`ಶ್ರೀ. ದುರ್ಗೇಶ್ ಪರುಳಕರ ಅವರು ಬರೆದಿರುವ ‘ಯೋಗೇಶ್ವರ ಶ್ರೀಕೃಷ್ಣ’ ಈ ಗ್ರಂಥವನ್ನು ಓದಿದೆನು. ಶ್ರೀ. ಪರುಳಕರ ಇವರಿಗೆ ಧರ್ಮದ ವಿಷಯದ ವ್ಯಾಸಂಗದಿಂದ ಸಾಕಾರಗೊಂಡಿರುವ ಈ ಗ್ರಂಥವನ್ನು ಒಮ್ಮೆ ಓದಲು ಕೈಯಲ್ಲಿ ಹಿಡಿದರೆ ಅದನ್ನು ಕೆಳಗೆ ಇಡಲು ಮನಸ್ಸಾಗುವುದಿಲ್ಲ, ಅದು ಅಷ್ಟು ಮಂತ್ರಮುಗ್ಧಗೊಳಿಸುತ್ತದೆ ! ಭಗವಾನ ಶ್ರೀಕೃಷ್ಣನ ವಿಷಯದಲ್ಲಿ ಇಷ್ಟು ಸವಿಸ್ತಾರ ಮಾಹಿತಿಯು ಈ ಗ್ರಂಥದಿಂದ ಮೊದಲ ಬಾರಿಗೆ ಓದಲು ಸಿಕ್ಕಿತು. ಶ್ರೀಕೃಷ್ಣನಿಗೆ ಸಂಬಂಧಿಸಿದ ಅನೇಕ ಕಥೆಗಳೂ ತಿಳಿಯಿತು. ಶ್ರೀಕೃಷ್ಣನಿಗೆ ಸಂಬಂಧಿಸಿದ ಕಥೆಗಳು ಇತರೆ ಗ್ರಂಥಗಳಲ್ಲಿಯೂ ನೀಡಿರುತ್ತಾರೆ; ಆದರೆ ‘ಕಥೆಗಳಿಂದ ನಿರ್ದಿಷ್ಟವಾಗಿ ಯಾವ ಪಾಠವನ್ನು ಕಲಿಯಬೇಕು?’ ಎಂಬುದು ಈ ಪುಸ್ತಕದಿಂದ ಸಹಜವಾಗಿ ತಿಳಿದುಬರುತ್ತದೆ. ಈ ಗ್ರಂಥ ವಿದ್ವತ್ಪೂರ್ಣವಾಗಿದ್ದು ಸರಳವಾಗಿರುವುದು ಈ ಗ್ರಂಥದ ಒಂದು ವೈಶಿಷ್ಟ್ಯವೇ ಆಗಿದೆ. ಶ್ರೀ. ಪರುಳಕರ ಇವರ ಶ್ರೀಕೃಷ್ಣನ ಭಕ್ತಿಯ ಪರಿಮಳವು ಗ್ರಂಥವನ್ನು ಓದುತ್ತಿರುವಾಗ ಪಸರಿಸುತ್ತಿರುತ್ತದೆ. ಇದರಿಂದಾಗಿ ಈ ಗ್ರಂಥವನ್ನು ಓದುವಾಗ ಅನೇಕ ಸಲ ನನ್ನ ಭಾವಜಾಗೃತಿಯೂ ಆಯಿತು. ಶ್ರೀ. ಪರುಳಕರ ಇವರು ಶ್ರೀಕೃಷ್ಣನ ಮೇಲಿನ ಆಕ್ಷೇಪಣೆಗಳಿಗೆ ಅತ್ಯಂತ ವಿದ್ವತ್ಪೂರ್ಣವಾದ ಖಂಡನೆಯನ್ನೂ ಮಾಡಿದ್ದಾರೆ. ‘ಶ್ರೀಕೃಷ್ಣ ಭಕ್ತರು ಕೇವಲ ಉಪಾಸ್ಯದೇವತೆಯ ಭಕ್ತಿಯನ್ನು ಮಾಡುತ್ತಾರೆ. ಇದಿಷ್ಟು ಸಾಲುವುದಿಲ್ಲ, ಅವರಿಗೆ ನಮ್ಮ ಧಾರ್ಮಿಕ ಶ್ರದ್ಧೆಗಳನ್ನು ಉಲ್ಲಂಘಿಸುವವರ ವಿರುದ್ಧವೂ ಸರಿಯಾಗಿ ಪ್ರತೀವಾದವನ್ನು ಮಾಡಲು ಬರಬೇಕು. ಇಷ್ಟು ಪ್ರಖರ ಧರ್ಮಾಭಿಮಾನ ಅವರಲ್ಲಿರಬೇಕು ಎನ್ನುವ ಸಂದೇಶವನ್ನೇ ಅವರು ನೀಡಿದ್ದಾರೆ. ಇದರಿಂದಾಗಿ ಈ ಶ್ರೀ ಕೃಷ್ಣ ಚಾರಿತ್ರ್ಯಕ್ಕೆ ಪೂರ್ಣತ್ವವೂ ಬಂದಿದೆ. ಈ ಗ್ರಂಥದ ವಾಚನದಿಂದ ಸಾಧಕ ಮತ್ತು ಭಕ್ತರಲ್ಲಿ ಭಗವಾನ ಶ್ರೀಕೃಷ್ಣನ ಮೇಲಿನ ಶ್ರದ್ಧೆ ಮತ್ತು ಭಕ್ತಿ ದೃಢವಾಗುವುದು ಎಂದು ನನಗೆ ಖಾತ್ರಿಯಿದೆ.
