‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶಿರ್ವಾದ !’ – ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜ್, ಇಂದೋರ್, ಮಧ್ಯಪ್ರದೇಶ

ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜ

ಫೋಂಡಾ,- ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಶಾಲಾ ಸಂಗೀತ ವಿಭಾಗದ ಸಮನ್ವಯಕ ಕು. ತೇಜಲ ಪತ್ರಿಕರ್ ಇವರು ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರನ್ನು 3ನೇ ಡಿಸೆಂಬರ್ 2023 ರಂದು ಭೇಟಿಯಾದರು. ಈ ವೇಳೆ ‘ಮಹರ್ಷಿ ಆಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯಕ್ಕೆ ನನ್ನ ಆಶೀರ್ವಾದ ಇದೆ’ ಎಂದು ಹೇಳಿದರು.

ಈ ಸಮಯದಲ್ಲಿ ಕು. ತೇಜಲ ಪತ್ರಿಕರ್ ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಗೀತ ಸಂಶೋಧನಾ ಕಾರ್ಯದ ಕುರಿತು ಮಾಹಿತಿ ನೀಡಿದರು. ಆಗ ಅವರಿಗೆ ಕಾರ್ಯ ಇಷ್ಟವಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೋವಾದಲ್ಲಿ 35ನೇ ಸ್ವರಸಾಮ್ರಾಗ್ಜಿ ಗಿರಿಜಾತಾಯಿ ಕೇಳ್ಕರ್ ಸಂಗೀತ ಉತ್ಸವವನ್ನು ಆಯೋಜಿಸಲಾಗಿತ್ತು. ಈ ಗಾಯನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಹಾರಾಜರು ಇಲ್ಲಿಗೆ ಬಂದಿದ್ದರು. ಈ ವೇಳೆ ಮಹರ್ಷಿ ಆಧ್ಯಾತ್ಮಿಕ ವಿಶ್ವವಿದ್ಯಾಲಯದ ಶ್ರೀ. ಮನೋಜ್ ಸಹಸ್ರಬುದ್ಧೆ ಮತ್ತು ಸೌ. ನೀತಾ ಸೋಲಂಕಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರ ಪರಿಚಯ

ಪದ್ಮಭೂಷಣ ಡಾ. ಪಂ. ಗೋಕುಲೋತ್ಸವ ಮಹಾರಾಜರು ಮಧ್ಯಪ್ರದೇಶದ ಇಂದೋರ್‌ನ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕರಾಗಿದ್ದಾರೆ. ಅವರು ಖಯಾಲ್, ಧ್ರುಪದ್, ಧಮಾರ್, ಪ್ರಬಂಧ ಗಾಯಕಿ ಮತ್ತು ಇತರ ಪ್ರಾಚೀನ ಭಾರತೀಯ ಸಂಗೀತ ಶೈಲಿಗಳಲ್ಲಿ ಪರಿಣತರಾಗಿದ್ದಾರೆ. ಅವರಿಗೆ ಸರಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣ ಮತ್ತು ಸರ್ಕಾರದ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಲಾಗಿದೆ.