ಎರ್ನಾಕುಲಂ (ಕೇರಳ) – ಇಲ್ಲಿನ ಪೋಕ್ಸೊ ನ್ಯಾಯಲಯವು ಬಿಹಾರದ ೫ ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿ ಕೊಂದ ಆರೋಪದ ಮೇಲೆ ಅಶಪಾಕ ಆಲಂಗೆ ಗಲ್ಲು ಶಿಕ್ಷೆ ವಿಧಿಸಿದೆ. ಈತನ ವಿರುದ್ಧ ಒಟ್ಟು ೧೬ ದೂರುಗಳು ದಾಖಲಾಗಿದ್ದವು. ಈ ಎಲ್ಲಾ ಅಪರಾಧಗಳಲ್ಲೂ ಅವನು ತಪ್ಪಿತಸ್ಥ ಎಂದು ಸಾಬೀತಾಯಿತು ಮತ್ತು ಅದರಲ್ಲಿನ ೫ ತಪ್ಪುಗಳಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು. ೨೮ ಜುಲೈ ೨೦೨೩ ರಂದು ಬಾಲಕಿಯ ಮೇಲೆ ಅತ್ಯಾಚಾರದ ಘಟನೆ ನಡೆದಿತ್ತು. ಅವನು ಈ ಬಾಲಕಿಗೆ ತಂಪು ಪಾನೀಯ ಕೊಡಿಸುವ ಅಮಿಷ ತೋರಿಸಿ ಅವಳನ್ನು ಅಪಹರಿಸಿ ಅತ್ಯಾಚಾರದ ನಂತರ ಹತ್ಯೆಮಾಡಿ ಅವಳ ಶವವನ್ನು ಚೀಲದಲ್ಲಿ ಕಟ್ಟಿ ಕಸದ ತೊಟ್ಟಿಯಲ್ಲಿ ಎಸೆದಿದ್ದನು.
ಸಂಪಾದಕೀಯ ನಿಲುವುಅತ್ಯಾಚಾರದ ಪ್ರತಿಯೊಂದು ಅಪರಾಧದಲ್ಲೂ ಇಂತಹ ಶಿಕ್ಷೆ ಕೂಡಲೇ ನೀಡಿದರೆ ಇಂತಹ ಘಟನೆಗಳು ಕಡಿಮೆಯಾಗಲು ಹೆಚ್ಚು ಸಮಯ ತಗಲುವುದಿಲ್ಲ! |