‘ಫೇಸ್‌ಬುಕ್’ ಮತ್ತು ‘ಇನ್‌ಸ್ಟಾಗ್ರಾಮ್’ ಅಶ್ಲೀಲತೆಯ ವ್ಯಾಪಾರ ಮತ್ತು ಅಪ್ರಾಪ್ತ ವಯಸ್ಕರನ್ನು ಲೈಂಗಿಕ ಸಂಬಂಧಕ್ಕೆ ಪ್ರಚೋದಿಸುತ್ತವೆ !

ಅಮೆರಿಕದ ನ್ಯೂ ಮೆಕ್ಸಿಕೋ ರಾಜ್ಯ ಸರಕಾರದಿಂದ ‘ಮೆಟಾ’ದ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ಗಂಭೀರ ಆರೋಪ !

ಜುಕರ್‌ಬರ್ಗ್ ವಿರುದ್ಧ ದೂರು ದಾಖಲು !

ಸಾಂತಾ ಫೆ (ಅಮೇರಿಕಾ) – ನ್ಯೂ ಮೆಕ್ಸಿಕೊದ ರಾಜ್ಯ ಸರಕಾರವು ಅಮೆರಿಕದ ಕಂಪನಿ ‘ಮೆಟಾ’ ಮಾಲೀಕ ಮಾರ್ಕ್ ಜುಕರ್‌ಬರ್ಗ್ ವಿರುದ್ಧ ದೂರು ದಾಖಲಿಸಿದೆ. ‘ಮೆಟಾ’ದ ‘ಫೇಸ್‌ಬುಕ್’ ಮತ್ತು ‘ಇನ್‌ಸ್ಟಾಗ್ರಾಮ್’ ಈ ಸಾಮಾಜಿಕ ಮಾಧ್ಯಮಗಳು ಮಕ್ಕಳಿಗೆ ಸುರಕ್ಷಿತವಲ್ಲ. ಅದು ಅಶ್ಲೀಲತೆಯ ವ್ಯಾಪಾರಕ್ಕಾಗಿ ಮತ್ತು ಅಪ್ರಾಪ್ತ ಮಕ್ಕಳಿಗೆ ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸಲು ಪ್ರಮುಖ ವೇದಿಕೆಯಾಗಿದೆ, ಎಂದು ರಾಜ್ಯ ಅಟಾರ್ನಿ ಜನರಲ್ ರೌಲ್ ಟೊರೆಜ್ ಗಂಭೀರ ಆರೋಪ ಮಾಡಿದ್ದಾರೆ.

ಟೊರೆಜ್ ಮಾಡಿದ ಗಂಭೀರ ದಾವೆಗಳು !

ಅಪ್ರಾಪ್ತ ಮಕ್ಕಳು ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ಅಶ್ಲೀಲ ವಿಷಯವನ್ನು ಓದಲು ಆಸಕ್ತಿ ಹೊಂದಿಲ್ಲದಿದ್ದರೂ, ಅವರು ನಿಷೇಧಿತ ವಿಷಯ ಅವರ ತನಕ ತಲುಪುತ್ತದೆ. ಜಾಹೀರಾತು ಆದಾಯದ ಮೇಲೆ ಪರಿಣಾಮ ಬೀರಬಹುದಾದ ರಕ್ಷಣೋಪಾಯಗಳನ್ನು ಜಾರಿಗೊಳಿಸಲು ‘ಮೆಟಾ’ ಸಿದ್ಧ ಇಲ್ಲ ಎಂದು ಹೇಳಿದೆ.

ಸಂಪಾದಕರ ನಿಲುವು

* ಭಾರತದಿಂದಲ್ಲ, ಅಶ್ಲೀಲತೆಯ ತವರಾಗಿರುವ ಅಮೇರಿಕಾದ ರಾಜ್ಯವೊಂದರ ಸರಕಾರವೇ ಈಗ ಅಂತಹ ಸಾಮಾಜಿಕ ಮಾಧ್ಯಮಗಳ ವಿರುದ್ಧ ಅಪರಾಧವನ್ನು ದಾಖಲಿಸಿದೆ. ಇದರಿಂದ ಈ ಮಾಧ್ಯಮಗಳ ಮಿತಿಮೀರಿದ ಬಳಕೆಗೆ ಭಾರತ ಕೂಡಲೇ ಕಡಿವಾಣ ಹಾಕಿದರೆ ಹಿತಕರವಾಗಲಿದೆ !