ಹಿಂದೂಗಳ ಭೂಮಿ ಕಬಳಿಸುವ ಯತ್ನ !
ಗುಯಾನಾ (ಜಾರ್ಗೆಟೌನ್) – ದಕ್ಷಿಣ ಅಮೆರಿಕಾದ ಬಳಿ ಕ್ರಿಕೆಟ್ ಸಂಘವಿರುವ ವೆಸ್ಟ್ ಇಂಡೀಸ್‌ನ ಒಂದು ಸಣ್ಣ ದ್ವೀಪ ದೇಶವಾದ ಗುಯಾನಾ, ಅತಿ ದೊಡ್ಡ ಹಿಂದೂ ಜನಸಂಖ್ಯೆಯನ್ನು ಹೊಂದಿದೆ; ಆದರೆ ಇದೀಗ ನೆರೆಯ ವೆನೆಜುವೆಲಾ ದೇಶವು ಈ ದೇಶದ ನೆಲದಲ್ಲಿ ತೈಲ ಮತ್ತು ಅನಿಲವನ್ನು ಕೊರೆಯಲು ಪ್ರಯತ್ನಿಸುತ್ತಿರುವುದರಿಂದ ಬಿಕ್ಕಟ್ಟು ಉದ್ಭವಿಸಿದೆ. ವೆನೆಜುವೆಲಾದಿಂದ ಹಿಂದೂಗಳ ಭೂಮಿಯನ್ನು ಕಬಳಿಸುವ ಸಾಧ್ಯತೆಯು ಹಿಂದೂಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದೆ.
1. ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರು ಗುಯಾನಾದ ಎಸ್ಸೆಕ್ವಿಬೋ ಪ್ರದೇಶದಲ್ಲಿ ತೈಲ, ಅನಿಲ ಮತ್ತು ಗಣಿಗಳ ಪರಿಶೋಧನೆ ಮತ್ತು ಹೊರತೆಗೆಯುವಿಕೆಯನ್ನು ತಕ್ಷಣವೇ ಪ್ರಾರಂಭಿಸಲು ದೇಶದ ಸರಕಾರಿ ಸ್ವಾಮ್ಯದ ಉದ್ಯಮಗಳಿಗೆ ಆದೇಶ ನೀಡಿದ್ದಾರೆ.
2. ಗುಯಾನಾದಲ್ಲಿ ಎರಡರಿಂದ ಎರಡೂವರೆ ಲಕ್ಷ ಹಿಂದೂಗಳು ವಾಸಿಸುತ್ತಿದ್ದಾರೆ. 2012 ರ ಅಂಕಿಅಂಶಗಳ ಪ್ರಕಾರ, ಎಸ್ಸೆಕ್ವಿಬೊ ಜನಸಂಖ್ಯೆಯ ಅಂದಾಜು 37 ಪ್ರತಿಶತದಷ್ಟು ಹಿಂದೂಗಳು ಇದ್ದಾರೆ. ಅವರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯಾಗಗಳನ್ನು ಮಾಡುತ್ತಾರೆ. ಈಗ, ಈ ಪ್ರದೇಶವನ್ನು ನಿಯಂತ್ರಿಸಲು ವೆನೆಜುವೆಲಾದ ಪ್ರಯತ್ನಗಳಿಂದ ಇಲ್ಲಿನ ಹಿಂದೂಗಳ ಮೇಲೆ ಏನು ಪರಿಣಾಮ ಬೀರುತ್ತದೆ ? ಇದು ಇನ್ನೂ ಸ್ಪಷ್ಟವಾಗಿಲ್ಲ. ‘ಹಿಂದೂ ಅಮೇರಿಕನ್ ಫೌಂಡೇಶನ್’ನ ಪೋಸ್ಟ್ ಪ್ರಕಾರ, ಗುಯಾನಾದಲ್ಲಿ ಹಿಂದೂಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು ತಮ್ಮ ಪದ್ದತಿ ಮತ್ತು ಸಂಪ್ರದಾಯಗಳನ್ನು ಮುಂದುವರಿಸಲು ಹೆಣಗಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಈ ಹಿಂದೂಗಳಿಗೆ ಸಹಾಯ ಮಾಡಲು ಭಾರತವು ಮುಂದಾಳತ್ವ ವಹಿಸಬೇಕು, ಎಂದು ದೇಶದ ಹಿಂದೂಗಳಿಗೆ ಅನಿಸುತ್ತದೆ ! |