ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ಪಡೆದು 3 ಮುಸಲ್ಮಾನರನ್ನು ಬಂಧಿಸಿದರು!
ಮಹಾರಾಜಗಂಜ (ಉತ್ತರ ಪ್ರದೇಶ) – ಇಲ್ಲಿ ಶ್ರೀಲಕ್ಷ್ಮೀ-ಗಣೇಶನ ಮೂರ್ತಿಗಳ ವಿಸರ್ಜನೆಯ ಮೆರವಣಿಗೆಯನ್ನು ಮಹಂಮದಿ ಗ್ರಾಮದ ಮಸೀದಿಯ ಎದುರಿನಲ್ಲಿ ತಡೆಯಲು ಯತ್ನಿಸಿದಾಗ ಒತ್ತಡ ಉಂಟಾಗಿದೆ. ಈ ಘಟನೆಯು ನವೆಂಬರ್ 13 ರಂದು ನಡೆದಿದೆ. ಈ ಪ್ರಕರಣದಲ್ಲಿ ಪೊಲೀಸರು ತಕ್ಷಣ ಕ್ರಮಕೈಗೊಂಡು ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಂಡರು ಹಾಗೂ ಮೂವರನ್ನು ಬಂಧಿಸಿದರು. ಸದ್ಯ ಇಲ್ಲಿ ಪೊಲೀಸ ಬಂದೋಬಸ್ತು ಇಡಲಾಗಿದೆ.
ಹಿಂದೂಗಳು ದೀಪಾವಳಿಯ ನಿಮಿತ್ತ ಶ್ರೀಲಕ್ಷ್ಮೀ-ಗಣೇಶ ಮೂರ್ತಿಯ ಪೂಜೆ ಮಾಡಿದ್ದರು. ಮೂರ್ತಿಗಳನ್ನು ವಿಸರ್ಜನೆಗಾಗಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಮುಸಲ್ಮಾನರು ಮೆರವಣಿಗೆಯನ್ನು ಬೇರೆ ಮಾರ್ಗದಲ್ಲಿ ಒಯ್ಯುವಂತೆ ಹೇಳಿ ಘೋಷಣೆ ಕೂಗಲು ಪ್ರಾರಂಭಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿದೆ. ಇದರಲ್ಲಿ ಮಸೀದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮುಸಲ್ಮಾನರು ಸೇರಿರುವುದು ಕಂಡು ಬರುತ್ತಿದೆ. ಇದಕ್ಕೆ ಹೊರತಾಗಿಯೂ ಹಿಂದೂಗಳು ‘ಹರ ಹರ ಮಹಾದೇವ’ ಮತ್ತು ‘ಜೈ ಶ್ರೀ ರಾಮ’ ಎಂದು ಘೋಷಣೆ ಕೂಗುತ್ತಿರುವುದನ್ನು ಕಾಣಬಹುದು.
ಸಂಪಾದಕೀಯ ನಿಲುವು
|