`ಸರಕಾರ ರಾಮಾಯಣ ಮತ್ತು ಮಹಾಭಾರತವನ್ನು ಕಲಿಸುವ ಮೂಲಕ ವಸ್ತ್ರಾಹರಣದಂತಹ ಘಟನೆಗಳನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದೆಯೇ?’ – ಸ್ವಾಮಿ ಪ್ರಸಾದ್ ಮೌರ್ಯ

ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುವ ಹೇಳಿಕೆ !

ಸ್ವಾಮಿ ಪ್ರಸಾದ್ ಮೌರ್ಯ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ’ (ಎನ್.ಸಿ.ಇ.ಆರ್.ಟಿ) ಮತ್ತು ಸರಕಾರ ರಾಮಾಯಣ ಮತ್ತು ಮಹಾಭಾರತವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿ, ಸೀತೆ, ಶೂರ್ಪನಖಾ, ದ್ರೌಪದಿಯಂತಹ ಮಹಾನ ದೇವತೆಗಳ ಅಗ್ನಿಪರೀಕ್ಷೆಯ ನಂತರವೂ ಮಾಡಿರುವ ಪರಿತ್ಯಾಗ, ಮದುವೆಯ ಪ್ರಸ್ತಾಪದ ಬಗ್ಗೆ ಮೂಗು ಮತ್ತು ಕಿವಿ ಕತ್ತರಿಸುವುದು, ದ್ರೌಪದಿಯಂತಹ ಇತರ ದೇವತೆಗಳ ವಸ್ತ್ರಾಹರಣ ಈ ವಿಷಯಗಳನ್ನು ಪ್ರೋತ್ಸಾಹಿಸಲು ಬಯಸುತ್ತಿರುವಿರಾ ? ಎಂದು ರಾಜ್ಯದ ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ ಅವರು ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ. ‘ಎನ್‌.ಸಿ.ಇ.ಆರ್‌.ಟಿ.’ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಸೇರಿಸಲು ಶಿಫಾರಸು ಮಾಡಿರುವ ಘಟನೆಯ ಬಗ್ಗೆ ಮೌರ್ಯ ಅವರು ಟ್ವೀಟ್ ಮಾಡಿದ್ದಾರೆ.

ಮೌರ್ಯ ಅವರು ಟ್ವೀಟ್‌ನಲ್ಲಿ,

1. ಒಬ್ಬ ಸಹೋದರ ಇನ್ನೊಬ್ಬ ಸಹೋದರನೊಂದಿಗೆ ಜಗಳವಾಡಲು ಪ್ರಚೋದಿಸುವ ಕೆಲಸ ಮಾಡಿದನು, ಇನ್ನೊಬ್ಬನು ಸಹೋದರರು ಪರಸ್ಪರ ಜಗಳವಾಡುವಂತೆ ಮಾಡಿದನು. ಸರಕಾರ ಕುಟುಂಬದಲ್ಲಿ ಒಡಕನ್ನು ಪ್ರೋತ್ಸಾಹಿಸುವ ಪರವಾಗಿದೆಯೇ ? (ಸ್ವಾಮಿ ಪ್ರಸಾದ್ ಮೌರ್ಯ ಅವರು ಸಮಾಜ-ಸಮಾಜಗಳ ನಡುವೆ ಜಗಳ ಹುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಅರಿತುಕೊಂಡಿದ್ದಾರೆಯೇ ? ಹಾಗೆ ಮಾಡುವವರ ಅಂತ್ಯವೇನಾಗುತ್ತದೆ ?, ಎಂದು ಅವರಿಗೆ ಈ ಪುಸ್ತಕಗಳಿಂದ ಕಲಿಯಲು ಸಿಗುತ್ತದೆ ! – ಸಂಪಾದಕರು)

2. ಸಧ್ಯದ ಕಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋಮುಗಲಭೆ, ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಮಹಿಳೆಯರು ಶೋಷಣೆಗೆ ಒಳಗಾಗುತ್ತಿದ್ದಾರೆ. ಶಾಲಾ ಶುಲ್ಕವನ್ನು ಪಾವತಿಸದ ಮಕ್ಕಳನ್ನು ಥಳಿಸಲಾಗುತ್ತಿದೆ. ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯುತ್ತಿದೆ. ಅತ್ಯಾಚಾರದ ನಂತರ, ಅವರನ್ನು ಹತ್ಯೆ ಮಾಡಿ ಅವರನ್ನು ತುಂಡರಿಸಲಾಗುತ್ತದೆ. (ಇದಕ್ಕೆ ಇಲ್ಲಿಯವರೆಗಿನ ಎಲ್ಲ ಪಕ್ಷಗಳ ಆಡಳಿತಗಾರರೇ ಹೊಣೆಯಾಗಿದ್ದಾರೆ. ಇದನ್ನು ಮೌರ್ಯ ಏಕೆ ಹೇಳುವುದಿಲ್ಲ? – ಸಂಪಾದಕರು)

