Mamta Banerjee Cricket Orange Jersey : ಈಗ ಭಾರತೀಯ ಕ್ರಿಕೆಟ್ ಆಟಗಾರರು ಅಭ್ಯಾಸದ ಸಮಯದಲ್ಲಿ ಕೇಸರಿ ಬಟ್ಟೆ ಧರಿಸುತ್ತಾರೆ !

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಕೇಸರಿ ಬಣ್ಣದ ಕುರಿತು ಭಾಜಪದ ಹೆಸರು ಹೇಳದೆ ಟೀಕೆ !

ಕೋಲಕಾತಾ (ಬಂಗಾಳ) – ಈಗ ಎಲ್ಲವೂ ಕೇಸರಿ ಆಗುತ್ತಿದೆ. ನಮಗೆ ನಮ್ಮ ಭಾರತೀಯ ಕ್ರಿಕೆಟ್ ಆಟಗಾರರ ಅಭಿಮಾನ ಅನಿಸುತ್ತದೆ ಮತ್ತು ನನಗೆ, ಅವರು ವಿಶ್ವವಿಜಯಿ ಆಗುವವರು ಎಂಬುದು ವಿಶ್ವಾಸ ಇದೆ; ಆದರೆ ಯಾವಾಗ ಅವರು ಅಭ್ಯಾಸ ಮಾಡುತ್ತಾರೆ, ಆಗ ಅವರು ಉಡುಪು ಕೂಡ ಕೇಸರಿ ಆಗಿರುತ್ತದೆ. ಹಿಂದೆ ಅವರು ನೀಲಿ ಬಣ್ಣದ ಉಡುಪು ಧರಿಸುತ್ತಿದ್ದರು. ಈಗ ಮೆಟ್ರೋ ನಿಲ್ದಾಣಕ್ಕೆ ಕೂಡ ಕೇಸರಿ ಬಣ್ಣ ನೀಡಲಾಗಿದೆ, ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಜಗದಾತ್ರಿ ಪೂಜೆಯ ಉದ್ಘಾಟನಾ ಸಮಯದಲ್ಲಿ ಮಾತನಾಡುವಾಗ ಭಾಜಪಾವನ್ನು ಪರೋಕ್ಷವಾಗಿ ಟೀಕಿಸಿದರು.

ಮಮತಾ ಬ್ಯಾನರ್ಜಿ ಭಾಜಪದ ಹೆಸರು ಹೇಳದೆ ಮಾತು ಮುಂದುವರಿಸುತ್ತಾ, ಪುತ್ತಳಿ ನಿಲ್ಲಿಸಲು ನನ್ನ ಆಕ್ಷೇಪವಿಲ್ಲ, ಆದರೆ ಎಲ್ಲಕಡೆ ಕೇಸರಿ ಬಣ್ಣ ಬಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಅಧಿಕಾರ ಬರುತ್ತದೆ ಮತ್ತು ಹೋಗುತ್ತದೆ. ಈ ದೇಶ ಜನರದ್ದಾಗಿದೆ, ಕೇವಲ ಒಂದು ಪಕ್ಷದ ಅಲ್ಲ ಎಂದು ಹೇಳಿದರು.

ಮಮತಾ ಬ್ಯಾನರ್ಜಿಯ ಟೀಕೆಯ ಬಗ್ಗೆ ಭಾಜಪದಿಂದ ಪ್ರತ್ಯುತ್ತರ ನೀಡುವಾಗ, ಮಮತಾ ಬ್ಯಾನರ್ಜಿ ಇವರು ಸಂಪೂರ್ಣ ಕೋಲಕಾತಾಗೆ ನೀಲಿ ಮತ್ತು ಬಿಳಿಯ ಬಣ್ಣ ನೀಡಿದ್ದಾರೆ ಎಂದು ಹೇಳಿದೆ.

ಸಂಪಾದಕರ ನಿಲುವು

ನೇದರಲ್ಯಾಂಡ್ ಕ್ರಿಕೆಟ್ ಸಂಘದ ಮುಖ್ಯ ಸಮವಸ್ತ್ರ ಕೇಸರಿ ಬಣ್ಣದಾಗಿದೆ. ಹಾಗೂ ‘ಅದಕ್ಕೂ ಕೂಡ ಭಾಜಪದಿಂದ ಹಾಗೆ ಮಾಡಲು ಹೇಳಲಾಗಿದೆ’, ಎಂದು ಹೇಳಲು ಮಮತಾ ಬ್ಯಾನರ್ಜಿ ಹಿಂದೆ ಸರಿಯುವುದಿಲ್ಲ ಹೀಗೆ ಅವರ ಕೇಸರಿ ದ್ವೇಷದಿಂದ ಅನಿಸುತ್ತಿದೆ !

ಕೇಸರಿ ಬಣ್ಣದ ಕುರಿತು ಕಾಮಾಲೆಯಾಗಿರುವವರಿಗೆ ಈಗ ಹೀಗೆಯೇ ಅನಿಸುವುದು, ಆದ್ದರಿಂದ ಹಿಂದುಗಳು ಅದನ್ನು ದುರ್ಲಕ್ಷಿಸುವರು, ಇದು ಕೂಡ ಅಷ್ಟೇ ಸತ್ಯವಾಗಿದೆ !