‘ಅನೇಕ ವರ್ಷಗಳಿಂದ ಸಾಧನೆಯನ್ನು ಮಾಡಿಯೂ ಪ್ರಗತಿಯಾಗದಿರುವ ಕೆಲವು ಸಾಧಕರಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಕೃಪೆಯಿಂದ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸದ್ಗುರು ಡಾ. ಮುಕುಲ ಗಾಡಗೀಳ ಇವರ ಸತ್ಸಂಗ ಲಭಿಸಿತು. ಅವರು ಆ ಸಾಧಕರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಲ್ಲಿನ ಅಡಚಣೆಗಳನ್ನು ತಿಳಿದುಕೊಂಡು ಅವರಿಗೆ ಮಾರ್ಗದರ್ಶನ ಮಾಡಿದರು. ಆ ಮಾರ್ಗದರ್ಶನದ ಅಂಶಗಳನ್ನು ಇಲ್ಲಿ ಕೊಡಲಾಗಿದೆ. ೨೫/೧೦ ನೇ ಸಂಚಿಕೆಯಲ್ಲಿ ಪ್ರಕಟಿಸಲಾದ ಲೇಖನದಲ್ಲಿ ನಾವು ‘ಮನಮುಕ್ತತೆಯಿಂದ ವರ್ತಿಸುವುದರ ಮಹತ್ವ, ಭಾವವನ್ನು ಹೇಗೆ ಹೆಚ್ಚಿಸಬೇಕು ? ಮತ್ತು ಗುರುಸೇವೆಯು ಪರಿಪೂರ್ಣವಾಗಲು ಏನು ಮಾಡಬೇಕು ?’, ಈ ಅಂಶಗಳನ್ನು ಓದಿದೆವು. ಈ ವಾರ ಲೇಖನದ ಮುಂದಿನ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ. (ಭಾಗ ೨)
೪. ಗುರುಸೇವೆಯು ಪರಿಪೂರ್ಣವಾಗಲು ಏನು ಮಾಡಬೇಕು ?
೪ ಈ ೧. ಮಾದರಿಗಾಗಿ ತೆಗೆಯುವ ಛಾಯಾಚಿತ್ರದ ಪ್ರಯೋಗದಲ್ಲಿಯೂ ‘ಸಾಧಕನ ಛಾಯಾಚಿತ್ರವು ಯೋಗ್ಯ ವಾಗಿಯೇ ಕಾಣಿಸಬೇಕು’, ಅದೇ ರೀತಿ ತೆಗೆಯುವುದು ಆವಶ್ಯಕವಾಗಿರುವುದಾಗಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಲಿಸುವುದು : ಒಮ್ಮೆ ಛಾಯಾಚಿತ್ರಗಳ ಒಂದು ಪ್ರಯೋಗ ನಡೆದಿತ್ತು. ಆಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಾದರಿಗಾಗಿ ಛಾಯಾಚಿತ್ರ ವನ್ನು (ಡಿಔಘ್) ತೆಗೆಯೋಣ’, ಎಂದು ಹೇಳಿದ್ದರು. ಹಾಗೆ ಛಾಯಾಚಿತ್ರವನ್ನು ತೆಗೆದ ನಂತರ ಆ ಛಾಯಾಚಿತ್ರದಲ್ಲಿ ಓರ್ವ ಸಾಧಕನ ಒಳವಸ್ತ್ರ (ಬನಿಯನ್) ಕಾಣಿಸುತ್ತಿತ್ತು. ಆಗ ಅವರು ಆ ತಪ್ಪನ್ನು ಅರಿವು ಮಾಡಿಕೊಟ್ಟರು ಮತ್ತು ”ಮಾದರಿಗಾಗಿ ಎಂದು ಛಾಯಾಚಿತ್ರವನ್ನು ತೆಗೆದಿದ್ದರೂ ಸಹ, ಅದನ್ನು ಯೋಗ್ಯ ರೀತಿಯಲ್ಲಿಯೇ ತೆಗೆಯಬೇಕು. ನಮ್ಮ ಪ್ರತಿಯೊಂದು ಕೃತಿ ಪರಿಪೂರ್ಣವೇ ಆಗಬೇಕು ಮತ್ತು ನಮಗೆ ಅಂತಹ ಅಭ್ಯಾಸವಾಗಬೇಕು” ಎಂದು ಹೇಳಿದರು. ಇದರಿಂದ ಅವರು ‘ಪ್ರತಿಯೊಂದು ಕೃತಿ ಚೆನ್ನಾಗಿಯೇ ಆಗಬೇಕು’, ಎಂಬುದನ್ನು ಕಲಿಸಿದರು.
