ಗೊಂಬೆ ಮತ್ತು ಲಿಂಬೆ ಪತ್ತೆ !
ಧಾರವಾಡ – ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ರಮಾ ಗುಂಡೂರಾವ ಅವರ ಕೊಠಡಿಯಲ್ಲಿ ಯಾರೋ ಕಪ್ಪು ಗೊಂಬೆ, 3 ನಿಂಬೆ, ಅರಿಶಿನ ಮತ್ತು ಕುಂಕುಮ ಎಸೆದಿರುವುದು ಕಂಡು ಬಂದಿದೆ. ಪ್ರಾಧ್ಯಾಪಕಿ ಡಾ. ರಮಾ ಗುಂಡೂರಾವ ಅವರು ಕೆಲವು ದಿನಗಳ ಕಾಲ ರಜೆಯ ಮೇಲೆ ತೆರಳಿದ್ದರು. ಆ ಸಮಯದಲ್ಲಿ ಅವರ ಕೊಠಡಿ ಮುಚ್ಚಲಾಗಿತ್ತು. ಅವರು ಮರಳಿ ಬಂದ ಬಳಿಕ ಕೊಠಡಿಯನ್ನು ತೆರೆದಾಗ ಈ ವಸ್ತುಗಳು ಕಂಡು ಬಂದಿತು. ಕೊಠಡಿಯ ಕೀ ಅವರ ಬಳಿ ಇದ್ದ ಕಾರಣ ಕಿಟಕಿಯಿಂದ ವಸ್ತುಗಳನ್ನು ಎಸೆಯಲಾಗಿದೆಂದು ಹೇಳಲಾಗುತ್ತಿದೆ. ಈ ಘಟನೆಯ ಹಿಂದೆ ವೈಯಕ್ತಿಕ ಜಗಳವಿದೆಯೆಂದು ಹೇಳಲಾಗುತ್ತಿದೆ. ಪ್ರಾಧ್ಯಾಪಕಿ ರಮಾ ಗುಂಡೂರಾವ ಅವರ ಅಳಿಯ ಅದೇ ಇಲಾಖೆಯಲ್ಲಿ ಕೆಲಸ ಮಾಡುತ್ತಾರೆ. ಈ ಕೊಠಡಿಯ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ಕಾರಣದಿಂದಲೇ ಈ ಘಟನೆ ನಡೆದಿದೆಯೆಂದು ಅಲ್ಲಿನ ನೌಕರರು ಸಂಶಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಸಂಪಾದಕೀಯ ನಿಲುವುವಿಶ್ವವಿದ್ಯಾಲಯಗಳು ಅಥವಾ ಶಿಕ್ಷಣ ಸಂಸ್ಥೆಗಳು ತಮ್ಮನ್ನು ‘ಪ್ರಗತಿಪರ’ ಅಥವಾ ‘ಆಧುನಿಕ ಚಿಂತನೆಯ ಮೂಲ’ ಎಂದು ತಿಳಿಯುತ್ತವೆ. ಆದರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯೊಬ್ಬರ ಕೊಠಡಿಯಲ್ಲಿ ಇಂತಹ ಘಟನೆ ನಡೆದಿರುವುದು ಪ್ರಗತಿ(ಅಧೋ)ಪರರರಿಗೆ ನಾಚಿಕೆಗೇಡು ಎಂದೇ ಹೇಳಬೇಕು ! |