ಕೇರಳದ ಮದರಸಾದಲ್ಲಿ ಲೈಂಗಿಕ ದೌರ್ಜನ್ಯ ಮಾಡಿದ ಪ್ರಕರಣದಲ್ಲಿ 3 ಮೌಲ್ವಿಗಳ ಬಂಧನ

ತಿರುವನಂತಪುರಂ – ಕೇರಳದಲ್ಲಿ ಮದರಸಾಗಳಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಬಲಾತ್ಕಾರ ನಡೆಸಿರುವ ಎರಡು ಆಘಾತಕಾರಿ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪ್ರಕರಣದಲ್ಲಿ 3 ಮೌಲ್ವಿಗಳನ್ನು ಬಂಧಿಸಲಾಗಿದೆ. ಪ್ರಸಾರ ಮಾಧ್ಯಮಗಳು ನೀಡಿರುವ ಮಾಹಿತಿಯನುಸಾರ, ಎಲ್. ಸಿದ್ದಿಕಿ, ಮಹಮ್ಮದ್ ಶಮೀರ್ ಮತ್ತು ಮಹಮ್ಮದ ರಸಲಾಲ ಈ 3 ಮದರಸಾ ಶಿಕ್ಷಕರ ಮೇಲೆ ಅಸ್ವಾಭಾವಿಕ ಅತ್ಯಾಚಾರದ ಆರೋಪ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಾಲಕಲ್ಯಾಣ ಸಮಿತಿ ದೂರು ನೀಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆರೋಪಿ ವಿರುದ್ಧ ‘ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾಯ್ದೆ’ (ಪೋಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮದರಸಾದ ಶಿಕ್ಷಕರಿಂದ ಸುಮಾರು ಒಂದು ವರ್ಷಗಳಿಂದ ಈ ಕೃತ್ಯ ನಡೆಯುತ್ತಿತ್ತು. ‘ಈ ಲೈಂಗಿಕ ಕಿರುಕುಳದ ಬಗ್ಗೆ ಬಹಿರಂಗಪಡಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’, ಎಂದು ಮದರಸಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಸಂಪಾದಕೀಯ ನಿಲುವು

ಈ ವಿಷಯದಲ್ಲಿ ಪ್ರಗತಿಪರರು, ಕಮ್ಯುನಿಸ್ಟ್, ಜಾತ್ಯತೀತವಾದಿ ಪ್ರಸಾರ ಮಾಧ್ಯಮಗಳು ಏಕೆ ಮೌನ ?