ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಉಪಸ್ಥಿತಿ !
ಪೊಲೀಸ್ ಮತ್ತು ಸರಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ ! |
ಕೋಲಕಾತಾ (ಬಂಗಾಳ) – ಡಿಸೆಂಬರ್ ೨೪ ರಂದು ಇಲ್ಲಿ ಗೀತಾ ಜಯಂತಿಯ ಪ್ರಯುಕ್ತ ೧ ಲಕ್ಷ ಜನರು ಸಾಮೂಹಿಕ ಗೀತಾ ಪಾರಾಯಣ ಮಾಡುವರು. ಈ ಕಾರ್ಯಕ್ರಮಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೂ ಕೂಡ ಆಮಂತ್ರಣ ನೀಡಲಾಗಿದ್ದು ಅವರು ಅದನ್ನು ಸ್ವೀಕರಿಸಿದ್ದಾರೆ, ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ. ಹೀಗೆ ಇದ್ದರೂ ಕೊಲಕಾತಾ ಪೋಲೀಸರು ಮತ್ತು ಸರಕಾರದಿಂದ ಇದಕ್ಕೆ ಇನ್ನೂ ಅನುಮತಿ ನೀಡಿಲ್ಲ. ಈ ಕಾರ್ಯಕ್ರಮ ಕ್ರಿಸ್ಮಸ್ ಹಬ್ಬದ ಹಿಂದಿನ ಸಂಜೆ ಆಗಿದ್ದರಿಂದ ಅನುಮತಿ ನೀಡಲು ಹಿಂದೆ ಮುಂದೆ ನೋಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ೩ ಹಿಂದುತ್ವನಿಷ್ಠ ಸಂಘಟನೆಗಳಿಂದ ಈ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ. ಇದಕ್ಕಾಗಿ ಗೀತಾ ಪಾರಾಯಣ ಸಮಿತಿ ರಚಿಸಲಾಗಿದೆ. ೧ ಲಕ್ಷದ ೨೦ ಸಾವಿರ ಜನರು ಕಾರ್ಯಕ್ರಮದಲ್ಲಿ ಸಹಭಾಗಿ ಆಗುವದಕ್ಕಾಗಿ ನೋಂದಣಿ ಮಾಡಿದ್ದಾರೆ. ಇಲ್ಲಿಯ ಬ್ರಿಗೇಡ್ ಮೈದಾನದಲ್ಲಿ ಈ ಪಾರಾಯಣೆದ ಆಯೋಜನೆ ಮಾಡಲಾಗಿದೆ. ಬಂಗಾಲದ ಭಾಜಪ ಅಧ್ಯಕ್ಷ ಸುಕಾಂತ ಮಜುಮದಾರ ಇವರ ನೇತೃತ್ವದಲ್ಲಿ ಸಂತರ ಪ್ರತಿನಿಧಿಮಂಡಳಿಯಿಂದ ಪ್ರಧಾನಮಂತ್ರಿ ಇವರನ್ನು ಭೇಟಿ ಮಾಡಿ ಅವರಿಗೆ ಕಾರ್ಯಕ್ರಮಕ್ಕಾಗಿ ಆಮಂತ್ರಿಸಿದ್ದಾರೆ.
‘ಧಾರ್ಮಿಕ ಸೌಹಾರ್ದತೆ ಹಾಳು ಮಾಡುವ ಪ್ರಯತ್ನವಂತೆ ! – ತೃಣಮೂಲ ಕಾಂಗ್ರೆಸ್
‘ಗೀತಾ ಪಾರಾಯಣ ಧಾರ್ಮಿಕ ಸೌಹಾರ್ದತೆ ಹಾಳು ಮಾಡುತ್ತದೆ’, ಎಂದು ಹೇಳುವ ತೃಣಮೂಲ ಕಾಂಗ್ರೆಸ್ ಜಿಹಾದಿ ಸಂಘಟನೆ ಆಗಿದೆಯೇ ? ಇಂತಹ ಪ್ರಶ್ನೆ ಹಿಂದುಗಳ ಮನಸ್ಸಿನಲ್ಲಿ ಉದ್ಭವಿಸುತ್ತಿದೆ ! ತೃಣಮೂಲ ಕಾಂಗ್ರೆಸ್ಸಿಗೆ ಅಧಿಕಾರದಲ್ಲಿ ಕೂಡಿಸಿರುವ ಬಂಗಾಲದಲ್ಲಿನ ಹಿಂದುಗಳಿಗೆ ಇದು ಒಪ್ಪಿಗೆ ಇದೆಯೇ ?
ತೃಣಮೂಲ ಕಾಂಗ್ರೆಸ್, ‘ಈ ಕಾರ್ಯಕ್ರಮದ ಆಯೋಜನೆ ಧಾರ್ಮಿಕ ಸೌಹಾರ್ದತೆ (ಸಾಮರಸ್ಯ) ಹಾಳು ಮಾಡುವ ಪ್ರಯತ್ನ ಆಗಿದೆ.’ ಎಂದು ಟೀಕಿಸಿದರೇ, ಭಾಜಪ, ಇದು ಒಂದು ಹಿಂದೂ ಸಂಸ್ಕೃತಿಗೆ ಮತ್ತು ಧರ್ಮಕ್ಕೆ ಗೌರವ ನೀಡುವ ರೀತಿಯಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವು
ಗೀತಾ ಪಾರಾಯಣದ ಕಾರ್ಯಕ್ರಮಕ್ಕೆ ಅನುಮತಿ ನೀಡುವುದರಲ್ಲಿ ವಿಳಂಬ ಮಾಡುತ್ತಿರುವ ತೃಣಮೂಲ ಕಾಂಗ್ರೆಸ್ ಸರಕಾರದ ರಾಜ್ಯದಲ್ಲಿ ಪೊಲೀಸರು ಈದ್ ಮತ್ತು ಕ್ರಿಸ್ಮಸ್ ಕಾರ್ಯಕ್ರಮಗಳಿಗೆ ಈ ರೀತಿ ವಿಳಂಬ ಮಾಡುವರೆ ? |