Ram Mandir Ayodhya : ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಉತ್ಸವಕ್ಕೆ 4 ಸಾವಿರ ಸಂತರು ಮತ್ತು ಮಹಂತರಿಗೆ ಆಮಂತ್ರಣ !

ಅಯೋಧ್ಯೆ (ಉತ್ತರ ಪ್ರದೇಶ) – ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ಮಹೋತ್ಸವವು ಜನವರಿ 22, 2024 ರಂದು ನಡೆಯಲಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಶುಭ ಹಸ್ತದಿಂದ ಮಂದಿರದ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಈ ಮಂಗಳಕರ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ದ ವತಿಯಿಂದ ದೇಶಾದ್ಯಂತವಿರುವ 4 ಸಾವಿರಕ್ಕಿಂತ ಅಧಿಕ ಸಂತರು ಹಾಗೂ ಮಹಂತರುಗಳಿಗೆ ಆಹ್ವಾನ ನೀಡಲಾಗುತ್ತಿದೆ.

1. ಈ ಆಮಂತ್ರಣ ಪತ್ರಿಕೆಯ ಛಾಯಾಚಿತ್ರ ಬಹಿರಂಗವಾಗಿದ್ದು, ಅದಕ್ಕನುಗುಣವಾಗಿ ಕಾರ್ಯಕ್ರಮವು ಅಭಿಷೇಕ ಮತ್ತು ಆರತಿಯಿಂದ ಆರಂಭವಾಗಲಿದೆ. ಈ ಸಮಾರಂಭವು 22 ಜನವರಿ 2024 ರಂದು ಮಧ್ಯಾಹ್ನ 12 ಗಂಟೆ 20 ನಿಮಿಷಕ್ಕೆ ಅಭಿಜಿತ್ ಮುಹೂರ್ತದಲ್ಲಿ ನಡೆಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ, ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ ಪಟೇಲ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಇತರ ವಿಶೇಷ ಅತಿಥಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

2. ಈ ಪತ್ರದಲ್ಲಿ, ನಿಮಗೆ ತಿಳಿದೇ ಇದೆ ಸುದೀರ್ಘ ಹೋರಾಟದ ಬಳಿಕ ಶ್ರೀ ರಾಮಜನ್ಮಭೂಮಿಯಲ್ಲಿ ಮಂದಿರದ ನಿರ್ಮಾಣ ಕಾರ್ಯ ನಡೆದಿದೆ. ಈ ಮಂಗಳಮಯ ಸಂದರ್ಭದಲ್ಲಿ, ನೀವು ಅಯೋಧ್ಯೆಯಲ್ಲಿ ಉಪಸ್ಥಿತರಿದ್ದು, ಪವಿತ್ರ ಘಟನೆಗೆ ಸಾಕ್ಷಿದಾರರಾಗಬೇಕು ಮತ್ತು ಈ ಮಹಾನ್ ಐತಿಹಾಸಿಕ ದಿನದ ಶೋಭೆಯನ್ನು ಹೆಚ್ಚಿಸಬೇಕು ಎಂದು ನಮ್ಮ ಪ್ರಬಲ ಇಚ್ಛೆಯಾಗಿದೆ. ಜನವರಿ 21 ರ ಮೊದಲು ಅಯೋಧ್ಯೆಗೆ ಬರಲು ನಿಯೋಜಿಸಿಕೊಳ್ಳಬೇಕೆಂದು ವಿನಂತಿಸುತ್ತೇವೆ. ನೀವು ಎಷ್ಟು ಬೇಗ ಅಯೋಧ್ಯೆಗೆ ಬರುವಿರೋ, ಅಷ್ಟು ಸೌಲಭ್ಯಗಳು ಸಿಗುತ್ತವೆ. ತಡವಾಗಿ ತಲುಪಿದರೆ, ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗೂ ಜನವರಿ 23, 2024 ರ ನಂತರ ತೆರಳಲು ನಿಯೋಜನೆ ಮಾಡಿಕೊಳ್ಳಬೇಕು ಎಂದು ಹೇಳಿದೆ.