ಅನೇಕ ದೇಶದಲ್ಲಿ ನಿಷೇಧಿಸಲ್ಪಟ್ಟ ಕಟ್ಟರ ಮುಸಲ್ಮಾನ ನಾಯಕರು ಮತ್ತು ಮೌಲ್ವಿಗಳು ಈ ಕಾರ್ಯಕ್ರಮದ ನೆಪದಿಂದ ಬರುವುದರಿಂದ ಈ ನಿರ್ಧಾರ !
(‘ಇಜ್ತಿಮಾ’ ಎಂದರೆ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಒಟ್ಟಾಗುವುದು)
ಕಠ್ಮಾಂಡು (ನೇಪಾಳ) – ನೇಪಾಳ ಸರಕಾರವು ‘ಇಜ್ತಿಮಾ’ ಈ ಮುಸಲ್ಮಾನರ ವಾರ್ಷಿಕ ಧಾರ್ಮಿಕ ಸಭೆಯನ್ನು ರದ್ದು ಪಡಿಸಿದೆ. ಧಾರ್ಮಿಕ ಸಂವೇದನಾಶೀಲತೆಯ ಕಾರಣ ಹೇಳುತ್ತಾ ಗೃಹ ಸಚಿವಾಲಯದಿಂದ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಸರಕಾರವು ಈ ಸಭೆಯಗಾಗಿ ನಿರ್ಮಿಸಲಾಗಿರುವ ಟೆಂಟುಗಳು ಮತ್ತು ಇತರ ಸಿದ್ಧತೆಗಳನ್ನು ೨೪ ಗಂಟೆಗಳಲ್ಲಿ ತೆರವುಗೊಳಿಸುವಂತೆ ಹಾಗೂ ಅಲ್ಲಿ ತಲುಪಿದ್ದ ಮುಸಲ್ಮಾನರನ್ನು ಹಿಂತಿರುಗಿ ಹೋಗಲು ಆದೇಶಿಸಿದೆ. ಜಿಲ್ಲಾಡಳಿತಕ್ಕೆ, ಈ ಕಾರ್ಯಕ್ರಮದ ಹೆಸರಿನಲ್ಲಿ ಭಾರತ ಸಹಿತ ಅನೇಕ ದೇಶಗಳು ಅವರ ದೇಶದಲ್ಲಿ ಬರಲು ನಿಷೇಧಿಸಿದ್ದ ಕೆಲವು ಕಟ್ಟರ ಮುಸಲ್ಮಾನ ಧಾರ್ಮಿಕ ನಾಯಕರು ಮತ್ತು ಮೌಲ್ಯಗಳು ಬರುವ ಮಾಹಿತಿ ಸಿಕ್ಕಿತ್ತು.
೧. ನೇಪಾಳದ ಪೂರ್ವ ಭಾಗದಲ್ಲಿನ ಸುನಸರಿ ಜಿಲ್ಲೆಯಲ್ಲಿನ ದುಹಬಿ ಮತ್ತು ಇಟಹರಿ ಪ್ರದೇಶಗಳಲ್ಲಿ ನವಂಬರ್ ೨೧ ರಿಂದ ೨೩ ರ ವರೆಗೆ ಸಭೆಯ ಆಯೋಜನೆ ಮಾಡಲಾಗಿತ್ತು. ಇದಕ್ಕಾಗಿ ಸುಮಾರು ೮೦ ಎಕರೆ ಭೂಮಿಯಲ್ಲಿ ಟೆಂಟ್ ಹಾಕಲಾಗಿತ್ತು. ಈ ಸಭೆಗಾಗಿ ಸುಮಾರು ೫೦ ಸಾವಿರ ಜನರು ಭಾಗವಹಿಸುವವರಿದ್ದರು. ಅವರ ಸಭೆಯ ವ್ಯವಸ್ಥೆ ಮಾಡಲಾಗಿತ್ತು. ಜಗತ್ತಿನಾದ್ಯಂತದ ಅನೇಕ ಇಸ್ಲಾಮಿ ದೇಶಗಳಿಂದ ಜನರನ್ನು ಕರೆಸಲಾಗಿತ್ತು.
೨. ಧಾರ್ಮಿಕ ಮಟ್ಟದಲ್ಲಿ ಸೂಕ್ಷ್ಮ ಪ್ರದೇಶವಾಗಿರುವ ಸುನಸರಿ ಜಿಲ್ಲೆಯಲ್ಲಿ ಮುಸಲ್ಮಾನರ ಬೃಹತ್ ಆಯೋಜನೆಯಿಂದ ಕೇವಲ ನೇಪಾಳ ಅಷ್ಟೇ ಅಲ್ಲದೆ, ಭಾರತದ ಗಡಿಯಲ್ಲಿ ಕೂಡ ಧಾರ್ಮಿಕ ಭಾವನೆ ಪ್ರಚೋದಿಸುವ ಸಾಧ್ಯತೆಯಿಂದ ಈ ಕಾರ್ಯಕ್ರಮ ರದ್ದು ಪಡಿಸಲಾಗಿದೆ.
೩. ಸುನಸರಿಯ ಜಿಲ್ಲಾಧಿಕಾರಿ ಹುಮಕಲಾ ಪಾಂಡೆ ಇವರು, ಮುಸಲ್ಮಾನರ ಈ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ಗೃಹ ಸಚಿವಾಲಯಕ್ಕೆ ಪತ್ರ ಕಳುಹಿಸಿ ಆಹ್ವಾನಿತರ ಬಗ್ಗೆ ಹೇಳುತ್ತಾ ಸಲಹೆ ಕೇಳಲಾಗಿತ್ತು. ಪ್ರಕರಣದ ಗಾಂಭೀರ್ಯತೆ ಗಮನಿಸಿ ಅವರು ಈ ಕಾರ್ಯಕ್ರಮ ಯಾವುದೇ ಪರಿಸ್ಥಿತಿಯಲ್ಲಿ ನಡೆಯಬಾರದೆಂದು ಹೇಳಿದರು. ಅದರ ನಂತರ ನಾವು ಕಾರ್ಯಕ್ರಮ ರದ್ದು ಪಡಿಸಿರುವುದಾಗಿ ಆಯೋಜಕರಿಗೆ ಹೇಳಿದೆವು, ಎಂದು ಹೇಳಿದರು.
ಸಂಪಾದಕೀಯ ನಿಲುವು‘ನೇಪಾಳ ಸರಕಾರದ ಶ್ಲಾಘನೀಯ ನಿರ್ಣಯ !’ ಎಂದೇ ಹೇಳಬೇಕಾಗುವುದು ! ಬಹುಸಂಖ್ಯಾತ ಹಿಂದೂ ಇರುವ ಮತ್ತು ಹಿಂದೆ ಜಗತ್ತಿನಲ್ಲಿ ಏಕೈಕ ಹಿಂದೂ ರಾಷ್ಟ್ರ ಆಗಿದ್ದ ನೇಪಾಳವು ಈ ರೀತಿಯ ನಿರ್ಣಯ ತೆಗೆದುಕೊಳ್ಳುವುದು ಎಂದರೆ ಸದ್ಯದ ಪರಿಸ್ಥಿತಿಯಲ್ಲಿ ಶ್ಲಾಘನೀಯವೇ ಆಗಿದೆ ! |