3. ಒಂದು ವೇಳೆ ಪಠ್ಯಕ್ರಮದಲ್ಲಿ ಬದಲಾವಣೆ ಆಗಬೇಕಾದರೆ ಈಗಿನ ದೇಶದ ವೀರಪುತ್ರರ, ರಾಷ್ಟ್ರನಾಯಕರ ಜೀವನ ಚರಿತ್ರೆಯನ್ನು ಕಲಿಸಬೇಕು. ನೇತಾಜಿ ಸುಭಾಷ ಚಂದ್ರ ಬೋಸ, ಸರ್ದಾರ ವಲ್ಲಭಭಾಯಿ ಪಟೇಲ, ರಾಣಿ ಲಕ್ಷ್ಮೀಬಾಯಿ, ಚಂದ್ರಶೇಖರ ಆಜಾದ, ಸರ್ದಾರ ಭಗತ ಸಿಂಗ ಮುಂತಾದ ಮಹಾನಾಯಕರನ್ನು ಸೇರಿಸಬೇಕು. (ಅವರ ಚಾರಿತ್ರ್ಯವನ್ನು ಕಲಿಸಲಾಗುತ್ತಿದೆ; ಆದರೆ ಶ್ರೀರಾಮ ಮತ್ತು ಶ್ರೀಕೃಷ್ಣನ ಚರಿತ್ರೆಯನ್ನು ಕಲಿಸಲಾಗುತ್ತಿಲ್ಲ, ಕಲಿಸುವ ಕಾರ್ಯ ಈಗ ನಡೆಯಲಿದೆ. ಇದರಿಂದ ಮೌರ್ಯರಂತಹವರಿಗೆ ಹೊಟ್ಟೆ ನೋವು ಬರುತ್ತಿದೆ ! – ಸಂಪಾದಕರು)

ಸಂಪಾದಕರ ನಿಲುವು

* ವಸ್ತ್ರಾಹರಣದಂತಹ ಘಟನೆಗಳನ್ನು ಮಾಡುವವರ ಅಂತ್ಯ ಏನಾಗುತ್ತದೆ ?, ಎನ್ನುವುದು ಇದರಿಂದ ಕಲಿಯಲು ಸಿಗಲಿದೆ. ಆಡಳಿತಗಾರರು ಹೇಗಿರಬೇಕು ? ಮತ್ತು ಹೇಗೆ ಇರಬಾರದು ?, ಎನ್ನುವುದು ಇದರಿಂದ ಕಲಿಯಲು ಸಿಗಲಿದೆ. ಯಾವುದೇ ಒಂದು ಘಟನೆಯನ್ನು ತಪ್ಪಾಗಿ ಅರ್ಥೈಸಿಕೊಂಡು, ಅದನ್ನು ಈ ರೀತಿ ವಿರೋಧಿಸುವವರು ಎಷ್ಟು ಅಪ್ರಬುದ್ಧ ಹೇಳಿಕೆಗಳನ್ನು ನೀಡುತ್ತಾರೆ ಎನ್ನುವುದು ಇದರಿಂದ ಗಮನಕ್ಕೆ ಬರುತ್ತದೆ. ಇಂತಹವರ ವಿರುದ್ಧ ಉತ್ತರ ಪ್ರದೇಶ ಸರಕಾರ ಕ್ರಮ ಕೈಗೊಂಡು ಜೈಲಿಗೆ ಅಟ್ಟಬೇಕು !

* ಮದರಸಾಗಳಲ್ಲಿ ಏನು ಕಲಿಸಲಾಗುತ್ತದೆ ? ಅಲ್ಲಿ ಕಲಿಯುವ ವಿದ್ಯಾರ್ಥಿಗಳು ಮುಂದೆ ದೇಶ ಮತ್ತು ಸಮಾಜಕ್ಕಾಗಿ ಏನು ಮಾಡುತ್ತಾರೆ ?, ಎಂಬುದರ ಬಗ್ಗೆ ಮೌರ್ಯ ಎಂದಾದರೂ ಬಾಯಿ ತೆರೆಯುವರೇ ?