ಹಿಂದು ಹಿತಾಸಕ್ತಿಯ ಹೇಳಿಕೆ ನೀಡಿದ್ದರಿಂದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರನ್ನು ಟೀಕಿಸಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರಿಗೆ ಸರಮಾ ಅವರ ಪ್ರತ್ಯುತ್ತರ !
ಜೈಪುರ (ರಾಜಸ್ಥಾನ) – ಒಂದು ವೇಳೆ ನಾನು ಭಾರತದಲ್ಲಿ ಹಿಂದೂಗಳ ಬಗ್ಗೆ ಮಾತನಾಡದಿದ್ದರೆ, ಬಾಬರ್ ಮತ್ತು ಔರಂಗಜೇಬ್ ಬಗ್ಗೆ ಮಾತನಾಡಬೇಕೆ ? ಭಾರತದಲ್ಲಿ ಹಿಂದೂಹಿತದ ಅರ್ಥವೇನು? ಹಿಂದೂಗಳು ‘ಇಡೀ ಜಗತ್ತೇ ನನ್ನ ಕುಟುಂಬವಾಗಿದೆ’ ಎನ್ನುತ್ತಾರೆ. ಒಂದು ವೇಳೆ ಇಂತಹ ಸಂಸ್ಕೃತಿಯನ್ನು ಹಾಡಿ ಹೊಗಳದಿದ್ದರೆ ಯಾರನ್ನು ಹಾಡಿ ಹೊಗಳಬೇಕು ? ನನ್ನ ಉಸಿರು ಇರುವವರೆಗೂ ನಾನು ಹಿಂದೂಗಳನ್ನು ಹಾಡಿ ಹೊಗುಳುತ್ತಲೇ ಇರುತ್ತೇನೆ ಎನ್ನುವ ಶಬ್ದಗಳಲ್ಲಿ ಅಸ್ಸಾಂ ಭಾಜಪ ಸರಕಾರದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪ್ರಿಯಾಂಕಾ ವಾದ್ರಾ ಅವರಿಗೆ ಪ್ರತ್ಯುತ್ತರ ನೀಡಿದರು. ಪ್ರಿಯಾಂಕಾ ವಾದ್ರಾ, ಅವರು ಇಲ್ಲಿ ವಿಧಾನಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಭಾಜಪ ಧರ್ಮದ ಹೆಸರಿನಲ್ಲಿ ಮತ ಕೇಳುತ್ತಿದೆ, ಸರಮಾ ಹಿಂದೂಗಳ ಹಿತದ ಕಾರ್ಯಗಳನ್ನು ಮಾಡುತ್ತಾರೆ ಎಂದು ಟೀಕಿಸಿದ್ದರು.
ಸಂಪಾದಕೀಯ ನಿಲುವುಕಾಂಗ್ರೆಸ್ ಮ. ಗಾಂಧೀಜಿಯವರ ಉದಯವಾದಾಗಿನಿಂದ ಮುಸಲ್ಮಾನರ ಹಿತದ ಕೆಲಸಗಳನ್ನು ಮಾಡುತ್ತಾ, ಹಿಂದೂಗಳಿಗೆ ದ್ರೋಹ ಬಗೆದಿದ್ದು, ಯಾರಾದರೂ ಹಿಂದೂಗಳ ಹಿತದ ವಿಷಯವನ್ನು ಮಾತನಾಡಿದರೆ ಕಾಂಗ್ರೆಸ್ಸಿಗರಿಗೆ ಮತ್ತು ಗಾಂಧಿ ಕುಟುಂಬದವರಿಗೆ ಉರಿ ಬೀಳುತ್ತದೆ ! |