೫ ವರ್ಷದ ನಂತರ ತೀರ್ಪು !
ವಲಸಾಡ (ಗುಜರಾತ) – ಇಲ್ಲಿಯ ನ್ಯಾಯಾಲಯವು ಆಝಾದ್ ರಿಯಾಜುದ್ದಿನ್ ಅನ್ಸಾರಿ (ವಯಸ್ಸು ೩೪ ವರ್ಷ) ಇವನಿಗೆ ಶ್ರೀ ಗಣೇಶನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿದ್ದರಿಂದ ೩ ವರ್ಷದ ಜೈಲು ಶಿಕ್ಷೆ ಹಾಗೂ ೫೦ ಸಾವಿರ ರೂಪಾಯಿಯ ದಂಡದ ಶಿಕ್ಷೆ ವಿಧಿಸಲಾಗಿದೆ. ಸೆಪ್ಟೆಂಬರ್ ೧೭, ೨೦೧೮ ರಲ್ಲಿ ಗಣೇಶೋತ್ಸವದ ಸಮಯದಲ್ಲಿ ಅನ್ಸಾರಿಯು ಫೇಸ್ಬುಕ್ ನಲ್ಲಿ ಒಂದು ಪೋಸ್ಟ್ ಪ್ರಸಾರ ಮಾಡಿ ಅದರಲ್ಲಿ ಶ್ರೀ ಗಣೇಶನ ಚಿತ್ರದ ಜೊತೆಗೆ ಶ್ರೀ ಗಣೇಶನ ಕುರಿತು ಅಶ್ಲೀಲ ಹೇಳಿಕೆ ನೀಡಿದ್ದನು. ಅದರಲ್ಲಿ ಅವನು, ‘ಶ್ರೀ ಗಣೇಶನ ಪೂಜೆ ಮಾಡುವ ನಾಯಿ, ಒಂದು ನಾಯಿ ಮೂರ್ತಿಯನ್ನು ನೆಕ್ಕುತ್ತಿರುವುದನ್ನು ತೋರಿಸಲಾಗಿತ್ತು. ಇದರಿಂದ ಅವನ ವಿರುದ್ಧ ದೂರು ನೀಡಲಾಗಿತ್ತು, ಅದರ ನಂತರ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಈ ಅವಮಾನದ ಮಾಹಿತಿ ದೊರೆತನಂತರ ವಲಸಾಡ ನಗರದಲ್ಲಿನ ಗೋರಕ್ಷಕರು ಅನ್ಸಾರಿಯ ಅಂಗಡಿಯ ಹತ್ತಿರ ಹೋಗಿ ವಿರೋಧ ವ್ಯಕ್ತಪಡಿಸಿದ್ದರು ಹಾಗೂ ಅವನಿಗೆ ಚಪ್ಪಲಿಯ ಹಾರ ಹಾಕಿ ಮೆರವಣಿಗೆ ತೆಗೆದಿದ್ದರು. ಅದರ ನಂತರ ಪೊಲೀಸರು ಅವನನ್ನು ಬಂಧಿಸಿದ್ದರು.
Gujarat: Azad Riyazuddin Ansari sentenced to three years in prison for derogatory post about Lord Ganesha on Facebook https://t.co/UKojopEgbs
— OpIndia.com (@OpIndia_com) November 26, 2023
ಸಂಪಾದಕರ ನಿಲುವು* ಹಿಂದೂಗಳ ದೇವತೆಗಳ ಅವಮಾನದ ಬಗ್ಗೆ ೫ ವರ್ಷ ಮೊಕದ್ದಮೆ ನಡೆಯುವುದಾದರೆ ಈ ರೀತಿ ಅವಮಾನ ಮಾಡಿದವರಿಗೆ ಭಯ ಹೇಗೆ ಹುಟ್ಟುವುದು ? * ಪಾಕಿಸ್ತಾನದಲ್ಲಿ ಅಲ್ಲಾನ ಅವಮಾನ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ; ಭಾರತದಲ್ಲಿ ಕೂಡ ಹಿಂದುಗಳ ದೇವತೆಗಳ ಅವಮಾನಕ್ಕಾಗಿ ಅಂತಹ ಶಿಕ್ಷೆ ನೀಡಬೇಕು ! |