|
ನವದೆಹಲಿ – ದೇಶದ 4 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಸ್ಥಾನ ಮತ್ತು ಛತ್ತೀಸ್‌ಗಢದ 2 ರಾಜ್ಯಗಳಲ್ಲಿ ಕಾಂಗ್ರೆಸ್ ಸೋತು ಅಧಿಕಾರದಿಂದ ಕೆಳಗಿಳಿಯಬೇಕಾಯಿತು, ಅಲ್ಲಿ ಬಿಜೆಪಿ ಗೆದ್ದಿದೆ. ಅದೇ ಹೊತ್ತಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿಗೆ ಸೋಲಾಗಿದೆ. ಮಧ್ಯಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಡಿಸೆಂಬರ್ 4 ರಂದು ಮಿಜೋರಾಂನಲ್ಲಿ ಮತ ಎಣಿಕೆ ನಡೆಯಲಿದೆ.
ರಾಜಸ್ಥಾನದಲ್ಲಿ ರಾಜಕೀಯವಾಗಿ ಕಾಂಗ್ರೆಸ್ ನ ‘ಸರ್ ತಾನ್ ಸೆ ಜುದಾ’!
(‘ಸಾರ್ ತಾನ್ ಸೆ ಜುದಾ’ ಎಂದರೆ ದೇಹದಿಂದ ತಲೆಯನ್ನು ಬೇರ್ಪಡಿಸುವುದು)
ಚುನಾವಣೋತ್ತರ ಪರೀಕ್ಷೆಗಳಲ್ಲಿ (‘ಎಕ್ಸಿಟ್ ಪೋಲ್’ಗಳಲ್ಲಿ) ‘ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಹೇಳಲಾಗಿತ್ತು; ಆದರೆ ವಾಸ್ತವದಲ್ಲಿ ಮತ ಎಣಿಕೆ ನಂತರ ರಾಜಸ್ಥಾನದಲ್ಲಿ ಕಾಂಗ್ರೆಸ್ ಸೋತು ಬಿಜೆಪಿ ಅಧಿಕಾರಕ್ಕೆ ಬರುತ್ತಿರುವುದು ಕಂಡುಬಂತು. ರಾಜಸ್ಥಾನದಲ್ಲಿ ಪ್ರತಿ 5 ವರ್ಷಗಳ ನಂತರ ಅಧಿಕಾರವನ್ನು ಬದಲಾಯಿಸುವ ಸಂಪ್ರದಾಯ ಈ ಸಲವೂ ಮುಂದುವರೆದಿದೆ.
ಮಧ್ಯಪ್ರದೇಶದಲ್ಲಿ ‘ಲಾಡ್ಲಿ ಬಹನಾ’ ಯೋಜನೆಯಿಂದಾಗಿ ಲಾಭ; ಬಿಜೆಪಿ ಹೇಳಿಕೆ !
ಮಧ್ಯಪ್ರದೇಶದಲ್ಲಿ, ಹಿಂದಿನ ವಿಧಾನಸಭೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿದ ನಂತರ ಕಾಂಗ್ರೆಸ್ ಸರಕಾರವನ್ನು ರಚಿಸಿತ್ತು; ಆದರೆ ಒಂದೂವರೆ ವರ್ಷದ ನಂತರ ಶಾಸಕರು ಬಂಡಾಯವೆದ್ದು ಬಿಜೆಪಿಗೆ ಬೆಂಬಲ ನೀಡಿದ್ದರಿಂದ ಇಲ್ಲಿ ಮತ್ತೆ ಬಿಜೆಪಿ ಸರಕಾರ ರಚನೆಯಾಗಿತ್ತು. ಬಿಜೆಪಿ ಮತ್ತೆ ಇಲ್ಲಿ ಸರಕಾರ ರಚಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾಗ ಪ್ರಧಾನಿ ಮೋದಿಯವರನ್ನು ಎದುರು ಹಾಕಿಕೊಂಡು ಬಿಜೆಪಿ ಇಲ್ಲಿ ಚುನಾವಣೆ ಎದುರಿಸಿತು. ಪ್ರಧಾನಿ ಮೋದಿ ಕೂಡ ತಮ್ಮ ಹೆಸರಿನಲ್ಲಿ ಇಲ್ಲಿ ಮತ ಕೇಳಿದರು.
ಛತ್ತೀಸ್ ಗಢದಲ್ಲಿ ಬಿಜೆಪಿಗೆ ಅನಿರೀಕ್ಷಿತ ಗೆಲುವು !
ಛತ್ತೀಸ್‌ಗಢದಲ್ಲಿ ಹಿಂದಿನ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಕಳೆದ 5 ವರ್ಷಗಳಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಾಡಿದ ಕೆಲಸವನ್ನು ಶ್ಲಾಘಿಸುವಾಗ, ಕಾಂಗ್ರೆಸ್ ಸರಕಾರ ಹೋಗಿರುವುದು ಆಶ್ಚರ್ಯ ತಂದಿದೆ.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಅಚ್ಚರಿ ಮೂಡಿಸಿದೆ !
2014 ರಲ್ಲಿ ತೆಲಂಗಾಣ ರಾಜ್ಯದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ ಅಂದರೆ ಈಗಿನ ಭಾರತ್ ರಾಷ್ಟ್ರ ಸಮಿತಿ (‘ಬಿಆರ್‌ಎಸ್’), ರಚನೆಯಾದಾಗಿನಿಂದ ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದೆ. ಈ ಬಾರಿ ಅವರ ಅಧಿಕಾರ ಹೋಗುತ್ತದೆ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬುದು ಚುನಾವಣೋತ್ತರ ಪರೀಕ್ಷೆಯಿಂದ ಬಹಿರಂಗವಾಗಿತ್ತು. ವಾಸ್ತವವಾಗಿ ಇದು ಮತ ಎಣಿಕೆಯ ನಂತರ ಸ್ಪಷ್ಟವಾಗಿದೆ.
ಟಿ. ರಾಜಾ ಸಿಂಗ್ ವಿಜಯ
ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಮೂರನೇ ಬಾರಿಗೆ ಶಾಸಕರಾಗಿ ಗೆದ್ದಿದ್ದಾರೆ. ಭಾಗ್ಯನಗರದ ಗೋಶಾಮಹಲ್ ಚುನಾವಣಾ ಕ್ಷೇತ್ರದಿಂದ ಅವರು ಮತ್ತೆ ಗೆದ್ದಿದ್ದಾರೆ. ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿಯಿಂದ 6 ವರ್ಷಗಳ ಕಾಲ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು; ಆದರೆ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲು ಬಿಜೆಪಿ ಟಿ. ರಾಜಾ ಸಿಂಗ್ ಅವರನ್ನು ಮತ್ತೆ ಪಕ್ಷಕ್ಕೆ ತೆಗೆದುಕೊಳ್ಳಲಾಯಿತು.
ರಾಜಸ್ಥಾನ (ಒಟ್ಟು ಸೀಟುಗಳು 200) |
|
ಪಕ್ಷ | ಗೆಲುವು |
ಭಾಜಪ | 117 |
ಕಾಂಗ್ರಸ್ | 67 |
ಮಧ್ಯಪ್ರದೇಶ (ಒಟ್ಟು ಸ್ಥಾನಗಳು 230) |
|
ಭಾಜಪ | 167 |
ಕಾಂಗ್ರಸ್ | 61 |
ಛತ್ತೀಸ್‌ಗಡ್ (ಒಟ್ಟು ಸ್ಥಾನಗಳು 90) |
|
ಭಾಜಪ | 53 |
ಕಾಂಗ್ರೆಸ್ | 35 |
ತೆಲಂಗಾಣ (ಒಟ್ಟು ಸ್ಥಾನಗಳು 119) |
|
ಕಾಂಗ್ರಸ್ | 64 |
ಬಿ.ಆರ್.ಎಸ್. | 39 |
ಭಾಜಪ | 8 |