ಕಾನ್ವೆಂಟ್‌ ಶಾಲೆಗಳಿಗೆ ಹೋಗುವ ಮಕ್ಕಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಾರೆ !

ಕಾನ್ವೆಂಟ್‌ ಶಾಲೆಗೆ ಹೋಗುವ ಮಕ್ಕಳು ನಮ್ಮ ಭಾರತೀಯ ಸಂಸ್ಕೃತಿಯನ್ನು ಮರೆಯುತ್ತಾರೆ; ಇದಕ್ಕೆ ವ್ಯತಿರಿಕ್ತವಾಗಿ ಸನಾತನ ಹಿಂದೂ ಧರ್ಮದ ಶಿಕ್ಷಣ ಮತ್ತು ಆಚರಣೆ ಮಾಡುವ ಮಕ್ಕಳು ಆತ್ಮಬಲದಿಂದ ಯುಕ್ತರಾಗಿರುತ್ತಾರೆ. – ಡಾ. ಪೂಜಾ, ಜಂಟಿ ಅಧ್ಯಕ್ಷೆ, ಕಸ್ತೂರಬಾ ವಿದ್ಯಾನಿಕೇತನ, ಧೋರಿ, ಜಾರಖಂಡ.

ಕಾನ್ವೆಂಟ್‌ ಶಾಲೆಗಳಲ್ಲಿ ವಿಶಿಷ್ಟ ಷರತ್ತುಗಳ ಅಡಿಯಲ್ಲಿ ಶಿಕ್ಷಣ ಕೊಡಲಾಗುತ್ತದೆ, ಆದರೆ ಅಲ್ಲಿ ಓದುತ್ತಿರುವ ಬಹುತೇಕ ಮಕ್ಕಳು ಹಿಂದೂಗಳಾಗಿರುತ್ತಾರೆ. ಅಲ್ಲಿ ಕಲಿತ ವಿಧ್ಯಾರ್ಥಿಗಳು ಹಿಂದೂ ಸಂಸ್ಕೃತಿಯಿಂದ ದೂರ ಸರಿಯುತ್ತಿದ್ದಾರೆ. ‘ಆಂಗ್ಲ ಮಾಧ್ಯಮದಲ್ಲಿ ಕಲಿತ ವಿಧ್ಯಾರ್ಥಿಗಳು ಮಾತ್ರ ಯಶಸ್ವಿಯಾಗುತ್ತಾರೆ’, ಈ ತಪ್ಪು ಕಲ್ಪನೆಯಿಂದ ಪೋಷಕರು ಈಗಲಾದರೂ ಹೊರಬರಬೇಕು. ‘ವಿದ್ಯಾರ್ಥಿಗಳು ಸಂಸ್ಕಾರವಂತನಾದಾಗ ಮಾತ್ರ ಯಶಸ್ಸು ಕಾಣುತ್ತಾನೆ’. ಆಧುನಿಕ ಶಿಕ್ಷಣ ನೀಡುವುದರೊಂದಿಗೆ ಸಂಸ್ಕಾರದ ಶಿಕ್ಷಣವನ್ನು ನೀಡುವ ವಿದ್ಯಾಲಯಗಳನ್ನೇ ನಿಮ್ಮ ಮಕ್ಕಳಿಗಾಗಿ ಆಯ್ಕೆ ಮಾಡಿ !’