೪ ಉ. ಇತರರಿಂದ ಪರಿಪೂರ್ಣ ಸೇವೆಯನ್ನು ಮಾಡಿಸಿಕೊಳ್ಳುವುದು
೪ ಉ ೧. ಆಪತ್ಕಾಲದಲ್ಲಿ ಇತರರ ಮೇಲೆ ಅವಲಂಬಿಸಿರಬಾರದು ! : ‘ಆಪತ್ಕಾಲದಲ್ಲಿ ನಾವು ಯಾವುದೇ ವಿಷಯದಲ್ಲಿ ಇತರರ ಮೇಲೆ ಅವಲಂಬಿಸಿರಬಾರದು. ಸಾಧಕರ ಮೇಲೆ ಯಾವುದೇ ವಿಷಯವನ್ನು ಬಿಟ್ಟುಕೊಡಬಾರದು. ನಾವು ಸತತವಾಗಿ ಬೆಂಬತ್ತಬೇಕು. ಈಗ ಆಪತ್ಕಾಲದಲ್ಲಿ ‘ಹಾಲಿನಿಂದ ನಾಲಿಗೆ ಸುಟ್ಟರೆ, ಮಜ್ಜಿಗೆಯನ್ನೂ ಊದಿ ಕುಡಿಯಬೇಕಾಗುತ್ತದೆ’, ಎಂಬ ಸ್ಥಿತಿ ಬಂದಿದೆ.
೪ ಉ ೨. ಇತರರಿಂದ ಸೇವೆಯನ್ನು ಮಾಡಿಸಿಕೊಳ್ಳುವಾಗ ಅವರ ಅಡಚಣೆಗಳನ್ನು ತಿಳಿದುಕೊಂಡು ಅವುಗಳನ್ನು ಬಿಡಿಸಿದರೆ, ಅವರ ಸೇವೆಯಲ್ಲಿನ ಅಡಚಣೆಗಳು ದೂರವಾಗಲು ಪ್ರಾರ್ಥನೆಯನ್ನು ಮಾಡಿದರೆ ಮತ್ತು ಅವರಿಗೆ ಪ್ರೋತ್ಸಾಹ ನೀಡಿದರೆ ಅವರೊಂದಿಗೆ ಆತ್ಮೀಯತೆ ನಿರ್ಮಾಣವಾಗುವುದು : ನಮ್ಮ ಬಳಿ ಸೇವೆಯ ಜವಾಬ್ದಾರಿಯಿದ್ದರೂ, ಇತರ ಸಾಧಕರಿಂದ ಅಧಿಕಾರದಿಂದ ಅಲ್ಲ, ಪ್ರೀತಿಯಿಂದ ಸೇವೆಯನ್ನು ಮಾಡಿಸಿಕೊಳ್ಳಬೇಕು, ಆಗಲೇ ಅವರಿಂದ ನಮಗೆ ಅಪೇಕ್ಷಿತವಿರುವ ಸೇವೆಯಾಗುತ್ತದೆ. ಪ್ರೀತಿಯಿಂದ ಸೇವೆಯನ್ನು ಮಾಡಿಸಿಕೊಳ್ಳಲು ಅವರೊಂದಿಗೆ ಮೊದಲು ಆತ್ಮೀಯತೆಯನ್ನು ಬೆಳೆಸಬೇಕು. ಸಾಧಕರಿಗೆ ‘ಸೇವೆಯನ್ನು ಮಾಡುವಾಗ ಏನಾದರೂ ಅಡಚಣೆಗಳು ಬರುತ್ತಿವೆಯೇ ? ಅವರಿಗೆ ಇತರ ಏನಾದರೂ ಅಡಚಣೆಗಳಿವೆಯೇ, ಉದಾ. ವೈಯಕ್ತಿಕ ಅಡಚಣೆಗಳಿವೆಯೇ ?’, ಎಂದು ಕೇಳಬೇಕು. ಸಾಧಕರ ಸೇವೆಯಲ್ಲಿನ ಅಡಚಣೆಗಳನ್ನು ದೂರಗೊಳಿಸಲು ಪ್ರಾರ್ಥನೆಯನ್ನೂ ಮಾಡಬಹುದು. ಆಗಾಗ ಸಾಧಕರನ್ನು ವಿಚಾರಿಸಿಕೊಳ್ಳಬೇಕು. ಅವರಿಗೆ ಪ್ರೋತ್ಸಾಹ ನೀಡಬೇಕು. ತಪ್ಪುಗಳಾಗುತ್ತಿದ್ದರೆ ಅವರಿಗೆ ತಿಳಿಸಿಹೇಳಬೇಕು. ಇದರಿಂದ ಸೇವೆ ಪರಿಪೂರ್ಣವಾಗಲು ಸಹಾಯವಾಗುತ್ತದೆ ಮತ್ತು ಆನಂದವೂ ಸಿಗುತ್ತದೆ, ಹಾಗೆಯೇ ಸಾಧಕರೊಂದಿಗೆ ಆತ್ಮೀಯತೆಯೂ ನಿರ್ಮಾಣವಾಗುತ್ತದೆ. ಸಾಧಕರ ಬಗ್ಗೆ ನಮಗೆ ಸತತವಾಗಿ ಕೃತಜ್ಞತಾಭಾವ ಇರಬೇಕು. ಹೀಗೆ ಮಾಡಿದರೆ ಈಶ್ವರನು ಸಹಾಯ ಮಾಡುತ್ತಾನೆ.
೪ ಉ ೩. ಸಹಸಾಧಕರ ಸೇವೆಯಲ್ಲಿ ಬರುವ ಅಡಚಣೆಗಳನ್ನು ದೂರಗೊಳಿಸಲು ಪ್ರಯತ್ನಿಸಿದರೆ ಸಮಷ್ಟಿ ಭಾವ ಮತ್ತು ವ್ಯಾಪಕತೆ ನಿರ್ಮಾಣವಾಗುತ್ತದೆ :ಸಹಸಾಧಕರ ಸೇವೆಯಲ್ಲಿ ಬರುವ ಅಡಚಣೆಗಳು ಸಹಜವಾಗಿ ದೂರವಾಗುವುದಿಲ್ಲ. ಅವುಗಳನ್ನು ದೂರಗೊಳಿಸಲು ಪ್ರಯತ್ನಿಸಬೇಕಾಗುತ್ತದೆ. ಹಾಗೆ ಪ್ರಯತ್ನಿಸಿದರೆ, ಆ ಅಡಚಣೆಗಳೂ ದೂರವಾಗುವವು ಮತ್ತು ನಮ್ಮಲ್ಲಿ ಸಮಷ್ಟಿ ಭಾವವೂ ನಿರ್ಮಾಣವಾಗುವುದು. ಸಮಷ್ಟಿ ಭಾವವೆಂದರೆ ವ್ಯಾಪಕತೆ ! ಎಲ್ಲ ಅಂಗಗಳಿಂದ ವಿಕಾಸವಾಗಬೇಕಾದರೆ, ಈ ರೀತಿ ಪ್ರಯತ್ನಿಸಬೇಕು. ಇದರಿಂದ ಸಾಧಕರಲ್ಲಿಯೂ ನಮ್ಮ ಬಗ್ಗೆ ಪ್ರೀತಿಯುಂಟಾಗುತ್ತದೆ.
