
ಜಾಜಪುರ (ಒಡಿಶಾ) – ಇಲ್ಲಿನ ಸೂರ್ಯ ನಾರಾಯಣ ನೋಡಲ ಹಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ರದ್ರ ನಾರಾಯಣ ಎಂಬ ಹುಡುಗನಿಗೆ ಶಿಕ್ಷೆಯೆಂದು ಬಸ್ಕಿ ಹೊಡೆಯಲು ಹೇಳಲಾಗಿತ್ತು. ಬಸ್ಕಿ ಹೊಡೆಯುತ್ತಾ ಮೂರ್ಛೆ ಹೋದನು. ಅವನನ್ನು ಮೊದಲು ಸ್ಥಳೀಯ ಆಸ್ಪತ್ರೆಗೆ ಮತ್ತು ನಂತರ ಕಟಕ್‌ನ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಬಾಲಕನು ಮರಣ ಹೊಂದಿದ್ದಾನೆಂದು ಎಂದು ವೈದ್ಯರು ತಿಳಿಸಿದರು. ಅವನು ತರಗತಿಯ ಹೊರಗೆ ಆಟವಾಡುತ್ತಿದ್ದ ಕಾರಣ ಅವನಿಗೆ ಈ ಶಿಕ್ಷೆಯನ್ನು ನೀಡಲಾಗಿತ್ತು. ಹುಡುಗನ ತಂದೆ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ; ಆದರೆ ರಸೂಲಪುರ ಸಹಾಯಕ ಸಮೂಹ ಶಿಕ್ಷಣಾಧಿಕಾರಿ ಪ್ರವಂಜನ್ ಪಾಟಿಯವರು ಶಾಲೆಗೆ ಭೇಟಿ ನೀಡಿ ಘಟನೆ ಕುರಿತು ವಿಚಾರಣೆ ನಡೆಸಿದ್ದಾರೆ.
FIR Against Kunal Kamra : ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಸ್ಯ ಕಲಾವಿದ ಕುಣಾಲ ಕಮ್ರಾ ವಿರುದ್ಧ ದೂರು ದಾಖಲು!
Fake Currency Racket : ಜಾಲದಿಂದ ನಕಲಿ ಭಾರತೀಯ ಕರೆನ್ಸಿ ನೋಟುಗಳ ಮುದ್ರಣ ಪತ್ತೆ!
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath