ದೇವಸ್ಥಾನಕ್ಕೆ ನುಗ್ಗಿ ವಾರಕರಿಯವರನ್ನು ಥಳಿಸಿದ್ದಾರೆ ಎಂದು ಗುಹಾ ದೇವಸ್ಥಾನದ ಕಾರ್ಯದರ್ಶಿ ಶ್ರೀ ಕಾನ್ಹೋಬಾ ಮತ್ತು ಕನಿಫ್‌ನಾಥ್ ಟ್ರಸ್ಟ್ ಹೇಳಿದ್ದಾರೆ. ಗುಹಾ ದೇವಸ್ಥಾನದ ಸಚಿತ ಶ್ರೀ. ರಿಷಿಕೇಶ್ ಬಾಂಗರೆ ಅವರು ದಿನಪತ್ರಿಕೆ ‘ಸನಾತನ ಪ್ರಭಾತ್’ ವರದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

1. ಶ್ರೀ. ಹೃಷಿಕೇಶ್ ಬಾಂಗರೆ ಇವರು ಮಾತನ್ನು ಮುಂದುವರೆಸಿ, “ನಮ್ಮ ವಾರಕರಿಗಳು ಭಜನೆ ಮಾಡುತ್ತಿರುವಾಗ, ಕೆಲವು ಮುಸ್ಲಿಂ ಸಾಮಾಜಿಕ ಕಾರ್ಯಕರ್ತರು ನಮ್ಮ ವಾರಕರಿ ಸಹೋದರ ಸಹೋದರಿಯರನ್ನು ತಳ್ಳುತ್ತಾ ವಾರಕರಿಗಳ ಬೆಲೆಬಾಳುವ ವಸ್ತುಗಳಾದ ತಾಳಮೃದಂಗಗಳನ್ನು ಧ್ವಂಸಗೊಳಿಸಿದರು ಮತ್ತು ಹಿಂದೂ ಅರ್ಚಕರು ಮತ್ತು ವಾರಕರಿಯರನ್ನು ಅಮಾನುಷವಾಗಿ ಥಳಿಸಿದರು. ಈಗ ಅಲ್ಲಿನ ದೇವಸ್ಥಾನದಲ್ಲಿ ಹಿಂದೂಗಳು ಭಜನೆ ಮಾಡಬಹುದು; ಆದರೆ ಮತಾಂಧರು ಹಿಂದೂಗಳ ಪ್ರತಿಯೊಂದು ಕಾರ್ಯಕ್ರಮಕ್ಕೂ ಅಡ್ಡಿಪಡಿಸಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

2. ಈ ಕುರಿತು ವಕೀಲ ಪ್ರಸಾದ್ ಕೋಳಸೆ ಪಾಟಿಲ್ ಇವರು ಮಾತನಾಡಿ, ‘ಈ ಜಮೀನಿನಲ್ಲಿ ಹಾಕಲಾಗಿರುವ ಅಕ್ರಮ ದಾಖಲೆಗಳನ್ನು ಪರಿಶೀಲಿಸಿ ‘ಆರ್ಡರ ರಿಕಾಲ್’ ಆದೇಶಿಸುವಂತೆ ವಕ್ಫ್ ಮಂಡಳಿಗೆ ಅರ್ಜಿ ಸಲ್ಲಿಸಿದ್ದೇವೆ; ಆದರೆ ಇದುವರೆಗೂ ವಕ್ಫ್ ಮಂಡಳಿ ಈ ಬಗ್ಗೆ ಗಮನ ಹರಿಸಿಲ್ಲ. ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಅವರಿಗೆ ದೂರು ನೀಡಿದ್ದೇವೆ. ಇಡೀ ವಿಷಯವನ್ನು ಕಂದಾಯ ಇಲಾಖೆಯಿಂದ ತನಿಖೆ ನಡೆಸಬೇಕು; ಹೀಗಾಗಿ ಅರ್ಜಿ ಸಲ್ಲಿಸಲಾಗಿದೆ. ಅದರಂತೆ ತಮ್ಮ ಆದೇಶದಂತೆ ಜಿಲ್ಲಾಧಿಕಾರಿಗಳ ಸಮಿತಿಯನ್ನು ನೇಮಿಸಿದ್ದಾರೆ. ಅದರಂತೆ ಸಮಿತಿಯು ವರದಿಯನ್ನು ಅಂಗೀಕರಿಸಿ ರಾಜ್ಯ ಸರಕಾರಕ್ಕೆ ಕಳುಹಿಸಿದೆ; ಆದರೆ ಅದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದಾರೆ.

ಸಂಪಾದಕರ ನಿಲುವು

* ರಾಜ್ಯ ಸರಕಾರಕ್ಕೆ ವರದಿ ಕಳುಹಿಸಿದ್ದರೂ ಮತಾಂಧರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ !

* ಮತಾಂಧ ಮುಸ್ಲಿಮರು ಮತ್ತು ಅವರ ವಕ್ಫ್ ಬೋರ್ಡ್ ಹಿಂದೂ ದೇವಾಲಯಗಳ ಭೂಮಿಯನ್ನು ಹೇಗೆ ಕಬಳಿಸುತ್ತಿದೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಹಿಂದೂಗಳು ಸಂಘಟಿತರಾಗಿ ವಕ್ಫ್ ಬೋರ್ಡ್ ಮೇಲೆ ಕ್ರಮ ಕೈಗೊಳ್ಳಲು ಪ್ರಯತ್ನಿಸಬೇಕು !

* ಹಿಂದೂಗಳ ದೇವಾಲಯಗಳ ಭೂಮಿಯನ್ನು ಕಬಳಿಸುವ ಮತಾಂಧರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಸರಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಹಿಂದೂಗಳಿಗೆ ಭರವಸೆ ನೀಡುವುದು ಅಪೇಕ್ಷಿತವಿದೆ !