High GDP India : ಆರ್ಥಿಕ ಬಿಕ್ಕಟ್ಟಿನ ನೆರಳಿನಲ್ಲಿರುವ ದೇಶಗಳ ನಡುವೆ ದಾಪುಗಾಲು ಹಾಕುತ್ತಿರುವ ಭಾರತೀಯ ಆರ್ಥಿಕತೆ !

  • ೨೦೨೩ ರಲ್ಲಿ ಶೇಕಡ ೬.೩ ರಷ್ಟು ವೇಗದಿಂದ ಬೆಳೆಯಲಿರುವ ಭಾರತೀಯ ಆರ್ಥಿಕ ವ್ಯವಸ್ಥೆ !

  • ಅಮೇರಿಕಾದ ಆರ್ಥಿಕ ವ್ಯವಸ್ಥೆ ಶೇಕಡ ೨.೧ ಹಾಗೂ ಚೀನಾದ ಶೇಕಡ ೫ ರಷ್ಟು ಬೆಳೆಯುವುದು !

ನವದೆಹಲಿ – ಆರ್ಥಿಕ ಬಿಕ್ಕಟ್ಟಿನ ತೂಗು ಕತ್ತಿ ಅಮೇರಿಕಾ ಮತ್ತು ಯುರೋಪ್ ದೇಶಗಳ ಮೇಲೆ ನೇತಾಡುತ್ತಿದೆ. ಇನ್ನೊಂದು ಕಡೆ ಚೀನಾದಲ್ಲಿ ಕೂಡ ಭೂಮಿ ವಹಿವಾಟು ಕ್ಷೇತ್ರ ಸೇರಿ ಬ್ಯಾಂಕಿಂಗ್ ಕ್ಷೇತ್ರದ ಆರ್ಥಿಕ ಅಡಚಣೆಗಳಲ್ಲಿ ಕೂಡ ಹೆಚ್ಚಳವಾಗುತ್ತಿದೆ. ಹೀಗಿರುವಾಗ ಭಾರತೀಯ ಆರ್ಥಿಕ ವ್ಯವಸ್ಥೆ ವೇಗವಾಗಿ ಬೆಳೆಯುತ್ತಿದ್ದು ೨೦೨೩ ರಲ್ಲಿ ಎಲ್ಲಕ್ಕಿಂತ ವೇಗವಾಗಿ ಭಾರತದ ಆರ್ಥಿಕ ವ್ಯವಸ್ಥೆ ಹೆಚ್ಚುವುದು ಎಂದು ವಿಶ್ವ ಬ್ಯಾಂಕ್ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯಂತಹ ಆರ್ಥಿಕ ಸಂಸ್ಥೆಗಳ ಸಮೀಕ್ಷೆಗಳು ನಮೂದಿಸಿವೆ.

ಭಾರತದ ಆರ್ಥಿಕ ವ್ಯವಸ್ಥೆ ಶೇಕಡ ೬.೩ ರಷ್ಟು ಏರಿಕೆಯಾಗಲಿದೆ, ಎಂದು ಹೇಳಲಾಗುತ್ತಿದೆ. ಜಗತ್ತಿನ ದೊಡ್ಡ-ದೊಡ್ಡ ದೇಶಗಳನ್ನು ಹೋಲಿಸಿದರೂ ಇದು ಅತೀ ಹೆಚ್ಚಾಗಿದೆ. ಎರಡನೆಯ ಸ್ಥಾನದಲ್ಲಿ, ಭಾರತದ ನೆರೆಯ ದೇಶ ಬಾಂಗ್ಲಾದೇಶವಿದ್ದು, ಅದರ ಆರ್ಥಿಕ ವ್ಯವಸ್ಥೆ ಶೇಕಡ ೬ ರಷ್ಟು ಹೆಚ್ಚುವುದು.