೪ ಉ ೪.ಯಾವುದಾದರೂ ಸಾಧಕನಿಗೆ ಸೇವೆಯನ್ನು ಕೊಡುವಾಗ ಗುರುಸೇವೆಯ ಮೇಲೆ ಪರಿಣಾಮವಾಗಬಾರದೆಂದು; ಅವನಿಗೆ ಕೆಟ್ಟ ಶಕ್ತಿಗಳ ತೊಂದರೆ ಇದ್ದರೆ ಅವನ ಅಡಚಣೆಗಳನ್ನು ತಿಳಿದುಕೊಂಡು ಅದಕ್ಕೆ ಆಧ್ಯಾತ್ಮಿಕ ಮಟ್ಟದಲ್ಲಿನ ಉಪಾಯ ಗಳನ್ನು ಹೇಳಿ ಗುಣಪಡಿಸುವುದು ಆವಶ್ಯಕ ! : ಬೇರೊಬ್ಬ ಸಾಧಕನಿಗೆ ಸೇವೆಯನ್ನು ಕೊಟ್ಟರೆ ಮತ್ತು ಒಂದು ವೇಳೆ ಕೆಟ್ಟ ಶಕ್ತಿಗಳ ತೊಂದರೆಯಿಂದ ಅವನಿಂದ ಸೇವೆ ಆಗದಿದ್ದರೆ, ಗುರುಸೇವೆಯ ಮೇಲೆ ಪರಿಣಾಮವಾಗುತ್ತದೆ; ಆದ್ದರಿಂದ ನಾವು ಅವನ ಮೇಲೆ ಗಮನವಿಡಬೇಕು. ‘ಆ ಸಾಧಕನಿಗೆ ಕೆಟ್ಟ ಶಕ್ತಿಗಳ ತೊಂದರೆ ಇದೆಯೇ ? ಯಾವ ಕಾರಣದಿಂದ ಅವನಿಂದ ಸೇವೆ ಆಗುವುದಿಲ್ಲ ?’, ಎಂಬುದನ್ನು ತಿಳಿದು ಕೊಳ್ಳಬೇಕು. ನಾವು ಆಧ್ಯಾತ್ಮಿಕ ಸ್ತರದಲ್ಲಿನ ಉಪಾಯಗಳನ್ನು ಹೇಳಿ ಅವನ ಅಡಚಣೆಗಳನ್ನು ಬಿಡಿಸಿದರೆ, ಅವನೊಂದಿಗೆ ನಮ್ಮ ಆತ್ಮೀಯತೆ ಹೆಚ್ಚಾಗಲು ಸಹಾಯವಾಗುತ್ತದೆ ಮತ್ತು ನಮ್ಮ ಸೇವೆಯೂ ಪೂರ್ಣವಾಗುತ್ತದೆ.
೪ ಊ. ಗುರುಸೇವೆ ಚೆನ್ನಾಗಿ ಮಾಡಿದರೆ ನಮ್ಮಲ್ಲಿ ಸಾಧನೆಯ ತಳಮಳ ಹೆಚ್ಚಾಗಿ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
೪ ಎ. ಸೇವೆಯನ್ನು ಮಾಡುವಾಗ ಕಲಿಯಲು ಸಿಕ್ಕಿದ ಅಂಶ ಗಳನ್ನು ಪ್ರತಿದಿನ ಬರೆದು ಅವುಗಳನ್ನು ಮೈಗೂಡಿಸಿಕೊಳ್ಳುವುದು ಮತ್ತು ಸಮಷ್ಟಿಯ ಲಾಭಕ್ಕಾಗಿ ಅವುಗಳನ್ನು ಎಲ್ಲರವರೆಗೆ ತಲುಪಿಸುವುದು ಆವಶ್ಯಕ ! : ಸೇವೆಯನ್ನು ಮಾಡುವಾಗ ಕಲಿಯಲು ಸಿಕ್ಕಿದ ಅಂಶಗಳನ್ನು ಪ್ರತಿದಿನ ಬರೆದಿಡಬೇಕು. ಇದರಿಂದ ಆ ಅಂಶಗಳನ್ನು ತಿಳಿದುಕೊಂಡು ಅವುಗಳ ಮೇಲೆ ಚಿಂತನೆಯನ್ನು ಮಾಡಿ ಅವುಗಳನ್ನು ಮೈಗೂಡಿಸಿಕೊಳ್ಳಲು
