ಶಾಲೆಗಳಲ್ಲಿ ರಾಮಾಯಣ ಮತ್ತು ಮಹಾಭಾರತ ಕಲಿಸುವುದಿಲ್ಲ !- ಎನ್. ಸಿ.ಈ.ಆರ್‌.ಟಿ

ಈ ಸಂದರ್ಭದಲ್ಲಿ ಶಿಫಾರಸಿನ ವಾರ್ತೆಯನ್ನು ತಳ್ಳಿ ಹಾಕಿದ ಎನ್. ಸಿ.ಈ.ಆರ್‌.ಟಿ. !

ನವ ದೆಹಲಿ – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್ತಿನಿಂದ (‘ಎನ್.ಸಿ.ಈ.ಆರ್.ಟಿ. ಯಿಂದ) ಅದರ ಶಾಲೆಯ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತದ ಸಮಾವೇಶ ಮಾಡಲಾಗುವುದೆಂದು ನೀಡಿರುವ ವಾರ್ತೆ ಸುಳ್ಳು ಎಂದು ಹೇಳಿದೆ. ಒಂದು ಸಮಿತಿಯು ‘ಎನ್.ಸಿ.ಈ.ಆರ್.ಟಿ.’ ಗೆ ಈ ಸಂದರ್ಭದಲ್ಲಿ ಶಿಫಾರಸು ಮಾಡಿದೆ ಎಂದು ವಾರ್ತೆ ಪ್ರಕಟವಾಗಿತ್ತು. ಇತಿಹಾಸಕಾರ ಮತ್ತು ನಿವೃತ್ತ ಪ್ರಾ. ಸಿ.ಐ. ಆಯ್ಜಾಕ್ ಇವರ ನೇತೃತ್ವದಲ್ಲಿನ ಸಾಮಾಜಿಕ ವಿಜ್ಞಾನ ಸಮಿತಿಯು ಈ ಶಿಫಾರಸು ಮಾಡಿತ್ತು. ‘ಎನ್.ಸಿ.ಈ.ಆರ್.ಟಿ.’ಯು, ಅಂತಹ ಯಾವುದೇ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಪ್ರಾ. ಆಯ್ಜಾಕ್ ಇವರು ಏನು ಹೇಳಿದ್ದಾರೆ ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಹೇಳಿದೆ.

ಸಂಪಾದಕರ ನಿಲುವು

* ಈ ರೀತಿಯ ಪ್ರಕಟಿಸಿ ಕೆಲವು ದಿನಗಳ ನಂತರ ‘ಎನ್.ಸಿ.ಇ.ಆರ್‌.ಟಿ.’ ಎಚ್ಚರಗೊಂಡಿದೆಯೇ ? ಈ ಸಂದರ್ಭದಲ್ಲಿ ಕೇಂದ್ರ ಸರಕಾರವು ದೇಶದಲ್ಲಿನ ೧೦೦ ಕೋಟಿ ಹಿಂದುಗಳಿಗೆ ಯೋಗ್ಯವಾದ ಸ್ಪಷ್ಟೀಕರಣ ನೀಡುವುದು ಆವಶ್ಯಕವಾಗಿದೆ!