೧. ದಕ್ಷಿಣ ಅಮೇರಿಕಾದ ದೇಶ ಕೋಲಂಬಿಯ ಶೇಕಡಾ ೫.೬, ಫಿಲಿಪೈನ್ಸ್ ಶೇಕಡ ೫.೩, ಚೀನಾ ಶೇಕಡಾ ೫, ಹಾಗೂ ಇಂಡೋನೇಷಿಯಾದ ಆರ್ಥಿಕ ವ್ಯವಸ್ಥೆ ಶೇಕಡ ೫ ರಷ್ಟು ಹೆಚ್ಚಾಗುವುದೆಂದು ಅಂದಾಜಿಸಲಾಗಿದೆ.

೨. ಯುರೋಪಿಯನ್ ದೇಶ ಟರ್ಕಿಯ ಆರ್ಥಿಕ ವ್ಯವಸ್ಥೆ ಶೇಕಡ ೪ ರಷ್ಟು ಹೆಚ್ಚಾಗುವುದು, ಹಾಗೂ ಸಂಯುಕ್ತ ಅರಬ್ ಅಮೀರಾತ್ ಶೇಕಡ ೩.೪ , ಮೆಕ್ಸಿಕೋ ಶೇಕಡಾ ೩.೨, ಮತ್ತು ಬ್ರೆಜಿಲಿನ ಆರ್ಥಿಕ ವ್ಯವಸ್ಥೆ ಶೇಕಡ ೩.೧ ರಷ್ಟು ಹೆಚ್ಚಾಗುವುದು.

೩. ಜಗತ್ತಿನಲ್ಲಿನ ಎಲ್ಲಕ್ಕಿಂತ ಬೃಹತ್ ಆರ್ಥಿಕ ವ್ಯವಸ್ಥೆ ಆಗಿರುವ ಅಮೆರಿಕಾದ ಆರ್ಥಿಕ ವೃದ್ಧಿಯ ಪ್ರಮಾಣ ಶೇಕಡ ೨.೧ ಇರುವುದು. ರಶಿಯಾದ ಶೇಕಡಾ ೨.೨, ಕೆನಡಾ ಶೇಕಡ ೧.೩, ಫ್ರಾನ್ಸ್ ಶೇಖಡಾ ೧, ಸೌದಿ ಅರೇಬಿಯಾ ಶೇಕಡ ೦.೬ ಹಾಗೂ ಯುನೈಟೆಡ್ ಕಿಂಗ್ಡಂನ ಆರ್ಥಿಕ ವ್ಯವಸ್ಥೆಯಲ್ಲಿ ಕೇವಲ ಶೇಕಡಾ ೦.೫ ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಈ ದೇಶಗಳ ಆರ್ಥಿಕ ವ್ಯವಸ್ಥೆ ಸುಧಾರಿಸುವ ಬದಲು ಇಳಿಮುಖವಾಗುವುದು !

ಒಂದು ಕಾಲದಲ್ಲಿ ವಿಕಸಿತ ದೇಶವಾಗಿದ್ದ ಅರ್ಜೆಂಟಿನಾದ ಆರ್ಥಿಕ ವ್ಯವಸ್ಥೆ ಕೆಳಗಿಳಿಯುವುದು. ಈಗಿನ ಪ್ರಮಾಣಕ್ಕೆ ಹೋಲಿಸಿದರೆ ಇದು ಮೈನಸ್ ಶೇಕಡ ೨.೫ ಇರುವುದು. ಅದರಂತೆಯೇ ಎಸ್ಟೋನಿಯಾ, ಸ್ವೀಡನ್, ಪಾಕಿಸ್ತಾನ, ಜರ್ಮನಿ, ಲಿಥುಏನಿಯ ಮತ್ತು ಫಿನಲಂಡ್ ಇವುಗಳ ಆರ್ಥಿಕ ವ್ಯವಸ್ಥೆ ಕೂಡ ಇಳಿಮುಖವಾಗಲಿದೆ. ಪಾಕಿಸ್ತಾನ ಸಂಪೂರ್ಣ ದೇಶದ ಉತ್ಪಾದನೆ ಅಂದರೆ ಜಿಡಿಪಿ ಈ ವರ್ಷ ಶೇಕಡ ೦.೫ ರಷ್ಟು ಹೆಚ್ಚುವುದು.