ಸಂಭಲ್ (ಉತ್ತರ ಪ್ರದೇಶ) – ರಾಷ್ಟ್ರೀಯ ಪರಿಷತ್ತು ಮತ್ತು ಶೈಕ್ಷಣಿಕ ಸಂಶೋಧನಾ ಸಂಸ್ಥೆಯ (ಎನ್.ಸಿ.ಇ.ಆರ್.ಟಿ.ಯ) ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸುವ ಬದಲು ಕುರಾನ್ ಅನ್ನು ಸೇರಿಸಿ ಎಂದು ಸಮಾಜವಾದಿ ಪಕ್ಷದ ಸಂಸದ ಡಾ. ಶಫೀಕರ್ ರೆಹಮಾನ್ ಬರ್ಕ ಆಗ್ರಹಿಸಿದ್ದಾರೆ. ಕೆಲವು ದಿನಗಳ ಹಿಂದೆ, ಎನ್.ಸಿ.ಇ.ಆರ್.ಟಿ.ಯ ಸಮಿತಿಯು ಶಾಲಾ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಲು ಶಿಫಾರಸು ಮಾಡಿದೆ. ಹೀಗಿರುವಾಗ, ಎನ್.ಸಿ.ಇ.ಆರ್.ಟಿ.ಯ ಸಮಿತಿಯು ‘ರಾಮಾಯಣ ಮತ್ತು ಮಹಾಭಾರತವನ್ನು ಪಠ್ಯಕ್ರಮದಲ್ಲಿ ಸೇರಿಸುವ ಸೂತ್ರವನ್ನು ತಿರಸ್ಕರಿಸಿದೆ ಹಾಗೂ ಅಂತಹ ಯಾವುದೇ ಸಮಿತಿಯನ್ನು ರಚಿಸಲಾಗಿಲ್ಲ’ ಎಂದು ಸ್ಪಷ್ಟಪಡಿಸಿದೆ.
(ಸೌಜನ್ಯ – IndiaTV)
ಸಂಸದ ಬರ್ಕ ಇವರು, ಕುರಾನ್‌ಗಿಂತ ಶ್ರೇಷ್ಠವಾದ ಗ್ರಂಥ ಇನ್ನೊಂದಿಲ್ಲ. ಎನ್.ಸಿ.ಇ.ಆರ್.ಟಿ.ಯ ಸಮಿತಿಯು ದೇಶಭಕ್ತಿಯ ಹೆಸರಿನಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸಲು ಶಿಫಾರಸು ಮಾಡುತ್ತದೆ. ಜಗತ್ತಿನ ಯಾವುದೇ ಶಿಕ್ಷಣದಲ್ಲಿ ದೇಶಭಕ್ತಿಯ ಕೊರತೆಯಿಲ್ಲ. ಎಲ್ಲಾ ಧರ್ಮಗಳ ಶಿಕ್ಷಣದಲ್ಲಿ ದೇಶಭಕ್ತಿಯನ್ನು ಹೊಂದಿವೆ. (ಹಾಗಾದರೆ, ‘ಮುಸ್ಲಿಮರು ವಂದೇ ಮಾತರಂ ಹೇಳಲು ಏಕೆ ನಿರಾಕರಿಸುತ್ತಾರೆ ?’, ಇದನ್ನು ಬರ್ಕಯವರು ಹೇಳಬೇಕು ! – ಸಂಪಾದಕರು)
ಸಂಪಾದಕೀಯ ನಿಲುವುಮುಸ್ಲಿಮರಿಗೆ ಮದರಸಾಗಳಲ್ಲಿ ಕುರಾನ್ ಕಲಿಸುತ್ತಿರುವಾಗ, ಇತರ ಶಾಲೆಗಳಲ್ಲಿ ಅವರಿಗೆ ಕುರಾನ್ ಕಲಿಸುವ ಅಗತ್ಯವೇನು ? |