Dublin Riots : ಮುಸ್ಲಿಂ ನಿರಾಶ್ರಿತರ ದಾಳಿಯಿಂದಾಗಿ ಡಬ್ಲಿನ್‌ನಲ್ಲಿ ರಾಷ್ಟ್ರೀಯವಾದಿ ಗುಂಪಿನಿಂದ ಹಿಂಸಾಚಾರ !

  • ಯುರೋಪನಲ್ಲಿ ಹೆಚ್ಚುತ್ತಿರುವ ನಿರಾಶ್ರಿತರ ವಿರೋಧಿ ವಾತಾವರಣ ಐರ್ಲೆಂಡ್‌ನಲ್ಲಿ ಪ್ರದರ್ಶನ!

  • ನಿರಾಶ್ರಿತರು ನಡೆಸಿದ ಚಾಕುವಿನ ದಾಳಿಗೆ 3 ಚಿಕ್ಕಮಕ್ಕಳೊಂದಿಗೆ ಒಬ್ಬ ಮಹಿಳೆ ಗಾಯಾಳು!

ಡಬ್ಲಿನ್ (ಐರ್ಲೆಂಡ್) – ಇಲ್ಲಿ ನವೆಂಬರ್ 23 ರ ಮಧ್ಯಾಹ್ನ ಶಾಲೆಯ ಹೊರಗೆ ನಡೆದಿರುವ ಮಕ್ಕಳ ಮೇಲಿನ ದಾಳಿಯನ್ನು ಪ್ರತಿಭಟಿಸಿ ಹಿಂಸಾಚಾರ ನಡೆಯಿತು. ಸುಮಾರು 200 ಜನರ ಹಿಂಸಾತ್ಮಕ ಗುಂಪು ನಡೆಸಿದ ದಾಳಿಯಲ್ಲಿ 13 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿದೆ. ಮೂಲಭೂತ ರಾಷ್ಟ್ರವಾದಿ ಗುಂಪು ನಡೆಸಿದ ಈ ಹಿಂಸಾಚಾರದಲ್ಲಿ ಪೊಲೀಸರ 11 ಪೊಲೀಸ್ ವಾಹನಗಳು, 3 ಬಸಗಳು ಮತ್ತು 1 ಟ್ರಾಮ್‌ಗೆ ಬೆಂಕಿ ಹಚ್ಚಲಾಗಿದೆ. ಈ ವೇಳೆ ಓರ್ವ ಪೊಲೀಸ್ ಅಧಿಕಾರಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪ್ರಕರಣದಲ್ಲಿ 34 ಮಂದಿಯನ್ನು ಬಂಧಿಸಲಾಗಿದೆ.

( ಸೌಜನ್ಯ : Sky News )

ಈ ಹಿಂಸಾಚಾರ ರಾಷ್ಟ್ರಪ್ರೇಮದಿಂದಲ್ಲ, ದ್ವೇಷದಿಂದ ಮಾಡಲಾಗುತ್ತದೆ! – ಪ್ರಧಾನಮಂತ್ರಿ ಲಿಯೋ ವರಾಡಕರ

ಐರ್ಲೆಂಡ್ ಪ್ರಧಾನಮಂತ್ರಿ ಲಿಯೋ ವರಾಡಕರ ಅವರು ಹಿಂಸಾಚಾರವನ್ನು ಖಂಡಿಸುತ್ತಾ, “ಈ ಹಿಂಸಾಚಾರದಿಂದ ಐರ್ಲೆಂಡ್ ಗೌರವ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.” ಎಂದು ಹೇಳಿದ್ದಾರೆ. ಅವರು ತಮ್ಮ ಮಾತನ್ನು ಮುಂದುವರಿಸಿ, ಈ ಹಿಂಸಾಚಾರ ದೇಶಭಕ್ತಿಯಿಂದಲ್ಲ, ದ್ವೇಷಭಾವನೆಯಿಂದ ನಡೆದಿದೆ ಎಂದು ಹೇಳಿದರು. ಹಿಂಸಾಚಾರ ಮಾಡುವವರ ಆದ್ಯತೆ ಮಕ್ಕಳನ್ನು ರಕ್ಷಣೆ ಮಾಡುವುದಕ್ಕಿಂತ ಅಂಗಡಿಗಳನ್ನು ಲೂಟಿ ಮಾಡುವುದಾಗಿತ್ತು.

1. ನವೆಂಬರ್ 23 ರ ಮಧ್ಯಾಹ್ನ, ‘ಸಿಟಿ ಸೆಂಟರ್ ಪ್ರೈಮರಿ ಸ್ಕೂಲ್’ ಶಾಲೆಯ ಹೊರಗೆ ಒಬ್ಬ ನಿರಾಶ್ರಿತ ಮುಸಲ್ಮಾನನು 3 ಮಕ್ಕಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಹಿಳೆ ಮತ್ತು ಪುರುಷ ಸಹ ಗಾಯಗೊಂಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಡಬ್ಲಿನ್ ನಗರದಲ್ಲಿ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲ ಎಂದು ಆರೋಪಿಸಿ ಗುಂಪು ಹಿಂಸಾಚಾರ ನಡೆಸಿದೆ.
2. ‘ಬಲಪಂಥೀಯ ಸಂಘಟನೆಗಳು ಅಪಪ್ರಚಾರ ಮತ್ತು ವದಂತಿಗಳನ್ನು ಹಬ್ಬಿಸುತ್ತಿವೆ’ ಎಂದು ಪೊಲೀಸರು ಆರೋಪಿಸಿದ್ದಾರೆ.
3. ಈ ಹಿಂಸಾಚಾರದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಒಂದು ವೀಡಿಯೊದಲ್ಲಿ ಪ್ರದರ್ಶನ ಮಾಡುವ ಜನರು ” ಈ ದುಷ್ಟರು ಐರಿಶ್ ಜನರ ಮೇಲೆ (ನಿರಾಶ್ರಿತರು) ದಾಳಿ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

ಲಕ್ಷಾಂತರ ಮುಸ್ಲಿಂ ನಿರಾಶ್ರಿತರಿಂದಾಗಿ, ಯುರೋಪಿನ ಸಂಪನ್ಮೂಲಗಳಿಂದ ಪ್ರಯೋಜನ ಸ್ಥಳೀಯ ಜನರಿಗೆ ಸಿಗುತ್ತಿಲ್ಲ. ಹೀಗಾಗಿ ಅಲ್ಲಿನ ಜನರು ಈಗ ಬೇಸತ್ತಿದ್ದಾರೆ. ಇದರಿಂದಾಗಿಯೇ ನೆದರ್ಲೆಂಡನಲ್ಲಿ ಮೂಲಭೂತ ನಿರಾಶ್ರಿತರ ವಿರೋಧಿ ವ್ಯಕ್ತಿಯೊಬ್ಬರು ಪ್ರಧಾನಿಯಾಗುತ್ತಿದ್ದಾರೆ. ಹಂಗೇರಿ, ಸ್ವೀಡನ್, ಫಿನ್ ಲ್ಯಾಂಡ ಮತ್ತು ಇಟಲಿಯಲ್ಲಿ ಮೊದಲಿನಿಂದಲೇ ಮೂಲಭೂತ ರಾಷ್ಟ್ರವಾದಿ ಪಕ್ಷಗಳ ಅಧಿಕಾರವಿದ್ದು, ಮುಂದಿನ ಕ್ರಮಾಂಕ ಐರ್ಲೆಂಡ್ ಆಗಿದ್ದರೆ, ಆಶ್ಚರ್ಯಪಡಬಾರದು!