“ಈ ಗ್ರಂಥವನ್ನು ತಪ್ಪದೇ ಓದಬೇಕು’, ಎನ್ನುವಂತಿದೆ. `ಗ್ರಂಥವನ್ನು ಓದಿದ ಬಳಿಕ ಓದುಗರು ಅವರ ಅಭಿಪ್ರಾಯವನ್ನು ಪ್ರಕಾಶಕರ ವಿಳಾಸಕ್ಕೆ ಟಪಾಲ ಮೂಲಕ ಅಥವಾ ಇ-ಮೇಲ್ ಮೂಲಕ ತಿಳಿಸಬೇಕು ಎಂದು ವಿನಂತಿ.
‘ಶ್ರೀ. ಪರುಳಕರ ಇವರ ಕೈಯಿಂದ ಇದೇ ರೀತಿಯ ಧರ್ಮ ಜಾಗೃತಿ ಮತ್ತು ಧರ್ಮ ರಕ್ಷಣೆಯ ಸೇವೆ ನಿರಂತರ ನಡೆಯಲಿ ಎನ್ನುವುದೇ ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ ! – ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ (24.10.2023)
ವ್ಯವಹಾರದಲ್ಲಿ ಮುಳುಗಿರುವವರಿಗೆ ಭಗವದ್ಗೀತೆ ಮಾರ್ಗದರ್ಶಕ ! – ದುರ್ಗೇಶ ಪರುಳಕರ, ಹಿರಿಯ ಲೇಖಕರು ಮತ್ತು ಉಪನ್ಯಾಸಕರು
ಶ್ರೀ ಕೃಷ್ಣನು ನಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಹೊಂದಿರುವ ‘ಭಗವಾನ’ ಎಂದು ಗುರುತಿಸಲಾಗುತ್ತದೆ. ಶ್ರೀ ಕೃಷ್ಣನು ತನ್ನ ಸಂಪೂರ್ಣ ಜೀವನವನ್ನು ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಬದಲಾವಣೆಗಾಗಿ ವಿನಿಯೋಗಿಸಿದನು. ಹಾಗಾದರೆ ಅವನು ಕೇವಲ ಹೇಗೆ ಭಗವಂತನಾಗುತ್ತಾನೆ ? ಸ್ವಾತಂತ್ರ್ಯವೀರ ಸಾವರಕರ ಅವರ ದೃಷ್ಟಿಯಿಂದ ಶ್ರೀರಾಮ ಮತ್ತು ಶ್ರೀಕೃಷ್ಣ ಇವರು ರಾಷ್ಟ್ರಪುರುಷರಾಗಿದ್ದಾರೆ. ರಾಮಾಯಣ, ಮಹಾಭಾರತ ಇದು ನಮ್ಮ ಐತಿಹಾಸಿಕ ಗ್ರಂಥಗಳಾಗಿವೆ. ಯಾವುದೇ ಬಿಕ್ಕಟ್ಟಿನ ಮುಂದೆ ಸೋಲನ್ನು ಒಪ್ಪಿಕೊಳ್ಳಬಾರದು. ನಾವು ನಿರಂತರವಾಗಿ ಪ್ರಯತ್ನವಾದಿಗಳಾಗಿರಬೇಕು ಎಂಬುದನ್ನು ಭಗವಾನ ಶ್ರೀಕೃಷ್ಣನಿಂದ ನಮಗೆ ಕಲಿಯಲು ಸಿಗುತ್ತಿದೆ. ಶ್ರೀಕೃಷ್ಣನು ತತ್ತ್ವಜ್ಞಾನವನ್ನು ಹೇಳುವ ಮೂಲಕ ಅರ್ಜುನನನ್ನು ಯುದ್ಧಕ್ಕೆ ಸಿದ್ಧಗೊಳಿಸಿದನು; ಆದರೆ ಇದನ್ನು ಮಾಡುವಾಗ, ಅವನಿಗೆ ಯಾವುದೇ ಒತ್ತಾಯ ಇರಲಿಲ್ಲ. ಅರ್ಜುನನಿಗೆ ವೈಚಾರಿಕ, ಭಾವನಾತ್ಮಕ ಮತ್ತು ಬೌದ್ಧಿಕ ಮಟ್ಟಗಳಲ್ಲಿ ಎಲ್ಲವನ್ನೂ ಮನವರಿಕೆ ಮಾಡಿಸಿದನು ಮತ್ತು ತದನಂತರವೇ ಅರ್ಜುನನು ಅದರಂತೆ ನಡೆದುಕೊಂಡನು. ನಾವು ಜೀವನದಲ್ಲಿ ಮುಳುಗಿಹೋದಾಗ, ಆಗ ಭಗವದ್ಗೀತೆಯು ನಮಗೆ ಮಾರ್ಗದರ್ಶಿಯಾಗುತ್ತದೆ ಎಂದು ಹೇಳಿದರು.