ಸಾಧ್ಯವಾಗುತ್ತದೆ, ಹಾಗೆಯೇ ಸೇವೆಯ ಬಗ್ಗೆ ಇರುವ ಸಂದೇಹಗಳನ್ನು ಕೇಳಲು ಸಾಧ್ಯವಾಗುತ್ತದೆ. ಈ ಅಂಶಗಳನ್ನು ಸಮಷ್ಟಿಗೆ ಲಾಭವಾಗಲು ಎಲ್ಲರಿಗೆ ತಲುಪಿಸಬೇಕು. ಇದರಿಂದ ನಮ್ಮ ಸಮಷ್ಟಿ ಸಾಧನೆಯಾಗುತ್ತದೆ. – ಸದ್ಗುರು ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೦.೨೦೨೩) (ಮುಂದುವರಿಯುವುದು)
ಸದ್ಗುರು ಡಾ. ಮುಕುಲ ಗಾಡಗೀಳ ಇವರೊಂದಿಗೆ ಸಾಧನೆಯ ಕುರಿತು ಮಾತನಾಡುವಾಗ ಅವರ ಬಗ್ಗೆ ಅರಿವಾದ ಮತ್ತು ಕಲಿಯಲು ಸಿಕ್ಕಿದ ಅಂಶಗಳು
೧. ಸದ್ಗುರು ಡಾ. ಗಾಡಗೀಳ ಕಾಕಾರವರು ಅಷ್ಟಾಂಗ ಸಾಧನೆಯ ಬಗೆಗಿನ ಅಂಶ ಗಳನ್ನು ಹೇಳುವಾಗ ಅದನ್ನು ಅತ್ಯಂತ ನಮ್ರತೆಯಿಂದ, ಪ್ರಾಮಾಣಿಕತೆಯಿಂದ, ಹಾಗೆಯೇ ಅತ್ಯಂತ ಪಾರದರ್ಶ ಕತೆಯಿಂದ ಹೇಳುತ್ತಿದ್ದರು.
೨. ಅವರು ಪೂ. ವಾಮನ (ಸನಾತನ ಸಂಸ್ಥೆಯ ಎರಡನೇ ಬಾಲಸಂತರಾದ ಪೂ. ವಾಮನ ಅನಿರುದ್ಧ ರಾಜಂದೇಕರ, ವಯಸ್ಸು ೫ ವರ್ಷ) ಇವರ ಬಗ್ಗೆ ಅವರಿಗೆ ಅರಿವಾದ ಅಂಶಗಳನ್ನೂ ಹೇಳಿದರು.
೩. ಅವರು, ಯಾವುದೇ ವಿಷಯವು ಯೋಗಾಯೋಗದಿಂದ ಘಟಿಸುವುದಿಲ್ಲ. ಕಾರ್ಯಕಾರಣ ಭಾವದಿಂದ ಘಟಿಸುತ್ತದೆ, ಎಂದು ಹೇಳಿದರು.
೪. ಅವರ ಮಾತುಗಳನ್ನು ಕೇಳುವಾಗ ತುಂಬಾ ಶಾಂತವೆನಿಸುತ್ತಿತ್ತು.
೫. ‘ಅವರ ಮಾತುಗಳು ಮುಗಿದ ನಂತರ ನಮಗೆ ಹೆಚ್ಚು ಏನೂ ಮಾತನಾಡದೇ, ಶಾಂತವಾಗಿ ಕುಳಿತುಕೊಳ್ಳಬೇಕು’, ಎಂದೆನಿಸಿತು.’
– ಡಾ. ದುರ್ಗೇಶ ಸಾಮಂತ ಮತ್ತು ಡಾ. (ಸೌ.) ನಂದಿನಿ ಸಾಮಂತ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೦.೯.೨೦೨೩)