150 ಶಸ್ತ್ರಸಜ್ಜಿತ ಪೊಲೀಸರು ಬರುವ ಮುನ್ನವೇ ಕಳ್ಳರು ಪರಾರಿ

ಭೋಜಪುರ (ಬಿಹಾರ) – ಇಲ್ಲಿನ ಆಕ್ಸಿಸ್ ಬ್ಯಾಂಕ್‌ನಲ್ಲಿ 15 ಲಕ್ಷ ರೂಪಾಯಿ ದರೋಡೆ ಮಾಡಲಾಯಿತು. ಬೆಳಗ್ಗೆ 10.15 ರ ಸುಮಾರಿಗೆ 7 ರಿಂದ 8 ಮಂದಿ ಕಳ್ಳರು ಗ್ರಾಹಕರಂತೆ ನಟಿಸಿ ಬ್ಯಾಂಕ್‌ಗೆ ನುಗ್ಗಿ, ಬ್ಯಾಂಕ್‌ನ ಬಾಗಿಲನ್ನು ಮುಚ್ಚಿ 12 ಮಂದಿ ಬ್ಯಾಂಕ್ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಈ ಸಂದರ್ಭದಲ್ಲಿ ಉದ್ಯೋಗಿಯೊಬ್ಬರು ತುರ್ತು ಗಂಟೆ (ಸೈರನ್) ಬಾರಿಸಿದರು. 15 ನಿಮಿಷಗಳ ನಂತರ ಪೊಲೀಸರು ಬ್ಯಾಂಕ್ ತಲುಪಿದರು; ಆದರೆ ಕಳ್ಳರು ಅದಕ್ಕೂ ಮುನ್ನ ಬ್ಯಾಂಕ್ ನಲ್ಲಿದ್ದ 15 ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಶೇಷ ಎಂದರೆ 150ಕ್ಕೂ ಹೆಚ್ಚು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಬ್ಯಾಂಕ್ ಅನ್ನು ಸುತ್ತುವರೆದು ದರೋಡೆಕೋರರಿಗೆ ಶರಣಾಗುವಂತೆ ಮನವಿ ಮಾಡಿದರು; ಆದರೆ ಪೊಲೀಸರು ಬರುವ 1 ನಿಮಿಷ ಮೊದಲೇ ದರೋಡೆಕೋರರು ಪಲಾಯನ ಮಾಡಿದ್ದರು.
ಸಂಪಾದಕೀಯ ನಿಲುವುಬೆಳಗ್ಗೆ 10.15 ರ ಸುಮಾರಿಗೆ 7 ರಿಂದ 8 ಮಂದಿ ಕಳ್ಳರು ಗ್ರಾಹಕರಂತೆ ನಟಿಸಿ ಬ್ಯಾಂಕ್‌ಗೆ ನುಗ್ಗಿ, ಬ್ಯಾಂಕ್‌ನ ಬಾಗಿಲನ್ನು ಮುಚ್ಚಿ 12 ಮಂದಿ ಬ್ಯಾಂಕ್ ನೌಕರರನ್ನು ಒತ್ತೆಯಾಳಾಗಿ ಇರಿಸಿಕೊಂಡರು. |
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಪುರಿಯಿಂದ ಜಗತ್ಪ್ರಸಿದ್ಧ ಜಗನ್ನಾಥ ರಥಯಾತ್ರೆಗೆ ಚಾಲನೆ!
ಭಾಗ್ಯನಗರ (ತೆಲಂಗಾಣ): ಹಿಂದೂ ವಿದ್ಯಾರ್ಥಿಗೆ ಮನೆ ಪಾಠದಲ್ಲಿ ‘ಕಲ್ಮಾ’ ಕಂಠಪಾಠ ಮಾಡಲು ಹೇಳಿದ ಶಿಕ್ಷಕಿ; ನೌಕರಿಯಿಂದ ವಜಾ!
ರಾಜಸ್ಥಾನ : ವಾಸ್ತವಕ್ಕಿಂತ ಹೆಚ್ಚು ಗೋವುಗಳಿವೆ ಎಂದು ಹೇಳಿ ಕೋಟ್ಯಂತರ ರೂಪಾಯಿಗಳ ಸರಕಾರಿ ಅನುದಾನ ಲೂಟಿ !