ಸೂರ್ಯನ ಬಗ್ಗೆ ಮಹತ್ವಪೂರ್ಣ ಮಾಹಿತಿಯನ್ನು ಕಳುಹಿಸಲು ‘ಆದಿತ್ಯ ಎಲ್-1 ನಿಂದ ಆರಂಭ !

ಬೆಂಗಳೂರು – ಸೂರ್ಯನ ಕುರಿತು ಮಹತ್ವಪೂರ್ಣ ಮಾಹಿತಿಯನ್ನು ಸಂಗ್ರಹಿಸಲು ಭಾರತದಿಂದ ಕಳುಹಿಸಲಾಗಿದ್ದ, ‘ಆದಿತ್ಯ-ಎಲ್ 1’ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಲು ಪ್ರಾರಂಭಿಸಿದೆ. ಇದರ ಎರಡೂ ‘ಪೇಲೋಡ್’ಗಳು, ಅಂದರೆ ಉಪಕರಣಗಳು, ಸೂರ್ಯನ ಬಗ್ಗೆ ಸಮಾಧಾನಕಾರಕ ಮಾಹಿತಿಯನ್ನು ಕಳುಹಿಸುತ್ತಿವೆ.

1. ‘ಸೋಲಾರ್ ವಿಂಡ್ ಐಯಾನ್ ಸ್ಪೆಕ್ಟ್ರೋಮೀಟರ್’ (ಸ್ವಿಸ್) ಮತ್ತು ‘ಸುಪ್ರಾಥರ್ಮಲ್ ಮತ್ತು ಎನರ್ಜಿಟಿಕ್ ಪಾರ್ಟಿಕಲ್ ಸ್ಪೆಕ್ಟ್ರೋಮೀಟರ್’ (ಸ್ಟೆಪ್ಸ) ಎಂದು ಈ ಉಪಕರಣಗಳ ಹೆಸರುಗಳಾಗಿವೆ. ಈ ಉಪಕರಣಗಳು ‘ಸೌರ ಪವನ ಅಯಾನ’, ಹಾಗೆಯೇ ‘ಪ್ರೋಟಾನ’ ಮತ್ತು ‘ಆಲ್ಫಾ ಕಣ’ ಯಶಸ್ವಿಯಾಗಿ ಅಳೆದಿವೆ.

2. ಇಸ್ರೋ, ಈ ಮಾಹಿತಿಯ ಮೂಲಕ ನಮಗೆ ಸೌರ ಚಂಡಮಾರುತದ ಕುರಿತು ಸಾಕಷ್ಟು ಮಾಹಿತಿ ಸಿಕ್ಕಿದೆ. ಇದರಿಂದ ಸೌರ ಚಂಡಮಾರುತದ ಹಿಂದಿರುವ ಕಾರಣಗಳು ಮತ್ತು ಭೂಮಿಯ ಮೇಲೆ ಆಗುವ ಪರಿಣಾಮಗಳ ವಿಷಯದಲ್ಲಿ ನಮಗೆ ಸಾಕಷ್ಟು ಮಾಹಿತಿ ಸಿಗಲಿದೆ. ಈ ಮಾಧ್ಯಮಗಳಿಂದ ಸೌರವ್ಯೂಹದ ಹವಾಮಾನದ ವಿಷಯದಲ್ಲಿಯೂ ಬಹಳಷ್ಟು ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದೆ.

3. ಹಾಗೆ ನೋಡಿದರೆ, ಸೂರ್ಯ ಮತ್ತು ಭೂಮಿಯ ನಡುವಿನ ಅಂತರವು 15 ಕೋಟಿ ಕಿ.ಮೀ ಆಗಿದ್ದು ಮತ್ತು ‘ಆದಿತ್ಯ ಎಲ್ 1’ ಉಪಗ್ರಹವು ಈ ದೂರದ ಶೇಕಡಾ 1 ರಷ್ಟನ್ನು ಮಾತ್ರ ಕ್ರಮಿಸಲಿದೆ. ಹೀಗಿದ್ದರೂ, ಸೂರ್ಯನ ಬಗ್ಗೆ ಭೂಮಿಯಿಂದ ಪಡೆಯಲಾಗದ ಮಾಹಿತಿ ಈ ಉಪಗ್ರಹದ ಮೂಲಕ ಲಭ್ಯವಾಗಲಿದೆ ಎಂದು ಇಸ್ರೋ ತಿಳಿಸಿದೆ. ಈ ಮಾಹಿತಿಯಿಂದ ಇತರ ನಕ್ಷತ್ರಗಳು, ಗೆಲಕ್ಸಿಗಳು ಮತ್ತು ಖಗೋಳಶಾಸ್ತ್ರದ ವಿವಿಧ ರಹಸ್ಯಗಳು ಮತ್ತು ನಿಯಮಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.