೩೬ ಗಂಟೆಗಳ ಒಳಗೆ ‘ಡೀಫ್ ಫೇಕ್ ವೀಡಿಯೋ‘ ಅನ್ನು ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಿ !

ಕೇಂದ್ರ ಸರಕಾರದಿಂದ ಸಾಮಾಜಿಕ ಜಾಲತಾಣಗಳಿಗೆ ಎಚ್ಚರಿಕೆ !

(ಡೀಫ್ ಫೇಕ್ ಎನ್ನುವುದು AI(Artificial intelligence) ತಂತ್ರಜ್ಞಾನದ ಮೂಲಕ ವ್ಯಕ್ತಿಯ ಮುಖವನ್ನು ಬದಲಾಯಿಸಿ ವಂಚನೆ ಮಾಡುವುದು)

ನವದೆಹಲಿ – ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು ‘ಡೀಫ್ ಫೇಕ್ ವಿಡಿಯೋ‘ ಪ್ರಸಾರ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ. ಫೇಸ್ ಬುಕ್, ಗೂಗಲ್ ಮತ್ತು ಯೂಟ್ಯೂಬ್ ನಿಂದ ‘ಡೀಫ್ ಫೇಕ್ ವೀಡಿಯೋಗಳನ್ನು’ ಅಳಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜೀವ ಚಂದ್ರಶೇಖರ ಅವರು ವಾರ್ತಾ ವಾಹಿನಿಗಳೊಂದಿಗೆ ಮಾತನಾಡುತ್ತಾ, ಇದು ತುಂಬಾ ಗಂಭೀರವಾದ ವಿಷಯವಾಗಿದೆ. ಹಾಗಾಗಿ ಇದರ ಗಂಭೀರತೆಯನ್ನು ಪರಿಗಣಿಸಿ ಈ ವೀಡಿಯೋಗಳನ್ನು ಪ್ರಸಾರ ಮಾಡುವವರಿಗೆ ೩೬ ಗಂಟೆಗಳ ಕಾಲಾವಕಾಶ ನೀಡಲಾಗಿದೆ. ಈ ಸಮಯದಲ್ಲಿ ಅವರು ಈ ವೀಡಿಯೋಗಳನ್ನು ಅಳಿಸಬೇಕು. ಹಾಗೆ ಮಾಡದ ಸಾಮಾಜಿಕ ಜಾಲತಾಣಗಳ ವಿರುದ್ಧ ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.