ಮಹಾರಾಷ್ಟ್ರದಲ್ಲಿನ ಸಣ್ಣ ಮಕ್ಕಳಿಂದ ‘ಇಂಟರ್ನೆಟ್’ನ ಅತೀ ಹೆಚ್ಚು ಬಳಕೆ ! – ಸಮೀಕ್ಷೆ

  • ‘ಕ್ರೈ’ ಸಂಸ್ಥೆಯ ಸಮೀಕ್ಷೆಯಿಂದ ಬಹಿರಂಗ

  • ಚಾಟ್ (ಸಂಭಾಷಣೆ) ಸೌಲಭ್ಯದ ಮೂಲಕ 6 ರಿಂದ 14 ವರ್ಷ ವಯಸ್ಸಿನ ಹುಡುಗ ಹುಡುಗಿಯರು ವಂಚನೆಗೆ ಒಳಗಾಗಿರುವುದೂ ಬಹಿರಂಗವಾಗಿದೆ !

ಮುಂಬಯಿ – ಮಹಾರಾಷ್ಟ್ರದಲ್ಲಿನ 14 ರಿಂದ 18 ವರ್ಷ ವಯಸ್ಸಿನ ಮಕ್ಕಳು ಇಂಟರ್ನೆಟ್ ಅನ್ನು ಅತಿ ಹೆಚ್ಚು ಬಳಸುತ್ತಿದ್ದಾರೆ ಎಂದು ಮಕ್ಕಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ‘ಕ್ರೈ’ ಎಂಬ ಸಂಸ್ಥೆಯ ಸಮೀಕ್ಷೆಯು ಬಹಿರಂಗಪಡಿಸಿದೆ. (ಇಂದಿನ ಯುಗದಲ್ಲಿ ತಂತ್ರಜ್ಞಾನವು ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಮಕ್ಕಳು ಅದರಲ್ಲಿ ಸಿಲುಕಿ ತಮ್ಮ ಜೀವನವನ್ನು ಹಾನಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕು! – ಸಂಪಾದಕರು) ಚಾಟ್ (ಸಂಭಾಷಣೆ) ಸೌಲಭ್ಯದ ಮಾಧ್ಯಮದಿಂದ 6 ರಿಂದ 14 ವರ್ಷದೊಳಗಿನ ಬಾಲಕ-ಬಾಲಕಿಯರು ವಂಚನೆಗೊಳಗಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಸಮೀಕ್ಷೆಯ ಪ್ರಕಾರ ಮಹಾರಾಷ್ಟ್ರದ ನಂತರ ಬಂಗಾಳ, ಮಧ್ಯಪ್ರದೇಶ ಮತ್ತು ಕರ್ನಾಟಕ ರಾಜ್ಯಗಳು ನಂತರದ ಸ್ಥಾನದಲ್ಲಿವೆ.

ಸಂಪಾದಕೀಯ ನಿಲುವು

ಪಾಲಕರು ತಮ್ಮ ಮಕ್ಕಳನ್ನು ಸಮಯಕ್ಕೆ ಸರಿಯಾಗಿ ನಿಗಾ ವಹಿಸಿ ಅವರನ್ನು ಎಚ್ಚರಿಸಬೇಕು !