ಸರಕಾರದಿಂದ ಜಗದ್ಗುರು ಪರಮಹಂಸ ಆಚಾರ್ಯರ ಕಡೆಗೆ ದುರ್ಲಕ್ಷ !
ಅಯೋಧ್ಯೆ (ಉತ್ತರಪ್ರದೇಶ) – ಇಲ್ಲಿಯ ಸಂತ ಜಗದ್ಗುರು ಪರಮಹಂಸ ಆಚಾರ್ಯ ಇವರು ಭಾರತವನ್ನು ‘ಹಿಂದೂ ರಾಷ್ಟ್ರ’ ಘೋಷಿಸಲು ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಅವರು ಈ ಉಪವಾಸ ಆರಂಭಿಸಿ ೧೦ ದಿನ ಕಳೆದಿದೆ ಆದರೂ ಉತ್ತರಪ್ರದೇಶ ಮತ್ತು ಕೇಂದ್ರ ಸರಕಾರ ಈ ಬಗ್ಗೆ ಕಡೆಗೆ ಗಮನ ನೀಡಲಿಲ್ಲ. ಆಚಾರ್ಯರನ್ನು ಬೆಂಬಲಿಸಿ ಚಲನಚಿತ್ರ ನಟ ಮುಕೇಶ ಖನ್ನಾ ಇವರು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿರುವ ವಿಡಿಯೋದಿಂದ ಈ ಘಟನೆ ಬೆಳಕಿಗೆ ಬಂದಿದೆ.
ಕಳೆದ ವರ್ಷ ಆಚಾರ್ಯರು ಭಾರತವನ್ನು ಸಾಂವಿಧಾನಿಕ ಮಟ್ಟದಲ್ಲಿ ‘ಹಿಂದೂ ರಾಷ್ಟ’ ಘೋಷಿಸಲು ಆಗ್ರಹಿಸಿದ್ದರು. ‘ನವಂಬರ್ ೭, ೨೦೨೩ ದಿನದವರೆಗೆ ಕೇಂದ್ರ ಸರಕಾರ ಯಾವುದೇ ನಿರ್ಣಯ ತೆಗೆದುಕೊಳ್ಳದೆ ಇದ್ದರೆ ಉಪವಾಸ ಸತ್ಯಾಗ್ರಹ ನಡೆಸಿ ಜಲ ಸಮಾಧಿ ತೆಗೆದುಕೊಳ್ಳುವೆನು’ ಹೀಗೂ ಕೂಡ ಅವರು ಆ ಸಮಯದಲ್ಲಿ ಹೇಳಿದ್ದರು. ಸರಕಾರದಿಂದ ಅವರ ಬೇಡಿಕೆ ಪೂರ್ಣಗೊಳಿಸದೆ ಇರುವುದರಿಂದ ಅವರು ಅವರ ನಿವಾಸ ಸ್ಥಳದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ನನ್ನ ಯೋಗ ಕ್ಷೇಮ ವಿಚಾರಿಸುವುದಕ್ಕಾಗಿ ಸರಕಾರಿ ಅಧಿಕಾರಿ ಬಂದಿಲ್ಲ ! – ಪರಮಹಂಸ ಆಚಾರ್ಯ
ಜಗದ್ಗುರು ಪರಮಹಂಸ ಆಚಾರ್ಯ ಇವರು, ಕಳೆದ ೯ ದಿನಗಳಲ್ಲಿ ನನ್ನ ತೂಕ ಸುಮಾರು ಏಳು ಕೇಜಿ ಕಡಿಮೆ ಆಗಿದೆ. ನೀರು ಕುಡಿಯದೆ ನಾನು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು ಕೂಡ ನನ್ನ ಯೋಗ ಕ್ಷೇಮ ಕೇಳುವುದಕ್ಕಾಗಿ ಯಾವ ಸರಕಾರಿ ಅಧಿಕಾರಿ ಅಥವಾ ಜನಪ್ರತಿನಿಧಿಗಳು ಬಂದಿಲ್ಲ ಎಂದು ಹೇಳಿದರು.
ಸಂಪಾದಕೀಯ ನಿಲುವುಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರ ಉತ್ತರ ಪ್ರದೇಶದಲ್ಲಿ ಓರ್ವ ಸಂತರು ಈ ರೀತಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವಾಗ ಅವರ ಸರಕಾರದಲ್ಲಿನ ಪ್ರತಿನಿಧಿ ಅವರ ಬಳಿ ಹೋಗಿ ಅವರ ಯೋಗ ಕ್ಷೇಮ ವಿಚಾರಿಸಬೇಕು ಮತ್ತು ಉಪವಾಸ ಸತ್ಯಾಗ್ರಹ ನಿಲ್ಲಿಸಲು ಪ್ರಾರ್ಥಿಸಿ ಅವರ ಬೇಡಿಕೆ ಪೂರ್ಣಗೊಳಿಸುವುದಕ್ಕಾಗಿ ಪ್ರಯತ್ನಿಸಬೇಕೆಂದು ಹಿಂದುಗಳಿಗೆ ಅನಿಸುತ್ತದೆ ! ನಿಜವೆಂದರೆ ಹಿಂದುಗಳಿಗೆ ಮತ್ತು ಅವರ ಸಂತರಿಗೆ ಹಿಂದೂ ರಾಷ್ಟ್ರದ ಬೇಡಿಕೆ ಸಲ್ಲಿಸದೆ ಕೇಂದ್ರ ಸರಕಾರವೇ ಭಾರತವನ್ನು ‘ಹಿಂದೂ ರಾಷ್ಟ್ರ’ ಎಂದು ಘೋಷಿಸಬೇಕು ! |